Asianet Suvarna News Asianet Suvarna News

ಧಾರವಾಡ ಕೇಂದ್ರ ಕಾರಾಗೃಹದ  ಕೈದಿಗಳ ಮಧ್ಯೆ ಮಾರಾಮಾರಿ; ಮಲ್ಲೇಶ್ವರ ಬಾಂಬ್‌ ಬ್ಲಾಸ್ಟ್ ಕೈದಿಗೆ ಇರಿದ ಪಾತಕಿ ಪಚ್ಚಿ!

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಡೆದಿದ್ದು, ಓರ್ವ ಕೈದಿ ಇರಿತದಿಂದ ಗಂಭೀರ ಗಾಯವಾಗಿದೆ. ಸುಲೇಮಾನ್, ಇರಿತಕ್ಕೆ ಒಳಗಾದ ಕೈದಿ. ಇನ್ನು ಪಚ್ಚಿ ಎಂಬಾತ ಸುಲೇಮಾನಗೆ ಇರಿದ ಕೈದಿ.

Fight between prisoners in Dharwad Central Jail today rav
Author
First Published Feb 17, 2024, 7:19 PM IST

ಧಾರವಾಡ (ಫೆ.17): ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಡೆದಿದ್ದು, ಓರ್ವ ಕೈದಿ ಇರಿತದಿಂದ ಗಂಭೀರ ಗಾಯವಾಗಿದೆ.

ಸುಲೇಮಾನ್, ಇರಿತಕ್ಕೆ ಒಳಗಾದ ಕೈದಿ. ಇನ್ನು ಪಚ್ಚಿ ಎಂಬಾತ ಸುಲೇಮಾನಗೆ ಇರಿದ ಕೈದಿ. ಪಚ್ಚಿ ಎಂಬುವವನು ಉಡುಪಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪಚ್ಚಿ. ಹಲ್ಲೆಗೊಳಗಾದ ಸುಲೇಮಾನ್ ಎಂಬುವವನು ಬೆಂಗಳೂರಿನ ಮಲ್ಲೇಶ್ವರ ಬಾಂಬ್ ಬ್ಲಾಸ್ಟ್‌ ಕೇಸ್‌ನಲ್ಲಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿದ್ದಾನೆ.

ಶಿವಮೊಗ್ಗ: ಖಾಸಗಿ ಶಾಲಾ ಬಸ್ ಪಲ್ಟಿಯಾಗಿ ವಿದ್ಯಾರ್ಥಿಗಳು ಗಂಭೀರ ಗಾಯ!

ಈ ಹಿಂದೆ ಶಿವಮೊಗ್ಗ ಜೈಲಿನಲ್ಲಿದ್ದ ಪಚ್ಚಿ. ಅಲ್ಲೂ ಇದೇ ಗಲಾಟೆ ಮಾಡಿದ್ದಕ್ಕೆ ಅವನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಿದ್ದ ಅಧಿಕಾರಿಗಳು. ಇಲ್ಲಿಗೆ ಬಂದಮೇಲೂ ಅವನ ಉಪಟಳ ಕಡಿಮೆಯಾಗಿಲ್ಲ. ಕಳೆದ ನಾಲ್ಕು ತಿಂಗಳ‌ ಹಿಂದೆ ಧಾರವಾಡ ಜೈಲು ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದ್ದ ಪಚ್ಚಿ. ಧಾರವಾಡ ಕಾರಾಗೃಹಕ್ಕೆ ಶಿಫ್ಟ್ ಆದಮೇಲೂ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದ. ಇದೀಗ ಮೂರನೇ ಬಾರಿ ಸುಲೇಮಾನ್‌ಗೆ ಇರಿದಿದ್ದಾನೆ. ಟೈಲ್ಸ್ ಅನ್ನೇ ಚಾಕು ರೀತಿ ಬಳಸಿಕೊಂಡು ಇರಿದಿದ್ದಾನೆ. ಸದ್ಯ ಘಟನೆ ಮಾಹಿತಿ ತಿಳಿದು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಎಸಿಪಿ ಬಸವರಾಜ್ ಹಾಗೂ ಉಪನಗರ ಪೊಲೀಸರು ಭೇಟಿ ನೀಡಿದ್ದು, ಪಚ್ಚಿ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿಗರಿಗೆ ತಲೆನೋವಾಗಿದ್ದ ಇರಾನಿ ಗ್ಯಾಂಗ್; ಕದ್ದ ಚಿನ್ನಾಭರಣ ಮಾರಲು ಯತ್ನಿಸಿ ಸಿಕ್ಕಿಬಿದ್ದ ಖದೀಮರು!

Follow Us:
Download App:
  • android
  • ios