ಕಿಚ್ಚ ಸುದೀಪ್ ಹೇಳಿದ ಈ ಸ್ಟೋರಿಯಲ್ಲಿನ ಆ ಸ್ನೇಹಿತ ಯಾರು? ಗೊತ್ತಾದ್ರೂ ಹೇಳ್ಬೇಡಿ!
ಹಲವು ವರ್ಷಗಳ ಹಿಂದೆ ಸುದೀಪ್ ಅವರಾಡಿದ ಮಾತುಗಳು ಈಗಲೂ ವೈರಲ್ ಆಗುತ್ತಾ ಇರುತ್ತವೆ. ಅದಕ್ಕೊಂದು ನಿದರ್ಶನ ಎಂಬಂತೆ, ನಟ ಕಿಚ್ಚ ಸುದೀಪ್ ಅವರು ಹತ್ತು ವರ್ಷಗಳ ಹಿಂದೆ ನಿರೂಪಕರೊಬ್ಬರ ಜೊತೆ ಆಡಿದ್ದ ಮಾತು..
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಒಂಥರಾ ಮೋಟಿವೇಶನ್ ಸ್ಪೀಕರ್ ಇದ್ದ ಹಾಗೆ. ಅವರಾಡುವ ಮಾತುಗಳು ಅದೆಷ್ಟೋ ಜನರ ಪಾಲಿಗೆ ನಿಜವಾಗಿಯೂ ಮೋಟಿವೇಶನಲ್ ಸ್ಪೀಚ್ ಎಂದು ಹೇಳುವುದಲ್ಲಿ ತಪ್ಪಿಲ್ಲ. ನಟ ಸುದೀಪ್ ಯಾವುದೋ ಸಂದರ್ಶನದಲ್ಲಿ ಆಡಿದ ಮಾತಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ, ಬರುವ ಕಾಮೆಂಟ್ ನೋಡಿದರೇ ಗೊತ್ತಾಗುತ್ತದೆ, ಅವರ ಮಾತುಗಳಿಗೂ ಅಭಿಮಾನಿಗಳು ಇದ್ದಾರೆ ಎಂಬ ಸಂಗತಿ!.
ಹಲವು ವರ್ಷಗಳ ಹಿಂದೆ ಸುದೀಪ್ ಅವರಾಡಿದ ಮಾತುಗಳು ಈಗಲೂ ವೈರಲ್ ಆಗುತ್ತಾ ಇರುತ್ತವೆ. ಅದಕ್ಕೊಂದು ನಿದರ್ಶನ ಎಂಬಂತೆ, ನಟ ಕಿಚ್ಚ ಸುದೀಪ್ ಅವರು ಹತ್ತು ವರ್ಷಗಳ ಹಿಂದೆ ನಿರೂಪಕರೊಬ್ಬರ ಜೊತೆ ಆಡಿದ್ದ ಮಾತುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದು ನಟ ಸುದೀಪ್ ಜೀವನದಲ್ಲಿ ನಡೆದ ಘಟನೆ ಬಗ್ಗೆ ಕೇಳಲಾದ ಪ್ರಶ್ನಗೆ ಕಿಚ್ಚ ಕೊಟ್ಟ ಉತ್ತರ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಆದರೆ, ಎಲ್ಲೂ ಅವರ ಮಾತಿನಲ್ಲಿ ಆ ಬೇರೊಬ್ಬರ ಹೆಸರು ಬಂದಿಲ್ಲ.
ಬಿಗ್ ಬಾಸ್‌ನಿಂದ ಹೊರಬಿದ್ದ ಧರ್ಮ ಮಹಿಳೆಯರ ಜೊತೆ 'ದಾಸರಹಳ್ಳಿ'ಯಲ್ಲಿ!
ಹಾಗಿದ್ದರೆ ನಟ ಸುದೀಪ್ ಅಂದು ಏನು ಹೇಳಿದ್ರು? ಆ ವೈರಲ್ ಆಗುತ್ತಿರೋ ವಿಡಿಯೋದಲ್ಲಿ ಅದೇನಿದೆ ನೋಡಿ.. 'ನಿಮ್ಗೆ ಯಾರಾದ್ರೂ ಇಷ್ಟ ಆದ್ರಾ? ಇಷ್ಟ ಆದ್ರೆ ಇಷ್ಟ ಪಡಿ.. ಯಾರೇ ಅಗಿದ್ರೂ ಅವ್ರನ್ನ ಇಷ್ಟಪಟ್ಟು ಸ್ನೇಹಿತರನ್ನಾಗಿ ಮಾಡ್ಕೊಂಡ್ರಾ, ನೀವು ಅವ್ರಿಗೆ ಒಳ್ಳೆಯ ಸ್ನೇಹಿತರಾಗಿ ಇರಿ. ಅವ್ರಿಂದ ನನಗೆ ಏನ್ ಸಿಗುತ್ತೆ ಅಂತಾ ಯೋಚ್ನೆ ಮಾಡ್ಬೇಡಿ, ನಿಮ್ಮಿಂದ ಅವ್ರಿಗೆ ಏನ್ ಒಳ್ಳೇದು ಮಾಡೋಕೆ ಆಗುತ್ತೆ ಅದನ್ನ ಮಾಡಿ.. ಆಮೇಲೆ ಅದಕ್ಕೂ ಮೀರಿ ಆ ಬಗ್ಗೆ ಯೋಚ್ನೆ ಮಾಡೋದ್ನ ಬಿಟ್ಬಿಡಿ.. ಅಷ್ಟಕ್ಕೂ ನೀವು ದಿನದ ಕೊನೆಯಲ್ಲಿ ಖುಷಿಯಾಗಿ ಇರ್ಬೇಕು ಅಲ್ವಾ?
