ಮುಂಬೈನಲ್ಲಿ(Mumbai) ಯುವಕನೋರ್ವ ತನ್ನ ಹುಟ್ಟುಹಬ್ಬದ ಆಚರಣೆಯ (Birthday celebration) ಸಂಭ್ರಮದಲ್ಲಿ ಕೇಕ್‌ನ್ನು ಚಾಕುವಿನಿಂದ ಕತ್ತರಿಸುವ ಬದಲು ಖಡ್ಗದಿಂದ ಕತ್ತರಿಸಿದ್ದಾನೆ. ಈತ ಖಡ್ಗದಿಂದ ಕೇಕ್ ಕತ್ತರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದ್ದಂತೆ ಪೊಲೀಸರು ಈತನ ಹಿಂದೆ ಬಿದ್ದಿದ್ದಾರೆ.

ಮುಂಬೈ: ಹುಟ್ಟುಹಬ್ಬ ಆಚರಿಸುವುದು, ಕೇಕ್ ಕತ್ತರಿಸುವುದು ಇತ್ತೀಚೆಗೆ ಭಾರಿ ಟ್ರೆಂಡ್ ಆಗಿದೆ. ಮೊದಲೆಲ್ಲಾ ಹುಟ್ಟುಹಬ್ಬದ ದಿನ ದೇಗುಲಕ್ಕೆ ಹೋಗಿ ಬಂದು ಮನೆಯಲ್ಲೊಂದು ಸಿಹಿ ಪಾಯಸ, ವಿಶೇಷ ಅಡುಗೆ ಊಟವೋ ಮಾಡಿ ಮನೆ ಮಂದಿ ಆತ್ಮೀಯರೆಲ್ಲಾ ಜೊತೆಗೆ ಕುಳಿತು ಊಟ ಮಾಡಿದರೆ ಹಬ್ಬ ಮುಗಿತಿತ್ತು. ಆದರೆ ಈಗ ಹುಟ್ಟುಹಬ್ಬದಂದು ಕನಿಷ್ಠ ಒಂದು ಕೇಕ್ ಇರಲೇಬೇಕು. ಕೆಲವರಿಗೆ ತಮ್ಮದೇ ಹುಟ್ಟುಹಬ್ಬ ಎಂದರೆ ಏನೋ ಹುರುಪು, ಇನ್ನು ಕೆಲವರಿಗೆ ತಮ್ಮ ಸ್ನೇಹಿತರ ಗೆಳೆಯರ ಆತ್ಮೀಯರ ಹುಟ್ಟುಹಬ್ಬವೆಂದರೆ ಖುಷಿ. ಗೆಳೆಯ ಗೆಳತಿಯರ ಹುಟ್ಟುಹಬ್ಬವನ್ನು ಕೆಲವರು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಮಧ್ಯರಾತ್ರಿ ನಡುರಸ್ತೆಯಲ್ಲಿ ಕೇಕ್ ಕತ್ತರಿಸಿ ಗೆಳೆಯರು ಹಬ್ಬ ಆಚರಿಸಿದರೆ ಮನೆ ಮಂದಿ ಮನೆಯೊಳಗೆ ಆಚರಿಸುತ್ತಾರೆ. ಇದು ಈಗ ಬಹುತೇಕ ನಗರಗಳಲ್ಲಿರುವ ಟ್ರೆಂಡ್‌ . ಇದು ನಮಗೆ ಗೊತ್ತಿರೋ ವಿಷ್ಯ ಈ ಪುರಾಣ ಯಾಕೆ ಅಂತ ಕೇಳ್ತಿದ್ದೀರಾ? ಮುಂದೆ ಓದಿ..

ಮುಂಬೈನಲ್ಲಿ(Mumbai) ಯುವಕನೋರ್ವ ತನ್ನ ಹುಟ್ಟುಹಬ್ಬದ ಆಚರಣೆಯ (Birthday celebration) ಸಂಭ್ರಮದಲ್ಲಿ ಕೇಕ್‌ನ್ನು ಚಾಕುವಿನಿಂದ ಕತ್ತರಿಸುವ ಬದಲು ಖಡ್ಗದಿಂದ ಕತ್ತರಿಸಿದ್ದಾನೆ. ಈತ ಖಡ್ಗದಿಂದ ಕೇಕ್ ಕತ್ತರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದ್ದಂತೆ ಪೊಲೀಸರು ಈತನ ಹಿಂದೆ ಬಿದ್ದಿದ್ದಾರೆ. ಮಹಾರಾಷ್ಟ್ರದ (Maharashtra) ಮುಂಬೈನ ಬೊರಿವಿಲಿಯಲ್ಲಿ(Borivali) ಈ ಘಟನೆ ನಡೆದಿದೆ.

