ಮುಂಬೈ(ಡಿ. 25) ಮುಂಬೈನಲ್ಲಿ ಕಾಮುಕರು ತಮ್ಮ ಕ್ರೌರ್ಯ ಮೆರೆದಿದ್ದಾರೆ. ಯುವತಿಯೊಬ್ಬಳನ್ನು ರೇಪ್ ಮಾಡಿ ಚಲಿಸುವ ರೈಲಿನಿಂದ ಹೊರಗೆ ಎಸೆದಿದ್ದಾರೆ. ಯುವತಿ ದಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ.

ವಾಶಿ ಕ್ರೇಕ್ ಸೇತುವೆ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿ ದೇಹವನ್ನು ಕಂಡ ಸ್ಥಳೀಯರು  ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವತಿಗೆ ಚಿಕಿತ್ಸೆ  ಕೊಡಿಸುವ ಕೆಲಸ ಮಾಡಿದ್ದಾರೆ.

ತನ್ನದೇ ವಯಸ್ಸಿನ ಮಲತಾಯಿಯ ಮೇಲೆ ಎರಗಿದ ಪಾಪಿ ಮಗ

ಇಪ್ಪತ್ತು ವರ್ಷದ ನಯುವತಿ ಟಿಟ್ವಾಲಾ ನಿವಾಸಿ ಎಂದು ತಿಳಿದು ಬಂದಿದೆ.  ಅತ್ಯಾಚಾರ ಮಾಡಿದ ವ್ಯಕ್ತಿ ಅಥವಾ ವ್ಯಕ್ತಿಗಳು ಯುವತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಹೊರಗೆ ಎಸೆದಿರುವ ಶಂಕೆ ಇದೆ. ಯುವತಿಗೆ ಪ್ರಜ್ಞೆ ಬಂದ ಮೇಲೆ ಘಟನೆಯ ಸಂಪೂರ್ಣ ವಿವರ ಗೊತ್ತಾಗಲಿದೆ.