Crime News: ಅತ್ಯಾಚಾರ ಮಾಡಿ ಕೊಲೆ, ನಂತರ ಶವದ ಜೊತೆ ಸಂಭೋಗ: ಆರೋಪಿ ಬಂಧನ
Crime News: ಇಲ್ಲೊಬ್ಬ ವಿಕೃತ ಕಾಮಿ 24 ವರ್ಷದ ವಿವಾಹಿತ ಮಹಿಳೆಯನ್ನು ಬೆದರಿಸಿ ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಈತ ಕೊಲೆ ಮಾಡಿದ ನಂತರ ಶವದ ಜೊತೆ ಸತತ ಸಂಭೋಗದಲ್ಲಿ ಭಾಗಿಯಾಗಿದ್ದಾನೆ. ವಿಕೃತ ಮನಸ್ಸಿನ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ: ಮಹಿಳೆಯ ಅತ್ಯಾಚಾರ ಮಾಡಿ ನಂತರ ಆಕೆಯನ್ನು ಕೊಲೆ ಮಾಡಿದ್ದಲ್ಲದೇ ಶವದ ಜತೆಗೂ ಲೈಂಗಿಕ ಕ್ರಿಯೆ ನಡೆಸಿದ ವಿಕೃತ ಕಾಮಿಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ 25 ವರ್ಷದವನಾಗಿದ್ದು, ಕಟ್ಟಡ ನಿರ್ಮಾಣದ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದಾನೆ. ಹೈದರಾಬಾದಿನ ಚೌತುಪ್ಪಾಲ್ ನಗರದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಬುಧವಾರ ಆರೋಪಿಯನ್ನು ಬಂಧಿಸಲಾಗಿದೆ.
ಹೈದರಾಬಾದಿನಿಂದ 50 ಕಿಲೋಮೀಟರ್ ದೂರ ಇರುವ ಚೌತುಪ್ಪಾಲ್ ಎಂಬ ನಗರದಲ್ಲಿ ಆರೋಪಿ ಕಟ್ಟಡ ಕಾರ್ಮಿಕರ ಸೂಪರ್‌ವೈಸರ್ ಕೆಲಸ ಮಾಡುತ್ತಿದ್ದ. ಸಂತ್ರಸ್ಥೆಯನ್ನು ಅತ್ಯಾಚಾರ ಮಾಡಿದ ನಂತರ ಆಕೆ ಸಹಾಯಕ್ಕಾಗಿ ಕೂಗಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ನಂತರ ಆತನ ಮನಸ್ಸು ಎಷ್ಟು ವಿಕೃತವಾಗಿತ್ತೆಂದರೆ ಶವದ ಜತೆಗೂ ಸಂಭೋಗ ನಡೆಸಿದ್ದಾನೆ.
ಅವನು ವಾಸಿಸುತ್ತಿದ್ದ ಮನೆಯ ಹತ್ತಿರದಲ್ಲೇ ಇದ್ದ ಗೋಡೌನ್‌ನಲ್ಲಿ 24 ವರ್ಷದ ಸತ್ರಸ್ಥೆ ತನ್ನ ಗಂಡನ ಜೊತೆ ವಾಸವಿದ್ದಳು. ಆರೋಪಿ ಹಲವು ದಿನಗಳಿಂದ ಆಕೆಯನ್ನು ಕಾಮದೃಷ್ಟಿಯಿಂದ ನೋಡುತ್ತಿದ್ದ ಎನ್ನಲಾಗಿದೆ. ಅಲ್ಲೇ ಹತ್ತಿರದಲ್ಲಿದ್ದ ಕಾಲೇಜೊಂದರಲ್ಲಿ ಸಂತ್ರಸ್ಥೆಯ ಗಂಡ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ಬಗ್ಗೆ ಆರೋಪಿಗೆ ತಿಳಿದಿತ್ತು. ಕೆಲಸಕ್ಕೆ ಹೋದರೆ ಆತ ಬರುವುದು ತುಂಬಾ ತಡವಾಗುತ್ತದೆ ಮತ್ತು ಆ ಸಮಯದಲ್ಲಿ ಸಂತ್ರಸ್ಥೆ ಒಬ್ಬಳೇ ಇರುತ್ತಾಳೆ ಎಂಬುದನ್ನು ಆರೋಪಿ ಅರಿತಿದ್ದ. ಇದೇ ಸೋಮವಾರ, ಗಂಡ ಇರದ ಸಮಯ ನೋಡಿ ಗೋಡೌನ್ ಒಳಗೆ ನುಗ್ಗಿದ ಆರೋಪಿ ಸಾಯಿಸುವ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರ ಆಕೆಯನ್ನು ಅತ್ಯಾಚಾರ ಮಾಡಿ ಸಾಯಿಸಿದ್ದಾನೆ.