Scroll to load tweet…

ಪಶ್ಚಿಮ ಮುಂಬೈನ ಬೊರಿವಿಲಿಯ 17 ವರ್ಷದ ಯುವಕನೇ ಹೀಗೆ ಕೇಕ್ ಕತ್ತರಿಸಿ ಸಂಕಷ್ಟಕ್ಕೀಡಾದ 17ರ ತರುಣ. 17ನೇ ಹುಟ್ಟುಹಬ್ಬ ಆಚರಿಸುತ್ತಿದ್ದ ಈತ ಬರೋಬ್ಬರಿ 20 ಕೇಕ್‌ಗಳನ್ನು ಒಂದೇ ಏಟಿಗೆ ಚಾಕುವಿನಿಂದ ಕತ್ತರಿಸಿದ್ದಾನೆ. ಆದರೆ ಈತ ಸಾಮಾನ್ಯ ಚಾಕುವಿನಿಂದ ಕೇಕ್ ಕತ್ತರಿಸುತ್ತಿದ್ದರೆ ಇದು ದೊಡ್ಡ ವಿಷಯವಾಗುತ್ತಿರಲಿಲ್ಲ. ಆದರೆ ಈತ ಕೇಕ್ ಕತ್ತರಿಸಲು ದೊಡ್ಡ ಖಡ್ಗ ಬಳಸಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಸಂಭ್ರಮದ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದು ಪೊಲೀಸರು ಹಾಗೂ ಮಾಧ್ಯಮಗಳ ಗಮನ ಸೆಳೆದಿದೆ. 

ಖಡ್ಗಗಳನ್ನು ಎಂದಿಗೂ ನಿಮ್ಮೊಂದಿಗೆ ಇಟ್ಟುಕೊಂಡಿರಿ ಎಂದು ಹಿಂದೂ ಯುವಕರಿಗೆ ಹೇಳಿದ ವಿಎಚ್ ಪಿ ನಾಯಕಿ ಸಾಧ್ವಿ ಸರಸ್ವತಿ!

ಈ ವಿಡಿಯೋವನ್ನು ಅಹ್ಮದ್ ಕಬೀರ್ (Ahmed kabir) ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತರುಣ 20 ಕೇಕ್‌ಗಳನ್ನು ಸಾಲಾಗಿ ಇರಿಸಿ ಒಂದೇ ಬಾರಿಗೆ ಅಷ್ಟೂ ಕೇಕ್‌ಗಳನ್ನು ಕತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಪ್ರತಿ ಕೇಕ್‌ನ ಮೇಲೆಯೂ ಬೇರೆ ಬೇರೆ ಬಣ್ಣದ ಕ್ರೀಮ್‌ನಲ್ಲಿ ಒಂದೊಂದು ಅಕ್ಷರಗಳನ್ನು ಬರೆಯಲಾಗಿತ್ತು. ಆದರೆ ಈ ವಿಡಿಯೋದಲ್ಲಿ ಯಾವುದೇ ಆಡಿಯೋಗಳಿಲ್ಲ. 

Scroll to load tweet…

ಈ ವಿಡಿಯೋ ವೈರಲ್ ಆದ ಬಳಿಕ ಮುಂಬೈ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಬಾಲಕನನ್ನು ಪತ್ತೆ ಮಾಡಿದ ಪೊಲೀಸರು ಕೇಕ್ ಕತ್ತರಿಸಲು ಖಡ್ಗ ಬಳಸಿದ್ದಕ್ಕಾಗಿ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಆತನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐಗೆ ಮುಂಬೈ ಪೊಲೀಸರು ನೀಡಿದ ಹೇಳಿಕೆಯಂತೆ ಶಸ್ತ್ರಾಸ್ತ್ರ ಕಾಯ್ದೆಯ ಅಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಕೋವಿಡ್ ಸಮಯದಲ್ಲಿ ಕಳೆದ ವರ್ಷದ ಏಪ್ರಿಲ್‌ನಲ್ಲಿ, ತಮ್ಮ ಹುಟ್ಟುಹಬ್ಬದಂದು ಮನೆಯಲ್ಲಿದಿದ್ದಕ್ಕಾಗಿ ಮುಂಬೈ ಪೊಲೀಸರು ಜವಾಬ್ದಾರಿಯುತ ನಾಗರಿಕರಿಗೆ ಮನೆಗೆ ಕೇಕ್ ಕಳುಹಿಸುವ ಮೂಲಕ ಸುದ್ದಿಯಾಗಿದ್ದರು. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜನರು ಮನೆಯಲ್ಲೇ ಇರುವಂತೆ ಮುಂಬೈ ಪೊಲೀಸರು ಮನವಿ ಮಾಡಿದ್ದರು.

ಈ ದೇಶದಲ್ಲಿ ಹೆಂಡ್ತಿ ಬರ್ತ್‌ಡೇ ಮರೆತ್ರೆ ಜೈಲೂಟ ಗ್ಯಾರಂಟಿ !