Bangalore Car Thieves: ಟೆಕ್ನಾಲಜಿ ಬಳಸಿ ಕಾರು ಎಗರಿಸುತ್ತಿದ್ದವ ಅಂದರ್
ಎಲ್ಲರೂ ಡಿಗ್ರಿ ಆದ್ಮೇಲೆ ಒಂದು ಒಳ್ಳೆ ಕೆಲಸಕ್ಕೆ ಹೋಗಬೇಕು ಅಂತ ಅಂದುಕೊಳ್ತಾರೆ. ಆದ್ರೆ ಇಲ್ಲೊಬ್ಬ ಖತರ್ನಾಕ್ ಖದೀಮನೊಬ್ಬ ಮಾತ್ರ ಕಳ್ಳತನ ಮಾಡೋದನ್ನೆ ತನ್ನ ಕೆಲಸ ಮಾಡಿಕೊಂಡಿದ್ದ, ಈತ ಅದೆಂಥಾ ಖತರ್ನಾಕ್ ಕಳ್ಳ ಅಂದ್ರೆ ಟೆಕ್ನಾಲಜಿಯನ್ನು ಬಳಸಿಕೊಂಡು ಕಳ್ಳತನ ಮಾಡ್ತಾ ಇದ್ದ
ವರದಿ: ಪ್ರದೀಪ್ ಕಗ್ಗೆ
ಬೆಂಗಳೂರು: ಎಲ್ಲರೂ ಡಿಗ್ರಿ ಆದ್ಮೇಲೆ ಒಂದು ಒಳ್ಳೆ ಕೆಲಸಕ್ಕೆ ಹೋಗಬೇಕು ಅಂತ ಅಂದುಕೊಳ್ತಾರೆ. ಆದ್ರೆ ಇಲ್ಲೊಬ್ಬ ಖತರ್ನಾಕ್ ಖದೀಮನೊಬ್ಬ ಮಾತ್ರ ಕಳ್ಳತನ ಮಾಡೋದನ್ನೆ ತನ್ನ ಕೆಲಸ ಮಾಡಿಕೊಂಡಿದ್ದ, ಈತ ಅದೆಂಥಾ ಖತರ್ನಾಕ್ ಕಳ್ಳ ಅಂದ್ರೆ ಟೆಕ್ನಾಲಜಿಯನ್ನು ಬಳಸಿಕೊಂಡು ಕಳ್ಳತನ ಮಾಡ್ತಾ ಇದ್ದ. ಅರುಣ್ ಎಂಬಾತನೇ ಹೀಗೆ ತಂತ್ರಜ್ಞಾನ ಬಳಸಿಕೊಂಡು ಕಳವಿಗೆ ಇಳಿದ ಖದೀಮ. ಈತ ಓದಿದ್ದು ಬಿಕಾಂ ಓದಿಗೆ ತಕ್ಕಂತೆ ಯಾವುದಾದರೂ ಒಳ್ಳೆ ಕೆಲಸ ಮಾಡ್ಕೊಂಡು ಜೀವನ ಮಾಡೋದು ಬಿಟ್ಟು ಈತ ಕಳ್ಳತನವನ್ನೆ ಜೀವನವನ್ನಾಗಿ ಮಾಡಿಕೊಂಡು ಇದೀಗ ಕಂಬಿ ಹಿಂದೆ ಬಿದ್ದಿದ್ದಾನೆ.
ಈತ ಎಂತಹ ಟ್ಯಾಲೆಂಟೆಡ್ ಕಳ್ಳ ಅಂದ್ರೆ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ ನಂತರ ಅದೇ ರೀತಿಯ ಡಿವೈಸ್ ಒಂದನ್ನು ತೆಗೆದುಕೊಂಡು ಕಾರುಗಳನ್ನು ಕದಿತಿದ್ದ. ಆಂಧ್ರ ಪ್ರದೇಶದಿಂದ ಬಂದು ಕಳ್ಳತನ ಮಾಡ್ತಾಯಿದ್ದ ಈತ ವೃತ್ತಿಯಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡ್ತಿದ್ದ. Xtool auto Diagnostic ಟೂಲ್ ಎಂಬಾ ಡಿವೈಸ್ ಒಂದನ್ನು ಬಳಸಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ. ಯುಟ್ಯೂಬ್‌ನಲ್ಲಿ ಕಾರ್ ಕಳವು ಬಗ್ಗೆ ಮಾಹಿತಿ ಪಡೆದಿದ್ದ ಅರುಣ್, ಡಿವೈಸ್ ಒಂದನ್ನು ಕಾರಿಗೆ ಕನೆಕ್ಟ್ ಮಾಡಿ ಅದರ ಜೊತೆಯಲ್ಲಿ ತನ್ನ ಬಳಿಯಿದ್ದ ನಕಲಿ ಕೀಯನ್ನು ಕಾರಿಗೆ ಕನೆಕ್ಟ್ ಮಾಡ್ತಿದ್ದ.
Bengaluru Crime News: ಡ್ರಗ್ಸ್ ಹಾಗೂ ಕಳ್ಳತನ ಪ್ರಕರಣಗಳಲ್ಲಿ ರೌಡಿ ಶೀಟರ್ ಸೇರಿ 13 ಜನರ ಬಂಧನ
ನಂತರ ಡಿವೈಸ್‌ನಲ್ಲಿರುವ ಕಾರ್ ಲಾಕ್‌ನ್ನು ತೆಗೆದು ಸಿಸ್ಟಮ್ ಆಪ್‌ಡೇಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಕರ್ನಾಟಕದಲ್ಲಿ ಕಾರುಗಳನ್ನು ಕದ್ದು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ. ಈ ಕಾರುಗಳನ್ನು ಮಾರುವುದಕ್ಕೆ ಫೇಕ್ ನಂಬರ್ ಪ್ಲೇಟ್‌ಗಳನ್ನು ಹಾಕಿ ಮೊತ್ತೊಬ್ಬರಿಗೆ ಮಾರಾಟ ಹಣ ಮಾಡ್ತಿದ. ಸದ್ಯ ಆರೋಪಿಯಿಂದ 70 ಲಕ್ಷ ಮೌಲ್ಯದ 10 ಕಾರು 1 ಬೈಕ್ ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡಿನ ಜಿಲ್ಲೆಗಳಲ್ಲಿ ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದ, ಬೆಂಗಳೂರಿನ ಹತ್ತು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈತ ಕಾರು ಕಳ್ಳತನ ಮಾಡಿದ್ದಾನೆ ಅಂತ ಗೊತ್ತಾಗಿದ್ದು, ಇದೀಗ ತಾನು ಮಾಡಿದ ತಪ್ಪಿಗೆ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.
ಬೆಂಗಳೂರು: ಮದುವೆ ಮನೆಯಲ್ಲಿ ಮಕ್ಕಳ ಒಡವೆ ಕದಿಯುತ್ತಿದ್ದ ಐನಾತಿ ಕಳ್ಳ ಅರೆಸ್ಟ್..!