ನಟ ದರ್ಶನ್ ಮೇಲೆ ದಾಖಲಾಯ್ತು ಎಫ್‌ಐಆರ್: ಹರಿದ ಬಟ್ಟೆಯಲ್ಲಿ ಬಂದು ದೂರು ಕೊಟ್ಟ ಮಹಿಳೆ

ಸ್ಯಾಂಡಲ್‌ವುಡ್‌ ನಟ ದರ್ಶನ್‌ ವಿರುದ್ಧ ರಾಜರಾಜೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಮಹಿಲೆಯೊಬ್ಬರು ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

FIR registered against Sandalwood actor Darshan Complaint by Bengaluru woman sat

ಬೆಂಗಳೂರು (ಅ.31): ಸ್ಯಾಂಡಲ್‌ವುಡ್‌ ನಟ ದರ್ಶನ್‌ ವಿರುದ್ಧ ರಾಜರಾಜೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಮಹಿಲೆಯೊಬ್ಬರು ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್‌ ಮನೆಯ ಎದುರು ಮನೆಯಲ್ಲಿರುವ ಮಹಿಳೆಗೆ ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ದರ್ಶನ್‌ ವಿರುದ್ಧ ದೂರು ನೀಡಲಾಗಿದೆ. ಮಹಿಳೆಯ ದೂರನ್ನು ಆಧರಿಸಿ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಎದುರು ಮನೆಯ ಮಹಿಳೆಗೆ ನಾಯಿಯನ್ನು ಕಚ್ಚಿಸಿದ ಆರೋಪದಲ್ಲಿ ದರ್ಶನ್‌ 2ನೇ ಆರೋಪಿ (ಎ2) ಆಗಿದ್ದಾರೆ. ನಾಯಿ ಕಚ್ಚಿಸಿಕೊಂಡ ಮಹಿಳೆ ಅಮಿತಾ ಜಿಂದಾಲ್ ಎನ್ನುವವರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಹೆತ್ತ ತಾಯಿ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಮಗ: ವಿರೋಧಿಸಿದ ತಾಯಿಯನ್ನು ಕತ್ತು ಹಿಸುಕಿ ಕೊಂದ

ಘಟನೆಯ ವಿವರ: ದರ್ಶನ್ ಮನೆ ಬಳಿ ಕಾರ್ ಪಾರ್ಕ್ ಮಾಡಿದ್ದ ಮಹಿಳೆಯು ಕಾರನ್ನು ತೆಗೆದುಕೊಂಡು ಹೋಗಲು ಬಂದಿದ್ದಾಳೆ.  ಈ ವೇಳೆ ಕಾರ್ ಬಳಿ ದರ್ಶನ್‌ ಮನೆಯಲ್ಲಿ ಸಾಕಲಾಗಿದ್ದ ಮೂರು ನಾಯಿಗಳು ಇದ್ದವು. ಈ ನಾಯಿಗಳನ್ನು ಹಿಡಿದುಕೊಳ್ಳಿ ನಾನು ಕಾರನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ನಾಯಿಗಳನ್ನು ಸಾಕಣೆ ಮಾಡುವ ದರ್ಶನ್‌ ಮನೆಯ ಹುಡುಗರಿಗೆ ಮನವಿ ಮಾಡಿದ್ದಾಳೆ. ಆದರೆ, ದರ್ಶನ್ ಮನೆಯ ಹುಡುಗರು ಇದಕ್ಕೆ ಪ್ರತಿಕ್ರಿಯೆ ನೀಡದೇ ಸುಮ್ಮನೇ ನಿಂತಿದ್ದಾರೆ. ಆಗ, ಮಹಿಳೆ ಜೋರಾಗಿ ವಾಗ್ವಾದ ನಡೆಸಿದ್ದಾಳೆ. ಆದರೂ, ದರ್ಶನ್ ಮನೆಯ ಹುಡುಗರು ನಾಯಿಯನ್ನು ಹಿಡಿದುಕೊಳ್ಳಲಿಲ್ಲ.

ಮಹಿಳೆಯ ಹೊಟ್ಟೆ ಭಾಗಕ್ಕೆ ಕಚ್ಚಿದ ನಾಯಿ: ಇನ್ನು ನಾಯಿಗಳ ಪಕ್ಕದಲ್ಲಿಯೇ ಹೋಗಿ ಕಾರನ್ನು ತೆಗೆದುಕೊಳ್ಳು ಮುಂದಾದ ಮಹಿಳೆಯ ಮೇಲೆ ನಾಯಿಗಳು ದಾಳಿ ಮಾಡಿ ಕಚ್ಚಿವೆ. ಅದರಲ್ಲಿ ಒಂದು ನಾಯಿ ಮಹಿಳೆಯ ಹೊಟ್ಟೆ ಭಾಗಕ್ಕೆ ಕಚ್ಚಿದೆ. ಇದರಿಂದ ಕುಪಿತಗೊಂಡ ಮಹಿಳೆ ದರ್ಶನ್‌ ಹಾಗೂ ನಾಯಿಗಳನ್ನು ನೋಡಿಕೊಳ್ತಿದ್ದವರ ಮೇಲೂ ಕೇಸ್ ದಾಖಲಿಸಿದ್ದಾಳೆ.  ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 289 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹೆತ್ತ ತಾಯಿ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಮಗ: ವಿರೋಧಿಸಿದ ತಾಯಿಯನ್ನು ಕತ್ತು ಹಿಸುಕಿ ಕೊಂದ

ಅರಣ್ಯ ಇಲಾಖೆಯಿಂದಲೂ ನೋಟಿಸ್‌: ರಾಜ್ಯದಲ್ಲಿ ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅವರು ಹುಲಿ ಉಗುರಿನ ಪೆಂಡೆಂಟ್‌ ಧರಿಸಿಕೊಂಡಿದ್ದ ಬೆನ್ನಲ್ಲಿಯೇ ನಟ ದರ್ಶನ್‌ ಕೂಡ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದಾರೆಂದು ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ದೂರನ್ನು ಆಧರಿಸಿ ನಟ ದರ್ಶನ್‌ಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಒಂದು ಕೇಸ್‌ನ ವಿಚಾರಣೆಯನ್ನು ಬಾಕಿ ಇರಿಸಿಕೊಂಡಿರುವ ನಡುವೆಯೇ ಈಗ ದರ್ಶನ್‌ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ. ನಟ ದರ್ಶನ್‌ ಸಾಕಿದ್ದ ನಾಯಿ ಕಚ್ಚಿದ್ದಕ್ಕೆ ಎಫ್‌ಐಆರ್‌ ದಾಖಲಿಸಲಾಗಿದೆ.

FIR registered against Sandalwood actor Darshan Complaint by Bengaluru woman sat

Latest Videos
Follow Us:
Download App:
  • android
  • ios