Asianet Suvarna News Asianet Suvarna News

ಹರ್ದಾ ಬ್ಲಾಸ್ಟ್‌ ವೇಳೆ ದಿವ್ಯಾಂಗ ತಂದೆಯ ಜೀವ ಉಳಿಸಿ ಗಾಯಗೊಂಡಿದ್ದ 8 ವರ್ಷದ ಬಾಲಕ ಸಾವು!

ಮಧ್ಯಪ್ರದೇಶದ ಹರ್ದಾ ಬ್ಲಾಸ್ಟ್‌ನಲ್ಲಿ ಗಾಯಗೊಂಡಿದ್ದ ಬಾಲಕ ಶುಕ್ರವಾರ ಮೃತಪಟ್ಟಿದ್ದಾನೆ. ಅದರೊಂದಿಗೆ ಬ್ಲಾಸ್ಟ್‌ನಲ್ಲಿ ಇಲ್ಲಿಯವರೆಗೂ ಸಾವು ಕಂಡವರ ಸಂಖ್ಯೆ 13ಕ್ಕೆ ಏರಿದೆ.

Harda Blast 8 Year Old Boy Dead Who Injured While Trying To Save His Disabled Father san
Author
First Published Feb 10, 2024, 10:16 PM IST

ಭೋಪಾಲ್‌ (ಫೆ.10):ಹರ್ದಾ ನಗರದ ಮಗರ್ಧಾ ರಸ್ತೆಯಲ್ಲಿರುವ ಬೈರಗಢದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಗಢದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಟು ವರ್ಷದ ಬಾಲಕ ಚಿಕಿತ್ಸೆ ವೇಳೆ ಶುಕ್ರವಾರ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ  8 ವರ್ಷದ ಬಾಲಕನಿಗೆ ಭೋಪಾಲ್‌ನ ಏಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಮಂಗಳವಾರ  ಮಗರ್ಧ ರಸ್ತೆಯ ಬೈರಾಗಢದಲ್ಲಿ ಸಂಭವಿಸಿದ ಅಪಘಾತದಲ್ಲಿ ಆಶಿಶ್ ರಜಪೂತ್ (8 ವರ್ಷ) ಮತ್ತು ಅವರ ತಂದೆ ಮೇಸ್ತ್ರಿ ಸಂಜಯ್ ರಜಪೂತ್ ಸ್ಪೋಟದ ರಭಸಕ್ಕೆ ಕಲ್ಲುಗಳು ಸಿಡಿದು ಗಂಭೀರವಾಗಿ ಗಾಯಗೊಂಡಿದ್ದರು.  ಪ್ರಥಮ ಚಿಕಿತ್ಸೆ ನಂತರ ಇವರಿಬ್ಬರನ್ನು ನರ್ಮದಾಪುರಂ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇಲ್ಲಿಂದ ಆಶಿಶ್ ಸ್ಥಿತಿ ಸುಧಾರಿಸದ ಕಾರಣ ಭೋಪಾಲ್ ನ ಏಮ್ಸ್ ಗೆ ದಾಖಲಿಸಲಾಗಿತ್ತು. ಶುಕ್ರವಾರ ಆಶಿಶ್ ಮೃತಪಟ್ಟಿದ್ದಾನೆ.

ಅಪಘಾತದ ವೇಳೆ ಆಶಿಶ್ ವೀಲ್ ಚೇರ್ ಮೇಲೆ ಕುಳಿತಿದ್ದ ತಂದೆ ಸಂಜಯ್ ಅವರನ್ನು ತಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಅಷ್ಟರಲ್ಲಿ ಪಟಾಕಿ ಕಾರ್ಖಾನೆಯ ಸ್ಫೋಟದಿಂದ ತೂರಿಬಂದ ಕಲ್ಲು ಆತನಿಗೆ ತಗುಲಿದೆ. ಇದರಿಂದ ತಂದೆ-ಮಗ ಇಬ್ಬರೂ ಗಾಯಗೊಂಡಿದ್ದಾರೆ. ಮಗನ ಮರಣದ ನಂತರ, ತಂದೆ ಸಂಜಯ್ ರಜಪೂತ್ ನರ್ಮದಾಪುರಂನ ನರ್ಮದಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನರ್ಮದಾ ಆಸ್ಪತ್ರೆಯ ಮನೋಜ್ ಸರನ್ ಅವರು ಆಶಿಶ್ ನನ್ನು ಒಂದು ದಿನ ಮುನ್ನ ಭೋಪಾಲ್‌ನ ಏಮ್ಸ್‌ಗೆ ದಾಖಲು ಮಾಡುವ ನಿರ್ಧಾರ ಮಾಡಿದ್ದರು. ಆಶಿಶ್‌ನ ತಲೆ ಮತ್ತು ಮುಖದ ಮೇಲೆ ಕಲ್ಲಿನಿಂದ ಬಲವಾದ ಗಾಯವಾಗಿತ್ತು. ಶುಕ್ರವಾರ ಆಶಿಶ್ ನಿಧನದ ಬಗ್ಗೆ ಮಾಹಿತಿ ಪಡೆದ ಸಂಜಯ್ ರಜಪೂತ್ ಚಿಕಿತ್ಸೆ ಅಪೂರ್ಣವಾಗಿ ಬಿಟ್ಟು ಸಂಬಂಧಿಕರೊಂದಿಗೆ ತೆರಳಿದ್ದರು.

ಮಧ್ಯಪ್ರದೇಶ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, 11 ಮಂದಿ ಬಲಿ 40 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಮಂಗಳವಾರ ಸಂಜೆ ಚಿಂತಾಜನಕ ಸ್ಥಿತಿಯಲ್ಲಿ ಆಶಿಶ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಏಮ್ಸ್‌ನ ಪಿಆರ್‌ಓ ಕೆಡಿ ಶುಕ್ಲಾ ತಿಳಿಸಿದ್ದಾರೆ. ಬಾಲಕನ ತಲೆ ಮತ್ತು ಹೊಟ್ಟೆ ಮೇಲೆ ಗಂಭೀರವಾದ ಗಾಯಗಳಾಗಿದ್ದವು. ಮಂಗಳವಾರ ತಡರಾತ್ರಿ ವೇಳೆ ಆಮ್ಲಜನಕ ಸರಿಯಾಗಿ ಅವರಿಗೆ ಪೂರೈಕೆಯಾಗದ ಕಾರಣ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಶುಕ್ರವಾರ ಬೆಳಗ್ಗೆಯಿಂದ ಮಗುವಿನ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದರಿಂದ ಮಧ್ಯಾಹ್ನದ ವೇಳೆಗೆ ನಿಧನರಾದರು ಎಂದಿದ್ದಾರೆ.

Humble Politician Nograj ಪ್ಲ್ಯಾನ್‌ ನಿಜ ಮಾಡಿದ ಸರ್ಕಾರ, ಕಬ್ಬನ್‌ ಪಾರ್ಕ್‌ನಲ್ಲಿ ಏಳುತ್ತೆ ಅಪಾರ್ಟ್‌ಮೆಂಟ್‌!

Follow Us:
Download App:
  • android
  • ios