ಈ ದೇಶದಲ್ಲಿ ಹೆಂಡ್ತಿ ಬರ್ತ್‌ಡೇ ಮರೆತ್ರೆ ಜೈಲೂಟ ಗ್ಯಾರಂಟಿ !

ಮದ್ವೆಯಾದ ಹೆಚ್ಚಿನ ಗಂಡಸರು ಹೆಂಡ್ತಿಯಿಂದ ಬೈಗುಳ ತಿನ್ನೋ ಕಾರಣಗಳ ಲಿಸ್ಟ್‌ನಲ್ಲಿ ಮೊದಲಿಗೆ ಬರೋದು ವೈಫ್‌ ಬರ್ತಡೇ ಮರೆಯೋ ವಿಚಾರ. ಹೆಂಡ್ತಿ, ಗಂಡ ಸರ್‌ಪ್ರೈಸ್ ಕೊಡ್ತಾನೆ ಅಂತ ಕಾಯೋದು, ಗಂಡ, ಹೆಂಡ್ತಿ ಯಾಕೆ ರೆಡಿಯಾಗಿ ನಿಂತಿದ್ದಾಳೆ ಅಂತ ಗೊತ್ತಾಗದೆ ತಬ್ಬಿಬ್ಬಾಗೋದು ಹೊಸದೇನಲ್ಲ. ಆದ್ರೆ ನಮ್‌ ದೇಶದಲ್ಲೇನೋ ಹೆಂಡ್ತಿ ಬರ್ತ್‌ಡೇ ಮರೆಯೋದು ನಡೆಯುತ್ತೆ. ಆದ್ರೆ ಸಮೋವಾದಲ್ಲಿ ವೈಫ್‌ ಬರ್ತ್‌ಡೇ ಮರೆತ್‌ ಹೋದ್ರೆ ಜೈಲೂಟ ಗ್ಯಾರಂಟಿ.

Forgetting Wifes Birthday Is Legal Offense In This Country Vin

ದಾಂಪತ್ಯ ಅನ್ನೋದು ಸುಮಧುರ ಸಂಬಂಧ. ಹೀಗಾಗಿ ಗಂಡ-ಹೆಂಡ್ತಿ ಪರಸ್ಪರ ಬರ್ತ್‌ಡೇಗೆ ವಿಶ್ ಮಾಡಿಕೊಳ್ಳುವುದು, ಆನಿವರ್ಸರಿ ಸೆಲಬ್ರೇಟ್ ಮಾಡಿಕೊಳ್ಳುವುದು ಮಾಡಿಕೊಳ್ಳುತ್ತಿರುತ್ತಾರೆ. ಹೆಂಗಸರು ಇಂಥಾ ವಿಚಾರಗಳನ್ನು ತುಂಬಾ ಚೆನ್ನಾಗಿ ನೆನಪಿಟ್ಟುಕೊಂಡ್ರೂ ಗಂಡಸರು ಪ್ರತಿ ಬಾರಿ ಹೆಂಡ್ತಿಯ ಬರ್ತ್‌ಡೇ, ಆನಿವರ್ಸರಿ ಡೇಟ್‌ಗಳನ್ನು ಮರೆಯೋದು ಕಾಮನ್‌. ಹೆಂಡ್ತಿ, ಗಂಡ ಸರ್‌ಪ್ರೈಸ್ ಕೊಡ್ತಾನೆ ಅಂತ ಕಾಯೋದು, ಗಂಡ, ಹೆಂಡ್ತಿ ಯಾಕೆ ರೆಡಿಯಾಗಿ ನಿಂತಿದ್ದಾಳೆ ಅಂತ ಗೊತ್ತಾಗದೆ ತಬ್ಬಿಬ್ಬಾಗೋದು ಸಹ ಹೊಸದೇನಲ್ಲ. ಬರ್ತ್‌ಡೇ ಮರೆತ ಗಂಡನ ಮುಂದ್ರೆ ಹೆಂಡ್ತಿ ಉಗ್ರಾವಾತಾರ ತಾಳೋದು, ಅವಳನ್ನು ಸಮಾಧಾನ ಪಡಿಸೋಕೆ ಗಂಡ ಮತ್ತೆ ಏನೇನೋ ಸರ್ಕಸ್ ಮಾಡೋದು ನಡೀತಾನೆ ಇರುತ್ತೆ. ನಮ್ಮ ದೇಶದಲ್ಲೇನೋ ಇಂಥದ್ದೆಲ್ಲಾ ನಡೆಯುತ್ತೆ. ಆದ್ರೆ ಸಮೋವಾದಲ್ಲಿ ವೈಫ್‌ ಬರ್ತ್‌ಡೇ ಮರೆತ್‌ ಹೋದ್ರೆ ಜೈಲೂಟ ಗ್ಯಾರಂಟಿ.

ಹೆಂಡತಿಯ ಜನ್ಮದಿನವನ್ನು ಮರೆತುಬಿಡುವುದು ಕಾನೂನು ಅಪರಾಧ
ಹೌದು, ಸಮೋವಾ ಎಂಬ ದೇಶದಲ್ಲಿ ಹೆಂಡತಿಯ (Wife) ಹುಟ್ಟುಹಬ್ಬವನ್ನು ಮರೆಯುವುದು ಅಪರಾಧ. ನಿರುಪದ್ರವವೆಂದು ತೋರುವ ಕನಿಷ್ಠ ಪ್ರಮಾಣದ ಚಟುವಟಿಕೆಯು ನಿಮ್ಮನ್ನು ಜೈಲಿಗೆ ಕಳುಹಿಸುವಂತೆ ