ಫೀನಿಕ್ಸ್‌ನ ಬ್ಯಾನರ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಶವಾಗಾರದಲ್ಲಿ ನಡೆದ ಘಟನೆಗಳ ನಂತರ ಪೊಲೀಸರು ಆರೋಪಿ ರಾಂಡಾಲ್ ಬರ್ಡ್ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದರು. ಅಕ್ಟೋಬರ್ ಅಂತ್ಯದಲ್ಲಿ ಈ ಸಂಬಂಧ ತನಿಖೆ ಪ್ರಾರಂಭವಾಗಿತ್ತು. 

ವಾಷಿಂಗ್ಟನ್‌ ಡಿಸಿ (ಡಿಸೆಂಬರ್ 2, 2023): ದಿನೇ ದಿನೇ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇನ್ನು, ಅಮೆರಿಕದ ಅರಿಝೋನಾದಲ್ಲಿ ವಯಸ್ಸಾದ ಮಹಿಳೆಯ ಹೆಣದ ಮೇಲೂ ಲೈಂಗಿಕ ಕ್ರಿಯೆ ನಡೆಸಿ ವ್ಯಕ್ತಿಯೊಬ್ಬರು ಸಿಕ್ಕಿಬಿದ್ದಿದ್ದಾರೆ. 

ಅರಿಝೋನಾ ಆಸ್ಪತ್ರೆಯೊಳಗಿನ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್‌ನನ್ನು ಈ ವಾರ ಅರೆಸ್ಟ್‌ ಮಾಡಲಾಗಿದೆ. 79 ವರ್ಷದ ಮಹಿಳೆಯ ಶವದೊಂದಿಗೆ ಲೈಂಗಿಕತೆ ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ. ಆರೋಪಿ ಈ ಕೃತ್ಯ ನಡೆಸುತ್ತಿದ್ದಾಗ ಆತನ ಸಹೋದ್ಯೋಗಿಗಳು ಆರೋಪಿಯನ್ನು ಹಿಡಿದಿದ್ದಾರೆ ಎಂದು ದಿ ನ್ಯೂಯಾರ್ಕ್ ಪೋಸ್ಟ್‌ ವರದಿ ಮಾಡಿದೆ.

ಇದನ್ನು ಓದಿ: ಕೋಟಾದಲ್ಲಿ ಮತ್ತೊಬ್ಬಳು ನೀಟ್‌ ಆಕಾಂಕ್ಷಿ ಆತ್ಮಹತ್ಯೆ: ವರ್ಷದಲ್ಲೇ 26 ವಿದ್ಯಾರ್ಥಿಗಳು ಬಲಿ

ಫೀನಿಕ್ಸ್‌ನ ಬ್ಯಾನರ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಶವಾಗಾರದಲ್ಲಿ ನಡೆದ ಘಟನೆಗಳ ನಂತರ ಪೊಲೀಸರು ಆರೋಪಿ ರಾಂಡಾಲ್ ಬರ್ಡ್ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದರು. ಅಕ್ಟೋಬರ್ ಅಂತ್ಯದಲ್ಲಿ ಈ ಸಂಬಂಧ ತನಿಖೆ ಪ್ರಾರಂಭವಾಗಿತ್ತು. 

ಅಕ್ಟೋಬರ್ 22 ರಂದು ಆತನ ಬೆಲ್ಟ್‌ ಬಿಚ್ಚಿತ್ತು, ಪ್ಯಾಂಟ್‌ ಜಿಪ್‌ ಕೆಳಗಿತ್ತು ಮತ್ತು ಸಮವಸ್ತ್ರವು "ಗಲೀಜಾಗಿರುವುದು" ಕಂಡುಬಂದಿದೆ ಎಂದು ಪತ್ರಿಕೆಯು ನ್ಯಾಯಾಲಯದ ದಾಖಲೆಗಳು ಹೇಳಿವೆ. ಬರ್ಡ್‌ನ ಕೆಲಸವು ಮೃತ ದೇಹಗಳನ್ನು ಶವಾಗಾರಕ್ಕೆ ತಂದು ಫ್ರೀಜರ್‌ಗೆ ಇಡುವುದು ಎಂದು ತಿಳಿದುಬಂದಿದೆ.

ಪೊಲೀಸ್ ಮಾಹಿತಿದಾರನ ಕೊಲೆ ಮಾಡಿ 16 ತುಂಡುಗಳಾಗಿ ಕತ್ತರಿಸಿದ ತಂದೆ, ಮಗ: 2 ತಿಂಗಳ ಹಳೆಯ ಕೇಸ್‌ಗೆ ಟ್ವಿಸ್ಟ್‌!

