Asianet Suvarna News Asianet Suvarna News

ಬೆಂಗಳೂರು: ಪ್ರೇಮಿಗಳ ಮಧ್ಯೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯ

ರಾಮೂರ್ತಿನಗರದ ಟಿಸಿ ಪಾಳ್ಯದಲ್ಲಿ ಒಂದೇ ರೂಂ ಬಾಡಿಗೆ ಪಡೆದು ಲಿವಿಂಗ್ ರಿಲೇಷನ್ ಶಿಪ್‌ನಲ್ಲಿದ್ದ ಪ್ರೇಮಿಗಳು  

Nepal Based Young Woman Killed in Bengaluru grg
Author
First Published Nov 30, 2022, 12:44 PM IST

ಬೆಂಗಳೂರು(ನ.30):  ಪ್ರೇಮಿಗಳ ನಡುವೆ ಶುರುವಾಗಿದ್ದು ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಮೂರ್ತಿನಗರದ ಟಿಸಿ ಪಾಳ್ಯದಲ್ಲಿ ಇಂದು(ಬುಧವಾರ) ನಡೆದಿದೆ. ನೇಪಾಳ ಮೂಲದ ಕೃಷ್ಣಕುಮಾರಿ(23) ಎಂಬಾಕೆಯೇ ಕೊಲೆಯಾದ ದುರ್ದೈವಿಯಾಗಿದ್ದಾಳೆ. 

ಪ್ರೀತಿಸಿದ ಕೃಷ್ಣಕುಮಾರಿಯನ್ನ ನೇಪಾಳ ಮೂಲದ ಸಂತೋಷ್ ದಾಮಿ(27) ಎಂಬಾತನ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕೊಲೆಯಾದ ಕೃಷ್ಣಕುಮಾರಿ ನಗರದ ಹೊರಮಾವು ಯೂನಿಸೆಕ್ಸ್ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದಳು. ಆರೋಪಿ ಸಂತೋಷ್ ದಾಮಿ ಟಿಸಿ ಪಾಳ್ಯದಲ್ಲಿ ಬಾರ್ಬರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂತ ತಿಳಿದು ಬಂದಿದೆ. 

35 ಅಲ್ಲ 36 ಪೀಸ್ ಮಾಡ್ಬೋದು, ಶ್ರದ್ಧಾ ಕೊಲೆ ಸಮರ್ಥಿಸಿ ಹೇಳಿಕೆ ನೀಡಿದ ವ್ಯಕ್ತಿ ಅರೆಸ್ಟ್!

ಇಬ್ಬರಿಗೂ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ರಾಮೂರ್ತಿನಗರದ ಟಿಸಿ ಪಾಳ್ಯದಲ್ಲಿ ಇಬ್ಬರೂ ಒಂದೇ ರೂಂ ಬಾಡಿಗೆ ಪಡೆದು ಲಿವಿಂಗ್ ರಿಲೇಷನ್ ಶಿಪ್‌ನಲ್ಲಿದ್ದರು. ಇಂದು ಬೆಳಿಗ್ಗೆ ಇಬ್ಬರ ನಡುವೆ ಜಗಳವಾಗಿದೆ, ಜಗಳ ತಾರಕ್ಕೇರಿದ್ದು ಕೃಷ್ಣಕುಮಾರಿಯನ್ನ ಸಂತೋಷ್ ದಾಮಿ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ರಾಮೂರ್ತಿನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.
 

Follow Us:
Download App:
  • android
  • ios