Asianet Suvarna News Asianet Suvarna News

T20 World Cup 2024: ಭಾರತದ ಅರ್ಧ ಡಜನ್ ಆಟಗಾರರಿಗೆ ಇದೇ ಮೊದಲ ಟಿ20 ವಿಶ್ವಕಪ್..!

ಟಿ20 ವಿಶ್ವಕಪ್ ಸಮರಕ್ಕಾಗಿ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿ ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ, ಐಪಿಎಲ್‌ನಲ್ಲಿ ಮಿಂಚ್ತಿರೋ ಆಟಗಾರರಿಗೆ  ಮಣೆ ಹಾಕಿದೆ. ಇನ್ನು 2022ರ ವಿಶ್ವಕಪ್ನಲ್ಲಿ ಮಿಂಚಿದ್ದ ಹಲವರು ಈ ಬಾರಿ ತಂಡದಲ್ಲಿಲ್ಲ. ಆದ್ರೆ, ಮತ್ತೊಂದೆಡೆ ಆರು ಆಟಗಾರರು ಇದೇ ಮೊದಲ ಬಾರಿ ಟಿ20 ವಿಶ್ವಕಪ್ ಆಡಲು ರೆಡಿಯಾಗಿದ್ದಾರೆ. 

Indian half of the player ready to play for the first time ICC T20 World Cup 2024 kvn
Author
First Published May 3, 2024, 2:15 PM IST

ಬೆಂಗಳೂರು(ಮೇ.03): ಜೂನ್ 1ರಿಂದ ಆರಂಭವಾಗಲಿರೋ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಹಲವು ಆಟಗಾರರು ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದ್ರೆ, ಮತ್ತೊಂದೆಡೆ ಈ ಆರು ಆಟಗಾರರಿಗೆ ಈ ವಿಶ್ವಕಪ್ ವೆರಿ, ವೆರಿ  ಸ್ಪೆಷಲ್ ಆಗಿದೆ. ಯಾರು ಆ ಆಟಗಾರರು..? ಯಾಕೆ ಸ್ಪೆಷಲ್ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ....

ಟಿ20 ವಿಶ್ವಕಪ್ ಸಮರಕ್ಕೆ ಟೀಮ್ ಇಂಡಿಯಾ ರೆಡಿ..!

ಟಿ20 ವಿಶ್ವಕಪ್ ಸಮರಕ್ಕಾಗಿ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿ ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ, ಐಪಿಎಲ್‌ನಲ್ಲಿ ಮಿಂಚ್ತಿರೋ ಆಟಗಾರರಿಗೆ  ಮಣೆ ಹಾಕಿದೆ. ಇನ್ನು 2022ರ ವಿಶ್ವಕಪ್ನಲ್ಲಿ ಮಿಂಚಿದ್ದ ಹಲವರು ಈ ಬಾರಿ ತಂಡದಲ್ಲಿಲ್ಲ. ಆದ್ರೆ, ಮತ್ತೊಂದೆಡೆ ಆರು ಆಟಗಾರರು ಇದೇ ಮೊದಲ ಬಾರಿ ಟಿ20 ವಿಶ್ವಕಪ್ ಆಡಲು ರೆಡಿಯಾಗಿದ್ದಾರೆ. 

ವಿಶ್ವಕಪ್‌ಗೆ ಆಯ್ಕೆಯಾದರೆ ಸಿಡಿಸಲು ಪಟಾಕಿ, ಹಂಚಲು ಸಿಹಿ ತಂದು ಕಾಯುತ್ತಿದ್ದ ರಿಂಕು ತಂದೆ!

ಡ್ಯಾಶಿಂಗ್ ಓಪನರ್ ಜೈಸ್ವಾಲ್ಗೆ ಫಸ್ಟ್ ವರ್ಲ್ಡ್‌ಕಪ್..!

ಯಂಗ್‌ಸ್ಟರ್, ಡ್ಯಾಶಿಂಗ್ ಓಪನರ್ ಯಶಸ್ವಿ ಜೈಸ್ವಾಲ್ ಫಸ್ಟ್ ಟೈಮ್ ವರ್ಲ್ಡ್‌ಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. IPLನಲ್ಲಿ ಅದ್ಭುತ ಪ್ರದರ್ಶನ ನೀಡಿ, ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಜೈಸ್ವಾಲ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮಿಂಚುತ್ತಿದ್ದಾರೆ. ಇದ್ರಿಂದ ಟಿ ವಿಶ್ವಕಪ್ ಟಿಕೆಟ್ ಪಡೆದುಕೊಂಡಿದ್ದಾರೆ. ಟೀಂ ಇಂಡಿಯಾ ಪರ ಈವರೆಗೂ 17 T20 ಪಂದ್ಯಗಳನ್ನಾಡಿರೋ ಮುಂಬೈಕರ್, 161.93ರ ಸ್ಟ್ರೈಕ್‌ರೇಟ್‌ನಲ್ಲಿ  502 ರನ್ ಕಲೆಹಾಕಿದ್ದಾರೆ. 

9 ವರ್ಷಗಳ ಸಂಜು ಸ್ಯಾಮ್ಸನ್ ಶ್ರಮಕ್ಕೆ ಕೊನೆಗೂ ಸಿಕ್ತು ಫಲ..!

