Asianet Suvarna News Asianet Suvarna News

ಬತ್ತಿ ಹೋಗಿದ್ದ ಕೆರೆಯ ಮೀನು ತಿಂದು ಇಬ್ಬರು ಸಾವು; 15ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥ!

ಕೆರೆಯ ಮೀನು ತಿಂದು ಇಬ್ಬರು ಮೃತಪಟ್ಟು ಹದಿನೈದಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವಹಳ್ಳಿ ಗ್ರಾಮದ ರವಿಕುಮಾರ (46), ಸನ್ಯಾಸಿಪುರದ ಪುಟ್ಟಮ್ಮ (50) ಮೃತ ದುರ್ದೈಗಳು.

2 died after eating fish at arakalagudu hassan district rav
Author
First Published May 3, 2024, 1:56 PM IST

ಹಾಸನ (ಮೇ.3): ಕೆರೆಯ ಮೀನು ತಿಂದು ಇಬ್ಬರು ಮೃತಪಟ್ಟು ಹದಿನೈದಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಸವಹಳ್ಳಿ ಗ್ರಾಮದ ರವಿಕುಮಾರ (46), ಸನ್ಯಾಸಿಪುರದ ಪುಟ್ಟಮ್ಮ (50) ಮೃತ ದುರ್ದೈಗಳು.ಅಸ್ವಸ್ಥರಾದ ಹದಿನೈದಕ್ಕೂ ಹೆಚ್ಚು ಮಂದಿ ಅರಕಲಗೂಡು ಹಾಗೂ ಹಾಸನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃಷಿ ಹೊಂಡದಲ್ಲಿ ಅಣ್ಣ ಮುಳುಗುತ್ತಿದ್ದರೂ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ನಿಂತ ತಂಗಿ!

ತಾಯಿಯನ್ನ ಮಾತನಾಡಿಕೊಂಡು ಹೋಗಲು ತವರಿಗೆ ಬಂದಿದ್ದ ಪುಟ್ಟಮ್ಮ. ಮೀನು ತಿನ್ನುವ ಆಸೆಗೆ ಬಸವನಹಳ್ಳಿ ಗ್ರಾಮದ ಕೆರೆಗೆ ಮೀನು ಹಿಡಿಯಲು ಹೋಗಿದ್ದರು. ಆದರೆ ಈ ಬಾರಿ ತೀವ್ರ ಬರಗಾಲ ಹಿನ್ನೆಲೆ ಕೆರೆಯಲ್ಲಿ ನೀರಿಲ್ಲದೆ ಬತ್ತಿಹೋಗಿದೆ. ಕೆರೆಯ ಕೆಸರಿನಲ್ಲಿ ಸಿಕ್ಕ ಮೀನುಗಳನ್ನೇ ಹಿಡಿದು ತಂದಿದ್ದ ಗ್ರಾಮಸ್ಥರು. ಕೆಸರಿನಲ್ಲಿ ಸಿಕ್ಕ ಮೀನುಗಳನ್ನೇ ಬಳಸಿ ಅಡುಗೆ ಮಾಡಿಕೊಂಡು ಊಟ ಮಾಡಿರುವ ಗ್ರಾಮಸ್ಥರು. ಊಟದ ಬಳಿಕ ಹದಿನೈದಕ್ಕೆ ಹೆಚ್ಚು ಮಂದಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಅವರ ಪೈಕಿ ರವಿಕುಮಾರ, ಪುಟ್ಟಮ್ಮ ಮೃತರಾಗಿದ್ದಾರೆ. 

ಗೂಡ್ಸ್ ವಾಹನದಲ್ಲಿ ಜಾನುವಾರು ಸಾಗಾಟ; ಚಾಲಕನ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ

ಪ್ರಕರಣದ ಮಾಹಿತಿ ತಿಳಿದು ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಆಸ್ಪತ್ರೆಗೆ ತೆರಳಿದ ಜಿಲ್ಲಾಧಿಕಾರಿಗಳು ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Videos
Follow Us:
Download App:
  • android
  • ios