Asianet Suvarna News Asianet Suvarna News

ಕದ್ದಿದ್ದು ಐಫೋನ್ ಅಲ್ಲ.. ಆಂಡ್ರಾಯ್ಡ್ ಎಂದು ಅರಿವಾಗಿ ವಾಪಸ್‌ ಕೊಟ್ಟೋದ BMW ಕಾರಲ್ಲಿ ಬಂದ ಕಳ್ಳರು!

ಮುಸುಕುಧಾರಿ ದರೋಡೆಕೋರರು ಶಸ್ತ್ರಸಜ್ಜಿತರಾಗಿ ವ್ಯಕ್ತಿಯ ಬಳಿಗೆ ಬಂದರು. ಅವನನ್ನು ಅಟ್ಯಾಕ್‌ ಮಾಡಿ, ಜೇಬಿನಲ್ಲಿದ್ದ ಎಲ್ಲವನ್ನೂ ದೋಚಿದರು. ಆದರೆ ಕದ್ದಿದ್ದು ಐಫೋನ್ ಅಲ್ಲ ಆಂಡ್ರಾಯ್ಡ್‌ ಎಂದು ಅರಿವಾಗಿ ವಾಪಸ್‌ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. 

thieves return android phone after mistaking it for not an iphone ash
Author
First Published Dec 5, 2023, 1:04 PM IST

ವಾಷಿಂಗ್ಟನ್ ಡಿಸಿ (ಡಿಸೆಂಬರ್ 5, 2023): ಅಮೆರಿಕದ ವಾಷಿಂಗ್ಟನ್ ಡಿಸಿ ಮೂಲದ ವ್ಯಕ್ತಿಯೊಬ್ಬರು ಕಳ್ಳತನಕ್ಕೆ ಒಳಗಾಗಿದ್ದರು. ಸಶಸ್ತ್ರ ಸಮೇತರಾಗಿ ಬಂದಿದ್ದ ದರೋಡೆಕೋರರು ಆತನ ಜೇಬಿನಲ್ಲಿದ್ದ ಎಲ್ಲವನ್ನೂ ಕದ್ದಿದ್ದಾರೆ. ಇದು ಅವರ ಕಾರಿನ ಕೀ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿತ್ತು. 

ಆದರೆ, ಆತನ ಫೋನ್ ಆಂಡ್ರಾಯ್ಡ್ ಫೋನ್ ಆಗಿದ್ದರಿಂದ ಕಳ್ಳರು  ಹಿಂತಿರುಗಿಸಿದ್ದಾರೆ ಎಂದು ವರದಿಯಾಗಿದೆ. ವಿವರಕ್ಕಾಗಿ ಮುಂದೆ ಓದಿ.. 

ಇದನ್ನು ಓದಿ: ಅಯ್ಯೋ ಕಂದಮ್ಮ! ಮಗು ತಂದೆ ಯಾರೆಂದು ಜಗಳ: ಒಂದೂವರೆ ತಿಂಗಳ ಮಗುವನ್ನೇ ಕೊಂದ ದಂಪತಿ

ತಮ್ಮ ಅಪಾರ್ಟ್‌ಮೆಂಟ್‌ನ ಹೊರಗೆ ಮುಂಜಾನೆ ತನ್ನ ಪತಿಯನ್ನು ದರೋಡೆಕೋರರು ಕಳ್ಳತನ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದ್ದಾರೆ. ಈ ಬಗ್ಗೆ ಎಬಿಸಿ 7 ವರದಿ ಮಾಡಿದೆ. ಪತಿ ಕಾರನ್ನು ನಿಲ್ಲಿಸಿದ ತಕ್ಷಣ ಇಬ್ಬರು ಮುಸುಕುಧಾರಿ ದರೋಡೆಕೋರರು ಶಸ್ತ್ರಸಜ್ಜಿತರಾಗಿ ಆತನ ಬಳಿಗೆ ಬಂದರು. ಅವರು ಅವನನ್ನು ಅಟ್ಯಾಕ್‌ ಮಾಡಿ, ಜೇಬಿನಲ್ಲಿದ್ದ ಎಲ್ಲವನ್ನೂ ತೆಗೆದುಕೊಂಡು, ನನ್ನ ಟ್ರಕ್ಕಿನ ಕೀಲಿಗಳನ್ನು ತೆಗೆದುಕೊಂಡು ಕಾರಿನೊಳಗೆ ಬಂದು ಕದ್ದುಕೊಂಡು ಹೋದರು ಎಂದೂ ಮಹಿಳೆ ಹೇಳಿದ್ದಾರೆ.

