ಹೈದರಾಬಾದ್(ಫೆ.  07)   ಇಂಥ ಪ್ರಕರಣಗಳು ಹೊಸದೇನಲ್ಲ. ಖಾಸಗಿ ವಿಮಾನಯಾನ ಸಂಸ್ಥೆಯ ಮ್ಯಾನೇಜರ್ ವಿರುದ್ಧ 30  ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದು ದೂರು ನೀಡಿದ್ದಾರೆ.

ಸುಮಾರು ಎರಡು ತಿಂಗಳ ಹಿಂದೆ ಕಂಪನಿಯಲ್ಲಿ ಉದ್ಯೋಗಕ್ಕಾಗಿ ಮಹಿಳೆ ಅರ್ಜಿ ಸಲ್ಲಿಸಿದ್ದರು.  ಇದನ್ನು ಪರಿಶೀಲಿಸಿದ ಮ್ಯಾನೇಜರ್ ತನ್ನನ್ನು ಭೇಟಿ ಮಾಡಲು ತಿಳಿಸಿದ್ದ. ತನ್ನ ಕೋಣೆಗೆ ಒಬ್ಬಳೆ ಬರಬೇಕು ಎಂದು ಹೇಳಿದ್ದ.

ರಾಜನಿಗೆ ಕಳಿಸಬೇಕಿದ್ದ ಪ್ರೇಯಸಿಯ ನ್ಯೂಡ್ ಪೋಟೋಸ್ ಲೀಕ್

ತನ್ನನ್ನು ಖಾಸಗಿಯಾಗಿ ಭೇಟಿ ಮಾಡದೇ ಇದ್ದರೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿತ್ತೇನೆ ಎಂದು ಉಳಿಒದ ಮಹಿಳಾ ಸಿಬ್ಬಂದಿಗೂ ಇದೇ ಮ್ಯಾನೇಜರ್ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಮಹಿಳೆ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆದರೆ ಮ್ಯಾನೇಜರ್ ಆರೋಪ ತಳ್ಳಿಹಾಕಿದ್ದು ನಕಲಿ ದಾಖಲೆಗಳನ್ನು ನೀಡಿದ್ದ ಮಹಿಳೆ ತಾನು ಬಚಾವಾಗಲು ಸುಳ್ಳು ಆರೋಪ ಮಾಡಿದ್ದಾಳೆ ಎಂದಿದ್ದಾರೆ.