ಚೆನ್ನೈ(ಜ.  31)  ವೆಬ್ ಡಿಸೈನಿಂಗ್ ಫರ್ಮ್  ನಡೆಸುತ್ತಿದ್ದ ವ್ಯಕ್ತಿಯೊಬ್ಬ ಖತರ್ ನಾಕ್ ಕೆಲಸ  ಮಾಡಿದ್ದಾನೆ.   ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಿಂದ ಘಟನೆ ವರದಿಯಾಗಿದೆ.  ವೆಬ್ ಡಿಸೈನಿಂಗ್ ಸೆಂಟರ್ ನಡೆಸುತ್ತಿದ್ದ  29 ವರ್ಷದ  ವ್ಯಕ್ತಿ  ಮಹಿಳೆಯರ ಟಾಯ್ಲೆಟ್ ನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದ. 

ಪಲ್ಲಿವಲಿಯ ನಿವಾಸಿ ಎಸ್ ಸಂಜು ಕಳೆದ ನಾಲ್ಕು ವರ್ಷಗಳಿಂದ Z ಥ್ರೀ ಇನ್ಫೋಟೆಕ್ ಎಂಬ ವೆಬ್ ಡಿಸೈನಿಂಗ್ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದ.  ಒಂದೂವರೆ ತಿಂಗಳ ಹಿಂದೆ ನಾಗರ್‌ಕೋಯಿಲ್ ನಲ್ಲಿ ಹೊಸ ಕಚೇರಿ ಮಾಡಿದ. ಮೂವರು ಮಹಿಳೆಯರನ್ನು ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದ.

ಎಟಿಎಂ ಎದುರು ಮಾಟಗಾತಿ ಸುಂದರಿ.. ಮಂತ್ರಕ್ಕೆ ಬಂದಿದ್ದು 20 ಲಕ್ಷ!

ಈತನ ಕಚೇರಿಯಲ್ಲಿ ಎರಡು ಟಾಯ್ಲೆಟ್ ಗಳಿವಚೆ. ಪುರಷರಿಗೊಂದು-ಮಹಿಳೆಯರಿಗೊಂದು ಮೀಸಲಿದ್ದವು. ಹೊಸದಾಗಿ ನೇಮಕವಾದ ಮಹಿಳಾ ಸಿಬ್ಬಂದಿ  ಶುಕ್ರವಾರ ಬೆಳಿಗ್ಗೆ ಶೌಚಾಲಯಕ್ಕೆ ಹೋಗಿದ್ದಾಳೆ.  ಅನುಮಾನ  ಗೊಂಡು ಪರಿಶೀಲನೆ ನಡೆಸಿದಾಗ ಕಪ್ಪು ಪರದೆ ಹಿಂದೆ ಸಿಸಿಟಿವಿ ಅಳವಡಿಕೆ ಮಾಡಿದ್ದು ಗೊತ್ತಾಗಿದೆ. ಸಂಜೆ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದ್ದಾಳೆ.

ತಕ್ಷಣ ಕ್ರಮ ತೆಗೆದುಕೊಂಡ ಪೊಲೀಸರು ಪರಿಶೀಲನೆ ನಡೆಸಿ ಅಳವಡಿಕೆ ಮಾಡಿದ್ದ ಸಿಸಿಟಿವಿಯನ್ನು ವಶಕ್ಕೆ ಪಡೆದಿದ್ದಾರೆ.  ಆರೋಪಿಯನ್ನು ವಶಕ್ಕೆ ಪಡೆದು ಆತನ ಮೊಬೈಲ್ ಮತ್ತು ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ. ಆದರೆ ಮೊಬೈಲ್ ನಲ್ಲಿ  ಇದಕ್ಕೆ ಸಂಬಂಧಿಸಿದ ಯಾವುದೇ ವಿಡಿಯೋ ಅಥವಾ ಪೋಟೋ ಪತ್ತೆಯಾಗಿಲ್ಲ.

ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಮತ್ತು ಸೆಕ್ಷನ್ 67 ಎ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.