ದರೋಡೆಕೋರರಲ್ಲಿ ಒಬ್ಬರು ಕಾಲ್ನಡಿಗೆಯಲ್ಲಿ ಬಂದರೆ, ಇನ್ನೊಬ್ಬರು ಕಪ್ಪು ಬಿಎಂಡಬ್ಲ್ಯು ಕಾರಿನಲ್ಲಿ ಬಂದಿದ್ದರು, ಇಬ್ಬರೂ ಬಂದೂಕುಗಳನ್ನು ಹೊಂದಿದ್ದರು ಎಂದೂ ಆಕೆ ಹೇಳಿದ್ದಾರೆ. ಆ ವೇಳೆ, ದರೋಡೆಕೋರರು ತನ್ನ ಪತಿಯ ಫೋನ್ ಅನ್ನು ತೆಗೆದುಕೊಂಡರು. ಆದರೆ, ಅದು ಅವರಿಗೆ ಇಷ್ಟವಾಗದ ಕಾರಣ ಅದನ್ನು ಹಿಂತಿರುಗಿಸಿದರು ಎಂದೂ ಹೇಳಿದ್ದಾಳೆ. 

ಇದನ್ನು ಓದಿ: ಥೂ.. ಪಾಪಿ.. ನಾಲ್ವರು ಸ್ನೇಹಿತರ ಜೊತೆ ಸೇರಿ ತಂಗಿ ಮೇಲೆ ರೇಪ್‌ ಮಾಡಿ ಕೊಲೆ ಮಾಡ್ದ!

ಅವರು ಆ ಫೋನ್ ಅನ್ನು ನೋಡಿದರು ಮತ್ತು 'ಓಹ್, ಅದು ಆಂಡ್ರಾಯ್ಡ್ ಆಗಿದೆಯೇ? ನಮಗೆ ಇದು ಬೇಡ. ಇದು ಐಫೋನ್ ಎಂದು ನಾನು ಭಾವಿಸಿದೆ’ ಎಂದೂ ಮಾತನಾಡಿರುವುದನ್ನೂ ಆಕೆ ತಿಳಿಸಿದ್ದಾರೆ. ಅಲ್ಲದೆ, ಅದು ನನ್ನ ಆದಾಯವಾಗಿತ್ತು. ನಾನು ಹಣ ಸಂಪಾದಿಸಿದ ಮಾರ್ಗವೇ ಹಾಗೆ.. ನಾನು ಉಬರ್ ಈಟ್ಸ್ ಮತ್ತು ಇನ್‌ಸ್ಟಾಕಾರ್ಟ್ ಮಾಡಿದ್ದೇನೆ, ಅದು ನಮ್ಮ ಜೀವನೋಪಾಯವಾಗಿತ್ತು ಎಂದು ಅವರು ಮಾತನಾಡಿಕೊಂಡಿರುವುದನ್ನು ಸಹ ಪತ್ನಿ ಹೇಳಿದ್ದಾರೆ.
 
ಅಪರಾಧದ ಹೆಚ್ಚಳದ ಬಗ್ಗೆ ವಾಷಿಂಗ್ಟನ್‌ ಡಿಸಿ ಸಾರ್ವಜನಿಕ ಸಭೆಯ ದಿನವೇ ಈ ಘಟನೆ ನಡೆದಿದೆ ಎಂದೂ ತಿಳಿದುಬಂದಿದೆ. ಆ ಪ್ರದೇಶದಲ್ಲಿ ಕಾರು ಕಳ್ಳತನ 7% ಕಡಿಮೆಯಾಗಿದೆ. ಅಪಾಯಕಾರಿ ಆಯುಧದಿಂದ ಆಕ್ರಮಣ ಶೇ. 6 ರಷ್ಟು ಹಾಗೂ ವಾಹನ ಕಳ್ಳತನವು 11% ಕಡಿಮೆಯಾಗಿದೆ. ಒಟ್ಟಾರೆ, ಸೂಚ್ಯಂಕಿತ ಹಿಂಸಾತ್ಮಕ ಅಪರಾಧವುಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದ್ದರೆ, ದರೋಡೆ ಹೆಚ್ಚಾಗಿದೆ ಎಂದೂ ವಾಷಿಂಗ್ಟನ್‌ ಡಿಸಿ ಪೊಲೀಸ್ ಮುಖ್ಯಸ್ಥೆ ಪಮೇಲಾ ಸ್ಮಿತ್ ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: ಥೂ.. ಪಾಪಿ.. ಶವವನ್ನೂ ಬಿಡಲ್ವಾ? 79 ವರ್ಷದ ಮುದುಕಿ ಹೆಣದ ಜತೆ ಸೆಕ್ಯುರಿಟಿ ಗಾರ್ಡ್‌ ಲೈಂಗಿಕ ಕ್ರಿಯೆ

Follow Us:
Download App:
  • android
  • ios