ಯಾವುದಕ್ಕೋ ತಲೆ ಕೆಡಿಸ್ಕೊಂಡು, ಹಾಗೆ ಹೇಳಿದ್ರು ಹೀಗೆ ಹೇಳದ್ರು ಅಂತ ಅಂದ್ಕೊಂಡು.. ನನ್ನ ಪ್ರಕಾರ, ಅದೆಲ್ಲಾ ಬದಲಾಗಲ್ಲ, ಏನು ಅಂತಂದ್ರೆ, ಪ್ರಪಂಚ ಇರೋ ತನಕ ಅದು ಯಾವುದೂ ಚೆಂಜ್ ಆಗಲ್ಲ.. ಹಾಗಂತ, ಎಲ್ಲೋ ಒಂದು ಸಂದರ್ಭದಲ್ಲಿ ಅವ್ರು ಮಾತಾಡಿದ್ದು ನಿಮ್ ತನಕ ಬೇರೆ ರೀತಿನಲ್ಲ ಬರಬಹುದು. ಅವ್ರು ಹೇಳಿರೋ ಆ ಮಾತಿನ ಬಗ್ಗೆ ನಾವು ತಪ್ಪು ತಿಳ್ಕೊಳ್ಳೋದು ತಪ್ಪಾಗುತ್ತೆ.. ಯಾಕಂದ್ರೆ, ಅವ್ರು ತಮಾಷೆಗೆ ಏನೋ ಹೇಳಿರಬಹುದು.
ವಿಷ್ಣುವರ್ಧನ್ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್; ಡೌಟ್ ಇದ್ರೆ ಇಲ್ನೋಡಿ!
ಅವ್ರು ಹೇಳಿರೋ ಆ ಮಾತು ಬೇರೊಬ್ಬರ ಇಂಟರ್‌ಪ್ರಿಟೇಶನ್ ಮೂಲಕ ನಿಮ್ಗೆ ಬಂದಿರುತ್ತೆ.. ಅಷ್ಟೇ ಅಲ್ಲ, ಆ ಮಾತನ್ನ ಬೇರೆಯವರ ಮೂಲಕ ನೀವು ಕೇಳಿಸಿಕೊಳ್ಳೋ ಟೈಮಲ್ಲಿ ನಿಮ್ ಮೂಡ್ ಚೆನ್ನಾಗಿಲ್ಲ ಅಂದ್ರೆ ಇಡೀ ಪ್ರಪಂಚನೇ ರಾಂಗ್ ಅಂತ ಅನ್ನಿಸುತ್ತೆ.. ಹೀಗಾಗಿ ಎಲ್ಲರ ಬಗ್ಗೆ ನಾವು ಜಡ್ಜ್‌ಮೆಂಟ್ ತಗೋಳ್ಳೋದು ಸರಿ ಅಲ್ಲ ಅನ್ಸುತ್ತೆ..' ಅಂದಿದ್ದರು ನಟ ಸುದೀಪ್. ಇದು ತುಂಬಾ ಹಳೆಯ ವಿಡಿಯೋ. ಆದರೆ, ಅಂದೂ ಕೂಡ ಸುದೀಪ್ ಮಾತಿನಲ್ಲಿ ಆ ಯಾರೋ ಬೇರೊಬ್ಬರ ಬಗ್ಗೆ ಸಿಟ್ಟು ಇರಲಿಲ್ಲ, ಮನದಲ್ಲಿ ದ್ವೇಷ ಮನೆ ಮಾಡಿರಲಿಲ್ಲ!
ಅಂದಹಾಗೆ, ನಟ ಕಿಚ್ಚ ಸುದೀಪ್ ಅವರು ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ನಡೆಸಿಕೊಡುತ್ತಿದ್ದಾರೆ. ಅದು ಈಗಾಗಲೇ ಎಂಟು ವಾರಗಳನ್ನು ದಾಟಿ ಮುನ್ನಡೆಯುತ್ತಿದ್ದು, 'ಮುಂದಿನ ಸೀಸನ್ ನಾನು ಹೋಸ್ಟ್ ಮಾಡೋದಿಲ್ಲ, ಇದೇ ನನ್ನ ಲಾಸ್ಟ್ ಬಿಗ್ ಬಾಸ್ ಹೋಸ್ಟಿಂಗ್' ಎಂದಿದ್ದಾರೆ ಸುದೀಪ್. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು ಮುಂದಿನ ವರ್ಷ, ಅಂದರೆ 2025ರ ಶುರುವಿನಲ್ಲೇ ಬಿಡುಗಡೆ ಆಗಲಿದ್ದು, ಆ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್ ನಾಯಕಿ. \
ಡಾ ರಾಜ್ ಅಂತಿಮ ದರ್ಶನಕ್ಕೆ ಬಂದ ವಿಷ್ಣುಗೆ ಬೈಯ್ದು ಕಳಿಸಿದ್ರು ಪಾರ್ವತಮ್ಮ; ಎಂಥಾ ಕರುಣಾಮಯಿ!