Thirthahalli BBA student death: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಪ್ರಾಪ್ತಿ (21) ಎಂಬ ಬಿಬಿಎ ವಿದ್ಯಾರ್ಥಿನಿ ನೇಣುಬಿಗಿದು ಆತ್ಮ೧ಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಮಾಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ, (ನ. 14): ಪದವಿ ವಿದ್ಯಾರ್ಥಿನಿಯೋರ್ವಳು ಮನೆ ಬಳಿ ಮರಣಕ್ಕೆ ನೇಣುಬಿಗಿದು ಆತ್ಮ೧ಹತ್ಯೆ ಮಾಡಿಕೊಂಡ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ ದಬ್ಬಣಗದ್ದೆ ಸಮೀಪದ ಬಚ್ಚನಕೋಡಿಗೆಯಲ್ಲಿ ನಡೆದಿದೆ.
ಪ್ರಾಪ್ತಿ (21), ಮೃತ ದುರ್ದೈವಿ. ರಮೇಶ್ ಆಚಾರ ಎಂಬುವವರ ಪುತ್ರಿಯಾಗಿರುವ ಮೃತ ವಿದ್ಯಾರ್ಥಿನಿ. ಇಂದು ಬೆಳಗಿನ ಜಾವ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಾಪ್ತಿ ಪತ್ತೆಯಾಗಿದ್ದಾಳೆ.
ಬಿಬಿಎ ಓದುತ್ತಿದ್ದ ಪ್ರಾಪ್ತಿ:
ಬಾಳೆಬೈಲಿನ ಪದವಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿಬಿಎ ಪದವಿ ಓದುತ್ತಿದ್ದ ಪ್ರಾಪ್ತಿ, ಬೆಳಗ್ಗೆ ಜಾವ ನೇಣುಬಿಗಿದ ಸ್ಥಿತಿಯಲ್ಲಿರುವುದು ಕಂಡು ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಶೈಕ್ಷಣಿಕ ಒತ್ತಡದಿಂದ ನೇಣುಬಿಗಿದುಕೊಂಡಳಾ, ಇನ್ನೇನಾದರೂ ತೊಂದರೆಯಲ್ಲಿದ್ದಳಾ, ಪ್ರಾಪ್ತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಮಾಳೂರು ಪೊಲೀಸರು ಭೇಟಿ:
ಮಾಳೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರಾಪ್ತಿಯ ಕುಟುಂಬಸ್ಥರು, ಸ್ನೇಹಿತರು, ಕಾಲೇಜು ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿ ಪ್ರಾಪ್ತಿ ಸಾವಿಗೆ ಕಾರಣ ಏನು ಎಂಬ ಬಗ್ಗೆ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ.


