Honor Killing: ವರ್ಷ ತುಂಬುವುದರೊಳಗೆ ಮಗಳನ್ನು ವಿಧವೆ ಮಾಡಿದ ಕ್ರೂರಿ ಅಪ್ಪ: ಮರ್ಯಾದಾ ಹತ್ಯೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಸೇಡು ಸಾಧಿಸುತ್ತಿದ್ದ ಮಾವ, ಸ್ವಂತ ಮಗಳ ಗಂಡನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.
ಬಾಗಲಕೋಟೆ (ಡಿ.19): ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಸೇಡು ಸಾಧಿಸುತ್ತಿದ್ದ ಮಾವ, ಸ್ವಂತ ಮಗಳ ಗಂಡನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ. ನಾಡಿನಲ್ಲಿ ಎಷ್ಟೇ ವೈಜ್ಞಾನಿಕ ಬೆಳವಣಿಗೆ ಆಗಿದ್ದರೂ ಸಾಮಾಜಿಕ ಪಿಡುಗು ಆಗಿರುವ ಜಾತಿ ಪದ್ದತಿ ಮತ್ತು ಅಂತರ್ಜಾತಿ ವಿವಾಹಕ್ಕೆ ಮನ್ನಣೆ ಸಿಗುತ್ತಿಲ್ಲ. ಪ್ರತಿ ವರ್ಷ ನಡೆಯುವ ನೂರಾರು ಮರ್ಯಾದಾ ಹತ್ಯೆಯ ಪ್ರಕರಣಕ್ಕೆ ಬಾಗಲಕೋಟೆಯ ಪ್ರಕರಣವೂ ಸೇರ್ಪಡೆಗೊಂಡಿದೆ.
ಮಾವನ ಸೇಡಿನಿಂದ ಕೊಲೆಯಾದ ಯುವಕ ಭುಜಬಲಿ ಆಗಿದ್ದಾನೆ. ಕಳೆದ 9 ತಿಂಗಳ ಹಿಂದೆಯಷ್ಟೇ ಭಾಗ್ಯಶ್ರೀ ಎಂಬುವವಳನ್ನು ಭುಜಬಲಿ ಪ್ರೀತಿಸಿ ಮದುವೆಯಾಗಿದ್ದನು. ಆದರೆ, ಅಂತರ್ಜಾತಿ ಆಗಿದ್ದರಿಂದ ತಮ್ಮ ಮದುವೆಗೆ ಮನೆಯ ಒಪ್ಪಿಗೆ ಸಿಗುವುದಿಲ್ಲ ಎಂದರಿತು ಇಬ್ಬರೂ ಪ್ರೇಮಿಗಳು ಮನೆ ಬಿಟ್ಟು ಹೋಗಿ ಮದುವೆಯಾಗಿ ಬಂದು ಊರಲ್ಲಿ ನೆಲೆಸಿದ್ದರು. ಆದರೆ ಮಗಳನ್ನು ಮದುವೆಯಾದ ಎಂಬ ಸಿಟ್ಟಿನಿಂದ ಯುವತಿ ತಂದೆ ತಮ್ಮನಗೌಡ ತನ್ನ ಅಳಿಯನನ್ನೇ ಕೊಕೆ ಮಾಡಿಸಿದ್ದಾನೆ ಎಂದು ತಿಳಿದುಬಂದಿದೆ.
Honour Killing: ಅಂತರ್ಜಾತಿ ಯುವಕನ ಜತೆ ಪ್ರೀತಿ: ಮಗಳನ್ನೇ ಕೊಂದ ತಾಯಿ..!
ಕಣ್ಣಿಗೆ ಖಾರದಪುಡಿ ಎರಚಿ ಕೃತ್ಯ: ಇನ್ನು ತಮ್ಮನಗೌಡ ಮತ್ತು ಇತರೆ ಮೂವರು ಕೊಲೆ ಮಾಡಿದ್ದಾರೆ. ಸಾಮಾನ್ಯ ದಿನದಂತೆ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಬರುವಾಗ ಊರಿನ ಹೊರಗೆ ಬೈಕ್ ಅಡ್ಡಗಟ್ಟಿ ಭುಜಬಲಿಯ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ನಂತರ ಕುಡುಗೋಲು ಮತ್ತು ಇತರೆ ಹರಿತವಾದ ಉಪಕರಣಗಳಿಂದ ಕತ್ತು ಮತ್ತು ಇತರೆ ದೇಹದ ಭಾಗಗಳನ್ನು ಕೊಯ್ದು ಕೊಲೆ ಮಾಡಿದ್ದಾರೆ. ಇನ್ನು ಕೊಲೆ ಸಂಭಂದ ಸಾವಳಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.