Asianet Suvarna News Asianet Suvarna News

ಅಯ್ಯೋ ಕಂದಮ್ಮ! ಮಗು ತಂದೆ ಯಾರೆಂದು ಜಗಳ: ಒಂದೂವರೆ ತಿಂಗಳ ಮಗುವನ್ನೇ ಕೊಂದ ದಂಪತಿ

ಕೊಚ್ಚಿಯಲ್ಲಿ ಒಂದೂವರೆ ತಿಂಗಳ ಮಗುವನ್ನು ಕೊಂದ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

kerala couple held for alleged killing of one and a half month old baby ash
Author
First Published Dec 5, 2023, 11:22 AM IST

ಕೊಚ್ಚಿ (ಡಿಸೆಂಬರ್ 5, 2023): ಕೇರಳದ ಕೊಚ್ಚಿಯ ಲಾಡ್ಜ್‌ನಲ್ಲಿ ಒಂದೂವರೆ ತಿಂಗಳ ಮಗುವನ್ನು ಕೊಂದ ಆರೋಪದ ಮೇಲೆ ಲಿವ್ - ಇನ್‌ - ರಿಲೇಷನ್‌ಶಿಪ್‌ನಲ್ಲಿದ್ದ ಪುರುಷ ಮತ್ತು ಮಹಿಳೆಯನ್ನು ಸೋಮವಾರ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮಗುವಿನ ತಲೆಬುರುಡೆಯ ಗಾಯಗಳು ಬಹಿರಂಗಗೊಂಡ ನಂತರ, ಎಲಮಕ್ಕರ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆಯಲಾಗಿದೆ. 

ವರದಿಗಳ ಪ್ರಕಾರ, ಮಹಿಳೆ ಅಶ್ವತಿ ಅಲಪ್ಪುಳದವರಾಗಿದ್ದು, ಅವರ ಸಂಗಾತಿ ಶನಿಫ್ ಕಣ್ಣೂರಿನವರು. ಭಾನುವಾರ ಬೆಳಗ್ಗೆ 8.30 ರ ಸುಮಾರಿಗೆ ದಂಪತಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಗು ಯಾವುದೇ ಸ್ಪಂದನೆ ಮಾಡ್ತಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮೈಮೇಲೆ ಗಾಯಗಳಿರುವುದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಥೂ.. ಪಾಪಿ.. ನಾಲ್ವರು ಸ್ನೇಹಿತರ ಜೊತೆ ಸೇರಿ ತಂಗಿ ಮೇಲೆ ರೇಪ್‌ ಮಾಡಿ ಕೊಲೆ ಮಾಡ್ದ!

ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ತಲೆಬುರುಡೆಯ ಗಾಯಗಳು ಬಹಿರಂಗಗೊಂಡ ನಂತರ ಎಲಮಕ್ಕರ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ತನಿಖೆ ಆರಂಭಿಸಲಾಗಿದೆ ಎಂದೂ ತಿಳಿದುಬಂದಿದೆ. ದಂಪತಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಮತ್ತು ಬಳಿಕ ಲವ್‌ ಮಾಡಿ ಒಟ್ಟಿಗೆ ಇದ್ದರು ಎಂದೂ ತಿಳಿದುಬಂದಿದೆ.

ಇನ್ನೊಂದೆಡೆ, ಮಹಿಳೆ ಅದಕ್ಕೂ ಮುನ್ನ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಹಾಗೂ 4 ತಿಂಗಳ ಗರ್ಭಿಣಿಯಾಗಿದ್ದಳು ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ, ಮಗುವಿನ ಪಿತೃತ್ವದ ವಿಚಾರದಲ್ಲಿ ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಹತ್ಯೆಯಲ್ಲಿ ಮಗುವಿನ ತಾಯಿಯ ಪಾತ್ರದ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಥೂ.. ಪಾಪಿ.. ಶವವನ್ನೂ ಬಿಡಲ್ವಾ? 79 ವರ್ಷದ ಮುದುಕಿ ಹೆಣದ ಜತೆ ಸೆಕ್ಯುರಿಟಿ ಗಾರ್ಡ್‌ ಲೈಂಗಿಕ ಕ್ರಿಯೆ

ಆದರೆ, ಮಗುವಿನ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಅಶ್ವತಿ ಸಮರ್ಥಿಸಿಕೊಂಡಿದ್ದಾಳೆ. ತಾನು ನಿದ್ರಿಸುತ್ತಿದ್ದೆ ಮತ್ತು ಮಗುವಿಗೆ ಏನಾಯಿತು ಎಂದು ತಿಳಿದಿಲ್ಲ ಎಂದು ಅಶ್ವತಿ ಹೇಳಿದ್ದಾರೆ. ಇವರು ಕಾನೂನುಬದ್ಧವಾಗಿ ಮದುವೆಯಾಗಿಲ್ಲ ಎಂದು ವರದಿಯಾಗಿದ್ದು, ಕೆಲ ದಿನಗಳಿಂದ ಕರುಕಪ್ಪಲ್ಲಿಯ ಲಾಡ್ಜ್‌ನಲ್ಲಿ ವಾಸವಾಗಿದ್ದರು.

ಈ ಮಧ್ಯೆ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ವಿವರವಾದ ಹೇಳಿಕೆಯನ್ನು ಪಡೆದ ನಂತರ ಬಂಧಿಸಲಾಗುವುದು ಎಂದೂ ಎಲಮಕ್ಕರ ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಕೋಟಾದಲ್ಲಿ ಮತ್ತೊಬ್ಬಳು ನೀಟ್‌ ಆಕಾಂಕ್ಷಿ ಆತ್ಮಹತ್ಯೆ: ವರ್ಷದಲ್ಲೇ 26 ವಿದ್ಯಾರ್ಥಿಗಳು ಬಲಿ

ಇತ್ತೀಚಿನ ವರದಿಗಳ ಪ್ರಕಾರ, ಆರೋಪಿಗಳು ಶಿಶು ಜನಿಸಿದ ದಿನವೇ ಕೊಲ್ಲಲು ಯೋಜನೆ ರೂಪಿಸಿದ್ದರು. ಒಂದು ತಿಂಗಳು ಅವಕಾಶಕ್ಕಾಗಿ ಕಾಯುತ್ತಿದ್ದರು ಮತ್ತು ಮಗುವನ್ನು ಕೊಲ್ಲಲು ಲಾಡ್ಜ್‌ನಲ್ಲಿ ರೂಮ್‌ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ. 

ಪೊಲೀಸ್ ಮಾಹಿತಿದಾರನ ಕೊಲೆ ಮಾಡಿ 16 ತುಂಡುಗಳಾಗಿ ಕತ್ತರಿಸಿದ ತಂದೆ, ಮಗ: 2 ತಿಂಗಳ ಹಳೆಯ ಕೇಸ್‌ಗೆ ಟ್ವಿಸ್ಟ್‌!

Follow Us:
Download App:
  • android
  • ios