ಅಲ್ಲದೆ, ಫ್ರೀಜರ್‌ನಲ್ಲಿರುವಾಗಲೂ ಆತ ಅತ್ಯಂತ ಬೆವರುವುದು ಮತ್ತು ತುಂಬಾ ನರ್ವಸ್‌ ವರ್ತನೆ ತೋರುವುದನ್ನು ಸಹೋದ್ಯೋಗಿಗಳು ನೋಡಿದ್ದಾರೆ. ಹಾಗೂ, ವಯಸ್ಸಾದ ಮಹಿಳೆಯ ಮೃತದೇಹ ಹೊಂದಿದ್ದ ಬ್ಯಾಗ್‌ನ ಜಿಪ್‌ ಅನ್ನು ಸಹ ಬಿಚ್ಚಲಾಗಿತ್ತು. ಮತ್ತು ಆಸ್ಪತ್ರೆಗಳಲ್ಲಿ ರೋಗಿ ಅಥವಾ ಮೃತ ದೇಹಗಳನ್ನು ಸಾಗಿಸಲು ಬಳಸುವ ಚಕ್ರದ ಸ್ಟ್ರೆಚರ್‌ನ ಮೇಲೆ ಆಕೆ ಸೆಕ್ಯುರಿಟಿ ಗಾರ್ಡ್‌ನ ಬೆಲ್ಟ್‌ನೊಂದಿಗೆ ಮುಖಾಮುಖಿಯಾಗಿ ಮಲಗಿರುವುದು ಕಂಡುಬಂದಿದೆ.

ಇತರ ಭದ್ರತಾ ಸಿಬ್ಬಂದಿ ಒಳಗೆ ಹೋದಾಗ, ಆರೋಪಿ ಮಹಿಳೆಯ ದೇಹವನ್ನು ತ್ವರಿತವಾಗಿ ಮುಚ್ಚಲು ಪ್ರಯತ್ನಿಸಿದರು. ಅಲ್ಲದೆ, ಯಾವುದೋ ತೊಂದರೆಯಿಂದಾಗಿ ಮಹಿಳೆಯ ದೇಹ ಹಿಡಿದುಕೊಂಡಿದ್ದೆ ಎಂದೂ ಹೇಳಿಕೊಂಡಿದ್ದಾರೆ. ಅಲ್ಲದೆ, ಇದರಿಂದ ಬಾಡಿ ಬ್ಯಾಗ್ ಹರಿದು ಝಿಪ್ಪರ್ ಕೂಡ ಮುರಿದಿದೆ ಎಂದು ವಾದಿಸಲು ಯತ್ನಿಸಿದ್ದಾರೆ. ಆದರೆ, ಇದನ್ನು ನಂಬದ ಕಾರ್ಮಿಕರು ಮೇಲ್ವಿಚಾರಕರಿಗೆ ದೂರು ನೀಡಿದ್ದಾರೆ.

ಕೇರಳ: ಥೂ ಇವಳೆಂಥಾ ತಾಯಿ: ಅಮ್ಮನ ಪ್ರೇಮಿಗಳಿಂದ ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ: ಸಹಕರಿಸಿದ ತಾಯಿ

ಕೆಲವು ದಿನಗಳ ನಂತರ ಪೊಲೀಸರಿಗೆ ಸಂದರ್ಶನ ನೀಡಿದಾಗ ಅದೇ ಕಥೆಯನ್ನು ಪುನರಾವರ್ತಿಸಿದರು ಮತ್ತು ಏನಾಯಿತು ಎಂದು ನೆನಪಿಲ್ಲ ಎಂದೂ ಆರೋಪಿ ಹೇಳಿದ್ದಾರೆ.. ಆದರೂ, ತನಿಖಾಧಿಕಾರಿಗಳು ಆರೋಪಿಯ ಡಿಎನ್‌ಎಯನ್ನು ಘಟನಾ ಸ್ಥಳದಲ್ಲಿ ಕಂಡುಕೊಂಡಿದ್ದಾರೆ. ಹಾಗೂ. ಮಹಿಳೆಯ ದೇಹದ ಮೇಲೆ ಗಾಯಗಳು ಕಂಡುಬಂದಿದ್ದು, ಆಕೆ ಸ್ವಾಭಾವಿಕವಾಗಿ ಮೃತಪಟ್ಟಿದ್ದು, ಸಾಯುವ ವೇಳೆ ಗಾಯಗಳಿರಲಿಲ್ಲ. 

ಈ ಹಿನ್ನೆಲೆ ಆರೋಪಿ ಸೆಕ್ಯುರಿಟಿ ಗಾರ್ಡ್‌ನನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಮತ್ತು ಕೇಸ್‌ ದಾಖಲಿಸಲಾಗಿದೆ.