Asianet Suvarna News Asianet Suvarna News

ಥೂ.. ಪಾಪಿ.. ನಾಲ್ವರು ಸ್ನೇಹಿತರ ಜೊತೆ ಸೇರಿ ತಂಗಿ ಮೇಲೆ ರೇಪ್‌ ಮಾಡಿ ಕೊಲೆ ಮಾಡ್ದ!

ಸ್ನೇಹಿತರೊಂದಿಗೆ ತಂಗಿಯ ಮೇಲೆ ಗ್ಯಾಂಗ್‌ ರೇಪ್‌ ಮಾಡಿದ ವ್ಯಕ್ತಿ ಬಳಿಕ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಒಡಿಶಾದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

odisha man along with four friends rapes sister kills her ash
Author
First Published Dec 4, 2023, 4:22 PM IST

ಭುವನೇಶ್ವರ್ (ಡಿಸೆಂಬರ್ 4, 2023): ದಿನೇ ದಿನೇ ಒಂದಿಲ್ಲೊಂದು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿರುತ್ತದೆ. ಆದರೆ, ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ತನ್ನ ಸಹೋದರಿಯ ಮೇಲೆ ರೇಪ್‌ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಸ್ನೇಹಿತರೊಂದಿಗೆ ತಂಗಿಯ ಮೇಲೆ ಗ್ಯಾಂಗ್‌ ರೇಪ್‌ ಮಾಡಿದ ವ್ಯಕ್ತಿ ಬಳಿಕ ಆಕೆಯನ್ನು ಕೊಂದಿದ್ದಾನೆ ಎಂದೂ ಪೊಲೀಸರು ಸೋಮವಾರ ತಿಳಿಸಿದ್ದಾರೆ. ನವೆಂಬರ್ 3 ರಂದು ಚಕಪಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆದರೆ ರೇಪ್‌ ಮಾಡಿ ಕೊಲೆ ಮಾಡಿದ್ದು ಯಾರು ಎಂಬುದು ಒಂದು ತಿಂಗಳ ಕಾಲ ರಹಸ್ಯವಾಗೇ ಉಳಿದಿತ್ತು. ಆದರೆ ಪೊಲೀಸರು ಪ್ರಕರಣವನ್ನು ಭೇದಿಸಿದ ನಂತರ ವ್ಯಕ್ತಿ ಮತ್ತು ಆತನ ಸ್ನೇಹಿತರನ್ನು ಶನಿವಾರ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಇದನ್ನು ಓದಿ: ಥೂ.. ಪಾಪಿ.. ಶವವನ್ನೂ ಬಿಡಲ್ವಾ? 79 ವರ್ಷದ ಮುದುಕಿ ಹೆಣದ ಜತೆ ಸೆಕ್ಯುರಿಟಿ ಗಾರ್ಡ್‌ ಲೈಂಗಿಕ ಕ್ರಿಯೆ

25ರ ಹರೆಯದ ಮಹಿಳೆಗೆ ತನ್ನ ಸಹೋದರ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಬಳಿಕ, ಅದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದು, ಇಲ್ಲದಿದ್ದರೆ ಇತರರಿಗೆ ಈ ಬಗ್ಗೆ ತಿಳಿಸುವುದಾಗಿಯೂ ಬೆದರಿಕೆ ಹಾಕಿದ್ದಳು. ಈ ಹಿನ್ನೆಲೆ, ಆಕೆಯನ್ನು ತಡೆಯಲು ಆರೋಪಿ ಯೋಜನೆ ರೂಪಿಸಿದ್ದ. ಘಟನೆ ನಡೆದ ದಿನ ಮಹಿಳೆ ಸಿಯಾಲಿ ಎಲೆಗಳನ್ನು ಸಂಗ್ರಹಿಸಲು ಸಮೀಪದ ಕಾಡಿಗೆ ತೆರಳಿದ್ದಳು. ಅವಳ ಅಣ್ಣನೂ ತನ್ನ ಹಸುಗಳೊಂದಿಗೆ ಅಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ, ಆತ ತನ್ನ ನಾಲ್ವರು ಸ್ನೇಹಿತರನ್ನು ಕಾಡಿಗೆ ಕರೆಸಿ, ಮದ್ಯಪಾನ ಸೇವಿಸಿ ಕುಡಿತದ ಅಮಲಿನಲ್ಲಿ ಸರದಿಯಂತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದೂ ಪೊಲೀಸರು ವಿವರಿಸಿದ್ದಾರೆ. ಮಹಿಳೆ ಜಗಳವಾಡುತ್ತಿದ್ದಂತೆಯೇ ಆಕೆಯ ಕತ್ತು ಹಿಸುಕಿ, ನಂತರ ಕೊಡಲಿಯಿಂದ ಹಲ್ಲೆ ನಡೆಸಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಚಾಕಪಾಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಲಿತ್ ಮೋಹನ್ ಸಾಗರ್ ತಿಳಿಸಿದ್ದಾರೆ. ಅಲ್ಲದೆ, ಆರೋಪಿ ಸಹೋದರನೇ ನವೆಂಬರ್ 6 ರಂದು ಪೊಲೀಸರಿಗೆ ತಂಗಿ ನಾಪತ್ತೆಯಾದ ದೂರು ನೀಡಿದ್ದಾನೆ ಎಂದೂ ಅವರು ಹೇಳಿದರು.

ಇದನ್ನು ಓದಿ: ಕೋಟಾದಲ್ಲಿ ಮತ್ತೊಬ್ಬಳು ನೀಟ್‌ ಆಕಾಂಕ್ಷಿ ಆತ್ಮಹತ್ಯೆ: ವರ್ಷದಲ್ಲೇ 26 ವಿದ್ಯಾರ್ಥಿಗಳು ಬಲಿ

ಮಹಿಳೆಯ ಕೊಳೆತ ಶವವು ನವೆಂಬರ್ 7 ರಂದು ಕಾಡಿನಲ್ಲಿ ಪತ್ತೆಯಾಗಿದೆ ಮತ್ತು ಮರಣೋತ್ತರ ಪರೀಕ್ಷೆಯಲ್ಲಿ, ಆಕೆಯ ಮೇಲೆ ಅನೇಕ ಜನರು ಅತ್ಯಾಚಾರವೆಸಗಿದ್ದಾರೆ ಮತ್ತು ನಂತರ ಕೊಂದಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ, ಅವರು ಯಾರು ಎಂಬುದು ಮಾತ್ರ ತಿಂಗಳ ಕಾಲ ಗುಟ್ಟಾಗಿ ಉಳಿದಿತ್ತು. 

ಪೊಲೀಸ್ ಮಾಹಿತಿದಾರನ ಕೊಲೆ ಮಾಡಿ 16 ತುಂಡುಗಳಾಗಿ ಕತ್ತರಿಸಿದ ತಂದೆ, ಮಗ: 2 ತಿಂಗಳ ಹಳೆಯ ಕೇಸ್‌ಗೆ ಟ್ವಿಸ್ಟ್‌!

Follow Us:
Download App:
  • android
  • ios