ದಿಗ್ಗಜ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಮನೆಯಲ್ಲಿ ದುರಂತ!
ಟೀಂ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಚೇತೇಶ್ವರ್ ಪೂಜಾರ ಅವರ ಭಾವಮೈದುನ ಜೀತ್ ಪಬಾರಿ ರಾಜ್‌ಕೋಟ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಪೂಜಾರ ಭಾವಮೈದುನ ಸಾವಿಗೆ ಶರಣು
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಮನೆಯಲ್ಲಿ ದುರಂತ ಸಂಭವಿಸಿದೆ. ಪೂಜಾರ ಪತ್ನಿ ಪೂಜಾ ಪಬಾರಿ ಅವರ ಸಹೋದರ ಜೀತ್ ಪಬಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್‌ಕೋಟ್‌ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
2024ರಲ್ಲಿ ದಾಖಲಾದ ಅ*ತ್ಯಾ*ಚಾ*ರ ಪ್ರಕರಣ
ಜೀತ್ ಪబారి ಆತ್ಮಹತ್ಯೆಗೂ ಮುನ್ನ ಅವರ ಮೇಲೆ ಅ*ತ್ಯಾ*ಚಾ*ರ*ದ ಪ್ರಕರಣ ದಾಖಲಾಗಿದ್ದ ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. 2024ರಲ್ಲಿ ಯುವತಿಯೊಬ್ಬಳು ತಮ್ಮ ಮೇಲೆ ಜೀತ್ ಒತ್ತಾಯಪೂರ್ವಕ ದೈಹಿಕ ಸಂಪರ್ಕ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಳು.
ಒತ್ತಾಯಪೂರ್ವಕ ದೈಹಿಕ ಸಂಪರ್ಕ
ಮದುವೆಯಾಗುವ ನೆಪವೊಡ್ಡಿ ನನ್ನ ಜೊತೆ ಒತ್ತಾಯಪೂರ್ವಕವಾದ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂದು ಜೀತ್ ಪಬಾರಿ ಮಾಜಿ ಗೆಳತಿ ಆರೋಪಿಸಿದ್ದರು.
ಆತ್ಮಹತ್ಯೆ ಸಮಯದಲ್ಲಿ ಕಮೆಂಟ್ರಿ ಮಾಡುತ್ತಿದ್ದ ಪೂಜಾರ
ಜೀತ್ ಪಬಾರಿ ಕುಟುಂಬವು ಹತ್ತಿ ವ್ಯಾಪಾರ ನಡೆಸುತ್ತಿತ್ತು. ಪೂಜಾರ ಅವರು ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಕಾಮೆಂಟರಿ ನೀಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಪೊಲೀಸರು ಕುಟುಂಬಸ್ಥರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

