Asianet Suvarna News Asianet Suvarna News

ಖಡ್ಗಗಳನ್ನು ಎಂದಿಗೂ ನಿಮ್ಮೊಂದಿಗೆ ಇಟ್ಟುಕೊಂಡಿರಿ ಎಂದು ಹಿಂದೂ ಯುವಕರಿಗೆ ಹೇಳಿದ ವಿಎಚ್ ಪಿ ನಾಯಕಿ ಸಾಧ್ವಿ ಸರಸ್ವತಿ!

ರಾಮನವಮಿಯ ಸಂದರ್ಭದಲ್ಲಿ ಭಾನುವಾರ ಪುಣೆಯಿಂದ 340 ಕಿಮೀ ದೂರದಲ್ಲಿರುವ ಉತ್ತರ ಮಹಾರಾಷ್ಟ್ರದ ಧುಲೆ ನಗರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಹಿಂದೂಗಳ ಗೌರವದ ಸಂಕೇತ ಎಂದು ಹೇಳಿದ್ದಾರೆ.

Vishwa Hindu Parishad leader Sadhvi Saraswati asks Hindu youth to carry swords san
Author
Bengaluru, First Published Apr 12, 2022, 5:07 PM IST

ಪುಣೆ (ಏ.12): ಪಾಕ್ ಬೆಂಬಲಿತ ಭಯೋತ್ಪಾದಕರ ದುಷ್ಕೃತ್ಯಗಳಿಂದಾಗಿ ಕಣಿವೆಯಿಂದ ಕಾಶ್ಮೀರಿ ಪಂಡಿತರು ವಲಸೆ ಹೋಗುವಂತಹ ಸಂದರ್ಭಗಳನ್ನು ನಮ್ಮಲ್ಲಿ ಆಗುವುದು ಬೇಡ ಆ ಕಾರಣಕ್ಕಾಗಿ ಹಿಂದೂ ಯುವಕರು ಯಾವಾಗಲೂ ಖಡ್ಗಗಳನ್ನು ತಮ್ಮೊಂದಿಗೆ ಇಟ್ಟುಕೊಂಡಿರಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕಿ ಸಾಧ್ವಿ ಸರಸ್ವತಿ (Sadhvi Saraswati) ಒತ್ತಾಯಿಸಿದ್ದಾರೆ.

ರಾಮ ನವಮಿಯ (Rama Navami) ಸಂದರ್ಭದಲ್ಲಿ ಭಾನುವಾರ ಪುಣೆಯಿಂದ (Pume)ಸುಮಾರು 340 ಕಿಮೀ ದೂರದಲ್ಲಿರುವ ಉತ್ತರ ಮಹಾರಾಷ್ಟ್ರದ ಧುಲೆ ನಗರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಹಿಂದೂಗಳ "ಆನ್, ಬಾನ್, ಔರ್ ಶಾನ್ (ಹೆಮ್ಮೆ ಮತ್ತು ಗೌರವ)" ಎಂದು ವಿಎಚ್ ಪಿ ( Vishwa Hindu Parishad) ಹೇಳಿದರು.

ಕಾಶ್ಮೀರಿ ಪಂಡಿತರ ಸ್ಥಳಾಂತರದ ಬಗ್ಗೆ ಮಾತನಾಡಿದ ಸಾಧ್ವಿ ಸರಸ್ವತಿ, "ನಮ್ಮನ್ನೂ ನಮ್ಮ ಮನೆಗಳಿಂದ ಹೊರಹಾಕುವ ದಿನಕ್ಕಾಗಿ ನಾವು ಕಾಯುತ್ತಿದ್ದೇವೆಯೇ? ಆ ಸಮಯದಲ್ಲೂ ಈ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹಿಂದುಗಳು, ಬ್ರಾಹ್ಮಣರು ಕತ್ತಿಯನ್ನು ಎತ್ತಿ ಏಕೆ ಹೋರಾಟ ಮಾಡಲಿಲ್ಲ ಎಂದು ಕೇಳುತ್ತಾರೆ. ನಿಮ್ಮ ಮೇಲೆ ದಾಳಿ ಮಾಡಲು ಬಂದಾಗ ನೀವೇಕೆ ಹೋರಾಟ ಮಾಡಲಿಲ್ಲ. ನಿಮ್ಮ ಹಕ್ಕುಗಳಿಗಾಗಿ ನೀವೇಕೆ ಹೋರಾಟ ಮಾಡಲಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ.

"ನೀವು ಕತ್ತಿಗಳನ್ನು ಎತ್ತಿಕೊಳ್ಳಬೇಕು ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನೀವು 1 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದಾದರೆ, 1,000 ರೂಪಾಯಿ ಮೌಲ್ಯದ ಖಡ್ಗವನ್ನು ಸಹ ಖರೀದಿಸಿ ಮತ್ತು ಅದನ್ನು ನಿಮ್ಮೊಂದಿಗೆ ಒಯ್ಯರಿ. ಆಯುಧಗಳನ್ನು ಹೊಂದಿರುವುದು ಹಿಂದೂಗಳ ಆನ್, ಬಾನ್ ಔರ್ ಶಾನ್," ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಹಿಂದೂ ಮಹಾಪಂಚಾಯತ್‌ನಲ್ಲಿ ಭಾಷಣ ಮಾಡುವಾಗ ದಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಸರಸ್ವತಿ ಮತ್ತು ಸುದರ್ಶನ್ ನ್ಯೂಸ್‌ನ ಮುಖ್ಯ ಸಂಪಾದಕ ಸುರೇಶ್ ಚೌಹಾಂಕೆ ಪ್ರಚೋದನಕಾರಿ ಭಾಷಣ ಮಾಡಿದ ಕೆಲವೇ ದಿನಗಳಲ್ಲಿ ಸಾಧ್ವಿ ಸರಸ್ವತಿ ಅವರ ಹೇಳಿಕೆ ಬಂದಿದೆ.

ಯತಿ ನರಸಿಂಹಾನಂದ ಸರಸ್ವತಿ ಅವರು ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು, ಆದರೆ ಚೌಹಾಂಕೆ ಭಾರತದಲ್ಲಿ ಮುಸ್ಲಿಮರಿಗೆ ಸಮಾನ ಹಕ್ಕುಗಳನ್ನು ನೀಡುವುದರ ವಿರುದ್ಧ ಮಾತನಾಡಿದರು. ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಸಿಗುತ್ತಿರುವಷ್ಟೇ ಹಕ್ಕುಗಳನ್ನು ಭಾರತೀಯ ಮುಸ್ಲಿಮರಿಗೂ ನೀಡಬೇಕು ಎಂದು ಸುದರ್ಶನ ನ್ಯೂಸ್‌ನ ಮುಖ್ಯ ಸಂಪಾದಕ ಹೇಳಿದ್ದರು. ಈ ಹಿಂದೆ, ಹರಿದ್ವಾರದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪದಲ್ಲಿ ನರಸಿಂಹಾನಂದರನ್ನು ಬಂಧಿಸಲಾಗಿತ್ತು, ಅದರಲ್ಲಿ ಅವರು ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದರು ಎಂದು ವರದಿಯಾಗಿತ್ತು.

Follow Us:
Download App:
  • android
  • ios