ಸಂಜು ಸ್ಯಾಮ್ಸನ್..! ವಿಶ್ವಕಪ್ ತಂಡದಲ್ಲಿರೋ ಯಂಗ್‌ಸ್ಟರ್‌ಗಳ ಪೈಕಿ ಮೋಸ್ಟ್ ಸೀನಿಯರ್. 2015ರಲ್ಲೇ ಈ ಕೇರಳ ಬ್ಯಾಟರ್, ಟಿ20ಯಲ್ಲಿ ಟೀಂ ಇಂಡಿಯಾಗೆ ಎಂಟ್ರಿ ನೀಡಿದ್ರು. ಅದ್ರೆ, ಕಳಪೆ ಫಾರ್ಮ್ನಿಂದಾಗಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ರು. ಈ ಬಾರಿಯ IPLನ ಪ್ರದರ್ಶನದ ಆಧಾರದ ಮೇಲೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿದೆ. 

ಭಾರತ ತಂಡದಿಂದ ಕೆ ಎಲ್ ರಾಹಲ್‌ ಕೈಬಿಟ್ಟಿದ್ದೇಕೆ? ಕೊನೆಗೂ ಮೌನ ಮುರಿದ ಅಜಿತ್ ಅಗರ್ಕರ್, ರೋಹಿತ್ ಶರ್ಮಾ

IPLನಂತೆ ಮೆಗಾ ಟೂರ್ನಿಯಲ್ಲಿ ಅಬ್ಬರಿಸ್ತಾರಾ ದುಬೆ..? 

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅಬ್ಬರಿಸ್ತಿರೋ ಶಿವಂ ದುಬೆಗೂ ವಿಶ್ವಕಪ್ ಆಡೋ ಲಕ್ಕಿಚಾನ್ಸ್ ಸಿಕ್ಕಿದೆ. ಪ್ರಸಕ್ತ IPLನಲ್ಲಿ ದುಬೆ, 10 ಪಂದ್ಯಗಳಿಂದ 171.56ರ ಸ್ಟ್ರೈಕ್ರೇಟ್ನಲ್ಲಿ 350 ರನ್ ಬಾರಿಸಿದ್ದಾರೆ. 2019ರಲ್ಲೇ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ ಈ ಎಡಗೈ ಬ್ಯಾಟರ್, 21 ಪಂದ್ಯಗಳನ್ನಾಡಿ 145.26ರ ಸ್ಟ್ರೈಕ್ರೇಟ್ನಲ್ಲಿ 276 ರನ್ ಬಾರಿಸಿದ್ದಾರೆ. 

ಕುಲ್ದೀಪ್, ಚಹಲ್, ಸಿರಾಜ್‌ಗೂ ಮೊದಲ ವಿಶ್ವಕಪ್..!

ರಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್ ಟೀಂ ಇಂಡಿಯಾ ಪರ ಈಗಾಗ್ಲೇ ಎರಡು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದಾರೆ. ಆದ್ರೆ, ಫರ್ ದಿ ಫಸ್ಟ್ ಟೈಮ್ ಟಿ20 ವಿಶ್ವಕಪ್ ಸ್ಪಿನ್ ಮ್ಯಾಜಿಕ್ ಮಾಡೋದಕ್ಕೆ ಸಿದ್ದರಾಗಿದ್ದಾರೆ. ಈವರೆಗೂ ಟಿ20 ಫಾರ್ಮೆಟ್ನಲ್ಲಿ 35 ಪಂದ್ಯಗಳನ್ನಾಡಿರೋ ಕುಲ್ದೀಪ್, 59 ವಿಕೆಟ್ಗಳನ್ನ ಬೇಟೆಯಾಡಿದ್ದಾರೆ. 

ಯುಜುವೇಂದರ್ ಚಹಲ್.! ಟಿ20 ಕ್ರಿಕೆಟ್ನಲ್ಲಿ ಮೋಸ್ಟ್ ಎಕ್ಸ್ಪೀರಿಯೆನ್ಸ್ಡ್ ಪ್ಲೇಯರ್. IPL ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದಿರೋ ಬೌಲರ್. 2016ರಲ್ಲೇ ಇಂಟರ್ನ್ಯಾಷನಲ್ ಕ್ರಿಕೆಟ್‌ಗೆ ಕಾಲಿಟ್ರೂ, ಈವರೆಗೂ ಯಾವ ವಿಶ್ವಕಪ್ನಲ್ಲೂ ಚಹಲ್ ಆಡಿರಲಿಲ್ಲ. ಆದ್ರೆ, ಕೊನೆಗೂ ಈ ಲೆಗ್‌ಸ್ಪಿನ್ನರ್‌ಗೆ ಮೆಗಾಟೂರ್ನಿಯಲ್ಲಿ ಆಡೋ ಅದಷ್ಟ ಕೂಡಿ ಬಂದಿದೆ. 

ಇನ್ನು ಮಿಯಾ ಭಾಯ್ ಮೊಹಮ್ಮದ್ ಸಿರಾಜ್ಗೂ ಟಿ20 ವಿಶ್ವಕಪ್ ಆಡಿದ ಅನುಭವವಿಲ್ಲ. ಅಲ್ಲದೇ, ಈವರೆಗೂ ಭಾರತ ಪರ ಕೇವಲ 10 ಟಿ20 ಪಂದ್ಯಗಳನ್ನ ಮಾತ್ರ ಆಡಿದ್ದಾರೆ. ಅದೇನೆ ಇರಲಿ, ಫಸ್ಟ್‌ ಟೈಮ್ ವರ್ಲ್ಡ್‌ಕಪ್ ಆಡ್ತಿರೋ ಈ ಸಪ್ತ ಆಟಗಾರರು, ಟೂರ್ನಿಯಲ್ಲಿ ಎಷ್ಟರ ಮಟ್ಟಿಗೆ ಅಬ್ಬರಿಸ್ತಾರೆ ಅನ್ನೋದನ್ನ ಕಾದು ನೋಡ ಬೇಕಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Latest Videos
Follow Us:
Download App:
  • android
  • ios