ಚಿತ್ರದುರ್ಗ(ಫೆ.  07) ಮುರುಘಾಶ್ರೀ ಸಹೋದರ ದೊರೆಸ್ವಾಮಿ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ.  ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಶರಣರ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದೆ.

33 ವರ್ಷದ ಉಪನ್ಯಾಸಕಿ ದೊರೆಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಬೆಂಗಳೂರು ಕಮಿಷನರ್ ಕಚೇರಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ನಲ್ಲಿ  ಕೇಸ್ ದಾಖಲಾಗಿದೆ. ಕಳೆದ ಡಿಸೆಂಬರ್ 16 ರಂದೇ ದೂರು ನೀಡಿದ್ದಾರೆ.

'ಒಬ್ಬರೆ ಕೋಣೆಗೆ ಬನ್ನಿ' ಮ್ಯಾನೇಜರ್ ರೂಂಗೆ ಹೋದಳು..!

ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ದೊರೆಸ್ವಾಮಿಗೆ ಹೆಚ್ಚುವರಿ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿದೆ. ದೂರು ನೀಡಿರುವ ಯುವತಿ ವಿರುದ್ಧ ದೊರೆಸ್ವಾಮಿ ಪತ್ನಿ ಪ್ರತಿ ದೂರು ಸಲ್ಲಿಸಿದ್ದಾರೆ.

ದೊರೆಸ್ವಾಮಿ ಜತೆಗಿನ ಫೋಟೋ ಬಳಸಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ.  1ಕೋಟಿ ಹಣ ನೀಡದಿದ್ದರೆ ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಕಳೆದ ಡಿಸೆಂಬರ್  29  20 ರಂದು ದೂರು ಕೊಟ್ಟಿದ್ದಾರೆ. ಆರೋಪಿ ದೊರೆಸ್ವಾಮಿ ಮುರುಘಾಮಠದ ಮಾಜಿ ಸಿಇಓ ಆಗಿ ಕೆಲಸ ಮಾಡುತ್ತಿದ್ದಾರೆ.