ಕೇಕ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ| ಕಾಮುಕನ ಸೆರೆ| ಕೆಲಸ ಕೊಡಿಸುವ ನೆಪದಲ್ಲಿ ಪರಿಚಯಸ್ಥನಿಂದ ಹೇಯ ಕೃತ್ಯ| ಪ್ರಜ್ಞಾವಸ್ಥೆಯಲ್ಲಿದ್ದಾಗ ಅತ್ಯಾಚಾರ ಎಸಗಿ, ಮೊಬೈಲ್‌ನಲ್ಲಿ ಖಾಸಗಿ ದೃಶ್ಯ ಹಾಗೂ ಫೋಟೋಗಳನ್ನು ಚಿತ್ರಿಸಿಕೊಂಡಿದ್ದ ಆರೋಪಿ|
ಬೆಂಗಳೂರು(ಡಿ.26): ಕೆಲಸ ಕೊಡಿಸುವ ನೆಪದಲ್ಲಿ ಪರಿಚಯಸ್ಥ ಯುವತಿಯನ್ನು ಕರೆಯಿಸಿಕೊಂಡು ಕೇಕ್‌ನಲ್ಲಿ ಮತ್ತು ಬರುವ ಔಷಧ ಕೊಟ್ಟ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆ ನಿವಾಸಿ 26 ವರ್ಷದ ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಆರೋಪಿ ಸಾಗರ್‌ಗೌಡ (25) ಎಂಬಾತನನ್ನು ಬಂಧಿಸಲಾಗಿದೆ ಎಂಧು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆ ಎರಡು ವರ್ಷಗಳ ಹಿಂದೆ ಸಂಬಂಧಿಕರೊಬ್ಬರ ಹುಟ್ಟಹಬ್ಬದ ಪಾರ್ಟಿಗೆ ಹೋಗಿದ್ದ ವೇಳೆ ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಆರೋಪಿ ಪರಿಚಯವಾಗಿದ್ದ. ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದ ಇಬ್ಬರು ಸಂಭಾಷಣೆ ನಡೆಸುವ ಮೂಲಕ ಸಂಪರ್ಕದಲ್ಲಿದ್ದರು. ಸಾಗರ್ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಕಳೆದ ವರ್ಷ ಯುವತಿ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿರುವುದಾಗಿ ಸಾಗರ್‌ಗೆ ಕರೆ ಮಾಡಿ ತಿಳಿಸಿದ್ದಳು. ಸ್ವವಿವರದ ಅರ್ಜಿಯೊಂದಿಗೆ ನಾಯಂಡಹಳ್ಳಿಗೆ ಬರುವಂತೆ ಯುವತಿಗೆ ಸಾಗರ್ ಸೂಚಿಸಿದ್ದ.
ರೇಪ್ ಮಾಡಿ ಯುವತಿಯನ್ನು ಚಲಿಸುವ ರೈಲಿನಿಂದ ಹೊರಕ್ಕೆ ಎಸೆದ್ರು!
1 ಲಕ್ಷ ಸುಲಿಗೆ:
ಆತನ ಮಾತಿನಂತೆ ಸಂತ್ರಸ್ತೆ ನಾಯಂಡಹಳ್ಳಿಗೆ ಹೋಗಿದ್ದಳು. ಅಕ್ಕನ ಮನೆ ಎಂದು ತನ್ನ ರೂಮ್‌ಗೆ ಕರೆದೊಯ್ದಿದ್ದ ಆರೋಪಿ ಅಕ್ಕನ ಮಗನ ಹುಟ್ಟುಹಬ್ಬದ ಕೇಕ್ ಎಂದು ತಿನ್ನಲು ಸಂತ್ರಸ್ತೆಗೆ ನೀಡಿದ್ದ. ಮಂಪರು ಬರುತ್ತಿದ್ದರಿಂದ ಯುವತಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದಿದ್ದಳು. ಈ ವೇಳೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಅತ್ಯಾಚಾರ ಎಸಗಿ, ಮೊಬೈಲ್‌ನಲ್ಲಿ ಖಾಸಗಿ ದೃಶ್ಯ ಹಾಗೂ ಫೋಟೋಗಳನ್ನು ಚಿತ್ರಿಸಿಕೊಂಡಿದ್ದ. ಬಳಿಕ ಖಾಸಗಿ ದೃಶ್ಯ ಹಾಗೂ ಫೋಟೋಗಳನ್ನು ಸಂತ್ರಸ್ತೆಗೆ ರವಾನಿಸಿದ್ದ. ಅತ್ಯಾಚಾರದ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ. ವಿಡಿಯೋ ಇಟ್ಟುಕೊಂಡು ಬೆದರಿಸಿ ಯುವತಿಯಿಂದ ಒಂದು ಲಕ್ಷ ಹಣ ಸುಲಿಗೆ ಮಾಡಿದ್ದ. ಇದಾದ ಕೆಲ ತಿಂಗಳ ಬಳಿಕ ಮತ್ತೇ ಫೋಟೋಗಳನ್ನು ಕಳುಹಿಸಿ ‘ನಿನ್ನನ್ನು ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಳ್ಳುತ್ತೇನೆ. ನೀನು ಬೇರೆ ಯಾರನ್ನೂ ಮದುವೆಯಾಗಬಾರದು. ಇಲ್ಲವಾದರೆ ಮರ್ಯಾದೆ ತೆಗೆಯುವುದಾಗಿ’ ಬ್ಲ್ಯಾಕ್‌ಮೇಲ್ ಮಾಡಿದ್ದ. ನಂತರ ತಾಯಿಗೆ ಪರಿಚಯಿಸುವುದಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದ.
ತಂದೆಯಿಂದಲೂ ಅಪಮಾನ:
ತನಗಾದ ಅನ್ಯಾಯದ ಬಗ್ಗೆ ನ್ಯಾಯ ಕೇಳಲು ಸಾಗರ್‌ಗೌಡನ ಊರಿಗೆ ಹೋದಾಗ ಆತನ ತಂದೆ ರಾಮೇಗೌಡ ಊರಿನ ಜನರಿಂದ ಪಂಚಾಯಿತಿ ನಡೆಸಿದ್ದ. ಈ ವೇಳೆ ಮದುವೆ ಮಾಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದು, 15 ದಿನಗಳ ಬಳಿಕ ಮತ್ತೇ ನಿರಾಕರಿಸಿದ್ದರು. ಸಾಗರ್‌ಗೌಡನ ತಂದೆ ರಾಮೇಗೌಡ ತನಗೆ ಅವಾಚ್ಯವಾಗಿ ನಿಂದಿಸಿ, ಪ್ರಾಣಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಯುವತಿ ದೂರು ನೀಡಿದ್ದಳು. ದೂರಿನ ಅನ್ವಯ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 26, 2020, 7:31 AM IST