Asianet Suvarna News Asianet Suvarna News

ಶಿರಾಳಕೊಪ್ಪ ಸಂತೆ ಬಳಿ ನಿಗೂಢ ಸ್ಫೋಟ; ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದೇನು?

ಹಂದಿಗೆ ಇಡಲು ತಂದಿದ್ದ ಸಿಡಿಮದ್ದು ಸ್ಫೋಟಗೊಂಡಿದೆ. ಶಿರಾಳಕೊಪ್ಪ ಸಂತೆಗೆ ಆಗಮಿಸಿದ್ದ ಉಮೇಶ್ ಮತ್ತು ರೂಪ ದಂಪತಿಯ ಬ್ಯಾಗ್‌ನಲ್ಲಿದ್ದ ಸಿಡಿಮದ್ದು, ಪರಿಚಯದವರ ಅಂಗಡಿಯಲ್ಲಿಟ್ಟು ಸಂತೆಗೆ ಹೊಗಿದ್ದ ವೇಳೆ ಸ್ಫೋಟಗೊಂಡಿದೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದರು.

Shiralakoppa Blast case Shivamogga SP Mithun Kumar reaction at shivamogga rav
Author
First Published Feb 18, 2024, 4:59 PM IST

ಶಿವಮೊಗ್ಗ (ಫೆ.18) ಶಿವಮೊಗ್ಗ ಶಿರಾಳಕೊಪ್ಪ ಬಸ್ ನಿಲ್ದಾಣ ಸಮೀಪದ ಫುಟ್ಪಾತ್‌ನಲ್ಲಿ ನಿಗೂಢ ವಸ್ತು ಸ್ಫೋಟಗೊಂಡು ಭಾರೀ ಆತಂಕ ಸೃಷ್ಟಿಸಿದ್ದ ಘಟನೆ ಸಂಬಂಧ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಹಂದಿಗೆ ಇಡಲು ತಂದಿದ್ದ ಸಿಡಿಮದ್ದು ಸ್ಫೋಟಗೊಂಡಿದೆ. ಶಿರಾಳಕೊಪ್ಪ ಸಂತೆಗೆ ಆಗಮಿಸಿದ್ದ ಉಮೇಶ್ ಮತ್ತು ರೂಪ ದಂಪತಿಯ ಬ್ಯಾಗ್‌ನಲ್ಲಿದ್ದ ಸಿಡಿಮದ್ದು. ಸಂತೆಯಲ್ಲಿದ್ದ ಅಂಗಡಿಯೊಂದರ ಮಾಲೀಕ ಅಂತೋನಿ ದಂಪತಿಗೆ ಪರಿಚಯವಿದ್ದ. ದಂಪತಿ ಶೀಟ್ ಖರೀದಿಸಲು ಅಂಗಡಿಹೋಗಿದ್ದಾಗ ಬ್ಯಾಗ್ ಅಂಗಡಿಯಲ್ಲಿಟ್ಟು ಸಂತೆ ಹೋಗಿದ್ದ ದಂಪತಿ. ಕೆಲಹೊತ್ತಿನ ಬಳಿಕ ಬ್ಯಾಗ್‌ನಲ್ಲಿದ್ದ ಸಿಡಿಮದ್ದು ಸ್ಫೋಟಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ಕುರಿತು ಮಾಹಿತಿ ಲಭ್ಯವಾಗಿದ್ದು ಅವರ ವಿಚಾರಣೆ ಮಾಡಲಾಗುತ್ತದೆ. ಇನ್ನು ಸಿಡಿಮದ್ದು ಸ್ಫೋಟದಿಂದ ಇಬ್ಬರು ಗಾಯಗೊಂಡಿದ್ದು, ಗಾಯಾಳುವಿಗೆ ಚಿಕಿತ್ಸೆ ನೀಡಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

 

ಧಾರವಾಡ ಕೇಂದ್ರ ಕಾರಾಗೃಹದ  ಕೈದಿಗಳ ಮಧ್ಯೆ ಮಾರಾಮಾರಿ; ಮಲ್ಲೇಶ್ವರ ಬಾಂಬ್‌ ಬ್ಲಾಸ್ಟ್ ಕೈದಿಗೆ ಇರಿದ ಪಾತಕಿ ಪಚ್ಚಿ!

ಬೆಚ್ಚಿಬಿದ್ದ ಜನರು:

ಹೆಚ್ಚು ಜನಜಂಗುಳಿ ಇರುವ ಬಸ್ ನಿಲ್ದಾಣದ ಸಮೀಪದ ಫುಟ್ಪಾತ್‌ನಲ್ಲಿ ಇದ್ದಕ್ಕಿದ್ದಂತೆ ಬ್ಯಾಗ್ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಇಬ್ಬರು ಗಾಯಗೊಂಡಿದ್ದ ಸುತ್ತಲು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದ ಸ್ಥಳೀಯರು. ಸ್ಥಳಕ್ಕೆ ಶಿರಾಳಕೊಪ್ಪ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದರು. ಇದೀಗ ಅದು ಹಂದಿಬೇಟೆಗೆ ಬಳಸುವ ಮದ್ದು ಎಂಬುದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಆದರೆ ಸ್ಫೋಟಕ ವಸ್ತುಗಳನ್ನು ಬೇಜವಾಬ್ದಾರಿಯಿಂದ ಬಳಸಿರುವುದು ಇದೀಗ ಪೊಲೀಸರು ಹೆಚ್ಚಿನ ವಿಚಾರಣೆಗೆ ಮುಂದಾಗಿದ್ದಾರೆ.  

ಹರ್ದಾ ಬ್ಲಾಸ್ಟ್‌ ವೇಳೆ ದಿವ್ಯಾಂಗ ತಂದೆಯ ಜೀವ ಉಳಿಸಿ ಗಾಯಗೊಂಡಿದ್ದ 8 ವರ್ಷದ ಬಾಲಕ ಸಾವು!

Follow Us:
Download App:
  • android
  • ios