Asianet Suvarna News Asianet Suvarna News

ನೇಹಾ ಕುಟುಂಬಸ್ಥರ ಭೇಟಿ ಮಾಡಿದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕುಟುಂಬಸ್ಥರನ್ನು ಭೇಟಿ ಮಾಡಿದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅವರು ಸಾಂತ್ವನ ಹೇಳಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ದೈರ್ಯ ತುಂಬಿದರು.

Abdul Azim Chairman of the Minorities Commission visited Neha Hiremaths family at hubballi rav
Author
First Published May 3, 2024, 2:45 PM IST

ಹುಬ್ಬಳ್ಳಿ (ಮೇ.3):  ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕುಟುಂಬಸ್ಥರನ್ನು ಭೇಟಿ ಮಾಡಿದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅವರು ಸಾಂತ್ವನ ಹೇಳಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ದೈರ್ಯ ತುಂಬಿದರು.

ಇಂದು ಹುಬ್ಬಳ್ಳಿಯ ಬಿಡನಾಳದಲ್ಲಿ ನೇಹಾ ಹಿರೇಮಠ ನಿವಾಸಕ್ಕೆ ತೆರಳಿದ ಅಬ್ದುಲ್ ಅಜೀಂ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವುದರ ಜೊತೆ ಹತ್ಯೆ ಘಟನೆಯನ್ನು ಖಂಡಿಸಿದರು. ನೇಹಾ ಕುಟುಂಬದೊಂದಿಗೆ ಹಿಂದೂಳಿದ ವರ್ಗವಿದೆ. ಈ ಘಟನೆ ಬಗ್ಗೆ ಸಂಪೂರ್ಣ ತನಿಖೆಗೆ ಒತ್ತಾಯಿಸುವೆ ಎಂದರು.

ನೇಹಾ ಕೊಲೆ ಆರೋಪಿ ಫಯಾಜ್ ಸಿಐಡಿ ಕಸ್ಟಡಿ ಅಂತ್ಯ: ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಸಿಐಡಿ

ಈಗಾಗಲೇ ಸರ್ಕಾರ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಈ ಕೃತ್ಯದ ಹಿಂದೆ ಒಳಸಂಚು ಏನಾದರೂ ಇದೆಯಾ? ಈ ಕೃತ್ಯಕ್ಕೆ ಯಾರು ಸಹಕಾರ ಕೊಟ್ಟಿದ್ದಾರೆ? ಕೃತ್ಯ ನಡೆದ ನಂತರ ಸಾಕ್ಷಿ, ಆಧಾರ ನಾಶ ಮಾಡುವ ಸಂಚು ನಡೆದಿದೆಯೇ? ಅಪರಾಧ ಮುಚ್ಚಿಹಾಕುವ ಪ್ರಯತ್ನದ ಬಗ್ಗೆಯೂ ಸಂಪೂರ್ಣ ತನಿಖೆಯಾಗಬೇಕು

ಸರ್ಕಾರ ಇಚ್ಛಿಸಿದರೆ ತನಿಖೆಗೆ ನಾನು ಮಾರ್ಗದರ್ಶನ ನೀಡುತ್ತೇನೆ. ನೇಹಾ ಹತ್ಯೆ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆರೋಪಿಗೆ ಯಾವ ಶಿಕ್ಷೆ ಆಗುತ್ತದೆ ಎಂದು ಇಡೀ ರಾಷ್ಟ್ರದ ಜನತೆ ನೋಡುತ್ತಿದೆ. ಕಠಿಣ ಶಿಕ್ಷೆ ವಿಧಿಸುವ ಮೂಲಕ ಸರ್ಕಾರ ಜನರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದರು. 

ಕಳೆದ ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣಕ್ಕೆ ನುಗ್ಗಿದ್ದ ಆರೋಪಿ ಫಯಾಜ್, ಏಕಾಏಕಿ ಚಾಕುವಿನಿಂದ ದಾಳಿ ನಡೆಸಿ ಕುತ್ತಿಗೆ ಹಲವು ಮಾರಿ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಪಾತಕಿ. ಘಟನೆ ಬಳಿಕ ದೇಶಾದ್ಯಾಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಬಳಿಕ ಗೃಹ ಸಚಿವ, ಸಿಎಂ ಹೇಳಿಕೆಗೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಲವೆಡೆ ಪ್ರತಿಭಟನೆ ತೀವ್ರಗೊಂಡ ಬಳಿಕ ತನಿಖೆ ಮುಂದಾಗಿತ್ತು.

ಅನಾಮಧೇಯ ವ್ಯಕ್ತಿಗಳು ನಮ್ಮ ಮನೆ ಸುತ್ತಮುತ್ತ ಓಡಾಡುತ್ತಿದ್ದಾರೆ; ನೇಹಾ ತಂದೆ ನಿರಂಜನ ಹಿರೇಮಠ ಆತಂಕ

ಇದೀಗ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ನೇಹಾ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ತನಿಖೆ ಮೇಲೆ ನಮಗೆ ಭರವಸೆ ಇಲ್ಲ. ನೇಹಾ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆ ಕಳೆದ ವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದರು. ಅಮಿತ್‌ ಶಾ ಕೂಡ ಕುಟುಂಬದೊಂದಿಗೆ ನಾವಿದ್ದೇನೆ ಎಂಬ ಅಭಯ ನೀಡಿದ್ದಾರೆ.

Latest Videos
Follow Us:
Download App:
  • android
  • ios