ಡೆಲಿವರಿ ಬಾಯ್‌ಗೆ ಥಳಿಸಿದ ಟ್ರಾಫಿಕ್ ಪೇದೆಯ ವರ್ಗಾವಣೆ: ವಿಡಿಯೋ ವೈರಲ್
ತಮಿಳುನಾಡಿನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್‌ಗೆ ಅಮಾನುಷವಾಗಿ ಥಳಿಸಿದ್ದ ಪೊಲೀಸ್ ಪೇದೆಯನ್ನು ವರ್ಗಾವಣೆ ಮಾಡಲಾಗಿದೆ. ತಮಿಳುನಾಡಿನ ಅವಿನಾಶಿ ರಸ್ತೆಯ ( Avinashi Road) ಟ್ರಾಫಿಕ್ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿತ್ತು.
ಕೊಯಮತ್ತೂರು: ತಮಿಳುನಾಡಿನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್‌ಗೆ ಅಮಾನುಷವಾಗಿ ಥಳಿಸಿದ್ದ ಪೊಲೀಸ್ ಪೇದೆಯನ್ನು ವರ್ಗಾವಣೆ ಮಾಡಲಾಗಿದೆ. ತಮಿಳುನಾಡಿನ ಅವಿನಾಶಿ ರಸ್ತೆಯ ( Avinashi Road) ಟ್ರಾಫಿಕ್ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿತ್ತು. ಸಿಂಗಾನಲ್ಲೂರಿನ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬ ( Singanallur police station) ಫುಡ್ ಡೆಲಿವರಿ ಮಾಡುತ್ತಿದ್ದ ಯುವಕನೋರ್ವನ ಮೇಲೆ ಅಮಾನಷವಾಗಿ ಕಪಾಳಮೋಕ್ಷ ಮಾಡಿದ್ದ. ಟ್ರಾಫಿಕ್ ಪೊಲೀಸ್ ಪೇದೆ ಡೆಲಿವರಿ ಬಾಯ್‌ಗೆ ಥಳಿಸುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಪೇದೆಯ ಕ್ರಮಕ್ಕೆ ಜನ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.
ಸಿಂಗಾನಲ್ಲೂರು ಪೊಲೀಸ್ ಠಾಣೆಯ ಗ್ರೇಡ್-1 ಕಾನ್‌ಸ್ಟೆಬಲ್ ಸತೀಶ್ ಎಂಬಾತ ಆಹಾರ ಪೂರೈಕೆ ಮಾಡುತ್ತಿದ್ದ ಸ್ವಿಗ್ಗಿ ಏಜೆಂಟ್‌ಗೆ ಥಳಿಸಿದ್ದಲ್ಲದೇ ಆತನ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಆತನ ಮೋಟಾರ್ ಸೈಕಲ್‌ಗೂ ಹಾನಿ ಮಾಡಿದ್ದರು.
ಈಗ ಸತೀಶ್‌ನನ್ನು ಕೊಯಮತ್ತೂರಿನ ಪೊಲೀಸ್ ನಿಯಂತ್ರಣ ಕೊಠಡಿಗೆ ವರ್ಗಾಯಿಸಲಾಗಿದೆ. 38 ವರ್ಷದ ಮೋಹನಸುಂದರಂ ಅವರು ಕಳೆದ ಎರಡು ವರ್ಷಗಳಿಂದ ಆಹಾರ ಸಂಗ್ರಾಹಕ ಸ್ವಿಗ್ಗಿಯಲ್ಲಿ ಡೆಲಿವರಿ ಪಾಲುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ಸಂಜೆ ಮೋಹನಸುಂದರಂ ಅವರು ಖಾಸಗಿ ಶಾಲಾ ಬಸ್ ಚಾಲಕನೊಬ್ಬ ಅತಿರೇಕ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ವಾಹನ ಚಲಾಯಿಸುವುದನ್ನು ಗಮನಿಸಿದ್ದಾರೆ. ಈ ಬಸ್ ಜನನಿಬಿಡ ರಸ್ತೆಯ ಮಾಲ್‌ನ ಬಳಿ ಎರಡು ವಾಹನಗಳು ಮತ್ತು ಪಾದಚಾರಿಗಳಿಗೆ ಬಸ್ ಡಿಕ್ಕಿ ಹೊಡೆಯುವುದರಲ್ಲಿತ್ತು. ಈ ವೇಳೆ ಚಾಲಕನನ್ನು ವಿಚಾರಿಸಿದಾಗ ಸ್ವಲ್ಪ ಟ್ರಾಫಿಕ್ ಜಾಮ್ ಆಗಿತ್ತು.
ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಫುಡ್ ಡೆಲಿವರಿ ಬಾಯ್ ಸಾವು
ಇದಕ್ಕೆ ಸಿಟ್ಟುಗೊಂಡ ಪೊಲೀಸ್ ಕಾನ್ಸ್‌ಟೇಬಲ್ ಸತೀಶ್ ಶಾಲಾ ಬಸ್‌ನ ಮಾಲೀಕರು ಯಾರೆಂದು ನಿಮಗೆ ತಿಳಿದಿದೆಯೇ ಮತ್ತು ಯಾವುದೇ ವಾಹನ ದಟ್ಟಣೆಯ ಸಮಸ್ಯೆ ಎದುರಾದರೆ, ಅದನ್ನು ಪೊಲೀಸರು ಪರಿಶೀಲಿಸುತ್ತಾರೆ ಎಂದು ಮೋಹನ ಸುಂದರಂ ( Mohanasundram) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸ್ ಪೇದೆ ಮೋಹನಸುಂದರಂ ಅವರಿಗೆ ನಿಂದಿಸಿದ್ದಲ್ಲದೇ ಕಪಾಳಮೋಕ್ಷ ಮಾಡಿ ಅವರ ಮೊಬೈಲ್ ಫೋನ್ ಕಸಿದುಕೊಂಡಿದ್ದರು. ಅಲ್ಲದೇ ಅವರ ಮೋಟಾರ್ ಸೈಕಲ್ ಅನ್ನು ಹಾನಿಗೊಳಿಸಿದ್ದರು.
ಓಲಾ ಝೊಮ್ಯಾಟೋದಲ್ಲಿ ದುಡಿಯುತ್ತ ಸಾಫ್ಟವೇರ್ ಇಂಜಿನಿಯರ್ ಆದ ಯುವಕ
ಇದಾದ ಬಳಿಕ ಮೋಹನಸುಂದರಂ ಅವರು ಶನಿವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಅಧಿಕಾರಿಗಳು ಸತೀಶ್ ಅವರನ್ನು ನಿಯಂತ್ರಣ ಕೊಠಡಿಗೆ ವರ್ಗಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.