ಬೆಂಗಳೂರು: ಮದುವೆ ಮನೆಯಲ್ಲಿ ಮಕ್ಕಳ ಒಡವೆ ಕದಿಯುತ್ತಿದ್ದ ಐನಾತಿ ಕಳ್ಳ ಅರೆಸ್ಟ್..!

*  ಮಕ್ಕಳ ಮೈಮೇಲೆ ರಾಶಿ ರಾಶಿ ಚಿನ್ನಾಭರಣ ಹಾಕೋ ಮುನ್ನ ಸ್ವಲ್ಪ ಎಚ್ಚರ ವಹಿಸಿ
*  ಸಹಚರನ ಜೊತೆ ಡೀಸೆಂಟಾಗಿ ಮದ್ವೆ ಮನೆಗೆ ಎಂಟ್ರಿ ಕೊಡ್ತಿದ್ದ ಕಳ್ಳ
*  ಬಂಧಿತನಿಂದ 500 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸರು 

Thief Arrested for Gold Theft Cases in Bengaluru grg

ಬೆಂಗಳೂರು(ಜೂ.25):  ಮದ್ವೆ, ರಿಸೆಪ್ಷನ್‌ಗೆ ಬರೋ ಮಕ್ಕಳನ್ನೇ ಟಾರ್ಗೇಟ್ ಮಾಡಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳನನ್ನ ಸುದ್ದಗುಂಟೆಪಾಳ್ಯ ಪೊಲೀಸರು ಇಂದು(ಶನಿವಾರ) ಬಂಧಿಸಿದ್ದಾರೆ. ಮಕ್ಕಳನ್ನ ನೈಸಾಗಿ ಮಾತನಾಡಿಸಿ ಮೈಮೇಲಿರೋ ಚಿನ್ನಾಭರಣವನ್ನ ಎಗರಿಸ್ತಿದ್ದ ಈ ಖದೀಮ. ಬಂಧಿತ ಆರೋಪಿಯನ್ನ ಬಾಬು ಅಂತ ಗುರುತಿಸಲಾಗಿದೆ. 

ಬಾಬು ತನ್ನ ಸಹಚರನ ಜೊತೆ ಡೀಸೆಂಟಾಗಿ ಮದ್ವೆ ಮನೆಗೆ ಎಂಟ್ರಿ ಕೊಟ್ಟು ಅಕ್ಕಪಕ್ಕದಲ್ಲಿ ಮಕ್ಕಳು ಓಡಾಡ್ತಿದ್ರೆ ಆ ಮಕ್ಕಳಿಗೆ ಚಾಕಲೇಟ್ ಕೊಡ್ತಾನೆ. ಎಷ್ಟು ಮುದ್ದಾಗಿದ್ಯಾ ಅಂತ ಪುಸಲಾಯಿಸಿ ಮಕ್ಕಳ ಸಂಬಂಧಿಯಂತೆ ಮುದ್ದಿಸಿ  ಮೈಮೇಲಿನ ಚಿನ್ನವನ್ನ ಎಗರಿಸುತ್ತಿದ್ದನಂತೆ ಈ ಕಳ್ಳ. 

ಒಂಟಿ ಮಹಿಳಾ ವ್ಯಾಪಾರಿಗಳ ಸರ ಪಡೆದು ಪರಾರಿಯಾಗ್ತಿದ್ದ ಖತರ್ನಾಕ್‌ ಕಳ್ಳರ ಬಂಧನ

ಕಳ್ಳ ಬಾಬು‌ ಹಿಂದೆ ನಗರದ ಕೆಲ ಪೊಲೀಸ್ರು ಕೂಡ ಬಿದ್ದಿದ್ರು. ಸದ್ಯ ಸುದ್ದಗುಂಟೆ ಪೊಲೀಸರ ಕೈಗೆ ಲಾಕ್ ಆಗಿದ್ದು ಬಂಧಿತನಿಂದ 500 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಾಬು ಈ ಹಿಂದೆ ಅರಮನೆ ಮೈದಾನ, ಗೋವಿಂದರಾಜನಗರ, ಸದಾಶಿವನಗರ, ಮಾಗಡಿ ರಸ್ತೆ ಭಾಗದ ಚೌಟ್ರಿಯಲ್ಲಿ ಕೈಚಳಕ ತೋರಿದ್ದ ಅಂತ ತಿಳಿದು ಬಂದಿದೆ. 
 

Latest Videos
Follow Us:
Download App:
  • android
  • ios