ಇದನ್ನೂ ಓದಿ: ನೋಡಲು ಸುಂದರವಾಗಿಲ್ಲ ಅಂತ ಹೆಂಡ್ತಿಗೆ ಕಿರುಕುಳ: ಗಂಡನ ಕಾಟ ತಾಳದೆ ಮಹಿಳೆ ಆತ್ಮಹತ್ಯೆ
ಚೌತುಪ್ಪಾಲ್ ಎಸಿಪಿ ಉದಯ್ ರೆಡ್ಡಿ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಆರೋಪಿ ಸಂತ್ರಸ್ಥೆಯನ್ನು ಚೂಪಗಿನ ವಸ್ತುವಿನಿಂದ ತಲೆಗೆ ಹೊಡೆದು ಸಾಯಿಸಿದ್ದಾನೆ. ಅದಾದ ನಂತರ ಶವದ ಜೊತೆ ಹಲವಾರು ಬಾರಿ ಸಂಭೋಗ ನಡೆಸಿದ್ದಾನೆ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ. ಅತ್ಯಾಚಾರ ಮತ್ತು ಕೊಲೆಯ ನಂತರ ಸಂತ್ರಸ್ಥೆ ಹಾಕಿಕೊಂಡಿದ್ದ ಚಿನ್ನದ ಆಭರಣ ದೋಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಸಂತ್ರಸ್ಥೆಯ ಗಂಡ ಕೊಟ್ಟ ದೂರನ್ನು ಆಧರಿಸಿ ಆರೋಪಿ ವಿರುದ್ಧ ಅತ್ಯಾಚಾರ, ಕೊಲೆ, ದರೋಡೆ ಇತ್ಯಾದಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಆರೋಪಿ ಪೊಲೀಸರಿಗೆ ಘಟನೆಯ ಬಗ್ಗೆ ವಿವರವಾಗಿ ಹೇಳಿಕೆ ನೀಡಿದ್ದಾನೆ. ಆಗಲೇ ಪೊಲೀಸರಿಗೆ ಆರೋಪಿ ಎಂತಾ ವಿಕೃತ ಮನಸ್ಸಿನವನು ಮತ್ತು ನಿಷ್ಕರುಣಿ ಎಂಬುದು ಅರ್ಥವಾಗಿದೆ. ಮೊದಲು ಮಹಿಳೆಗೆ ಆತನ ಜೊತೆ ಸಂಭೋಗ ನಡೆಸುವಂತೆ ಕೋರಿದ್ದಾನೆ, ಆಕೆ ನಿರಾಕರಿಸಿದಾಗ ಕೊಲೆ ಮಾಡುವಂತೆ ಬೆದರಿಸಿದ್ದಾರೆ. ಆಕೆ ಸಹಾಯಕ್ಕೆ ಕಿರುಚಲು ಸಾಧ್ಯವಾಗದಂತೆ ಬಾಯಿಕಟ್ಟಿ ಹಿಡಿದು ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರ ಮತ್ತೆ ಮಹಿಳೆಯನ್ನು ಬೆದರಿಸಿದ್ದಾನೆ, ವಿಚಾರ ಗಂಡನಿಗೆ ಅಥವಾ ಇನ್ಯಾರಿಗಾದರೂ ಹೇಳಿದರೆ ಸಾಯಿಸುತ್ತೇನೆ ಎಂದು ಬೆದರಿಸಿದ್ದಾನೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, 20 ವರ್ಷದ ಮಹಿಳೆಯ ಮೇಲೆ ಕೇಸ್!
ಇಷ್ಟೆಲ್ಲಾ ಆದ ಬಳಿಕವೂ ಆರೋಪಿ ತೃಪ್ತನಾಗಿಲ್ಲ, ಮತ್ತೆ ವಾಪಸ್ ಬಂದು ಆಕೆಯ ಮೇಲೆ ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರವೂ ಕಾಮತೃಷೆ ತಣ್ಣಗಾಗಿಲ್ಲ, ಶವದ ಜತೆಯೂ ನಿರಂತರ ಸಂಭೋಗ ನಡೆಸಿದೆ ಎಂದು ಆರೋಪಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಇಂತಹ ವಿಕೃತ ಮನಸ್ಥಿತಿಗಳ ನಡುವೆ ಹೆಣ್ಣುಮಕ್ಕಳು ಅದೆಷ್ಟು ಸುರಕ್ಷಿತವಾಗಿರುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ರೀತಿಯ ಘಟನೆಗಳು ಪದೇ ಪದೇ ಘಟಿಸುತ್ತಲೇ ಇದೆ. ವಿಕೃತ ಮನಸ್ಸುಗಳು ಸರಿಹೋಗುವವರೆಗೂ ಈ ರೀತಿಯ ಕೃತ್ಯಕ್ಕೆ ಅಂತ್ಯವಿಲ್ಲ.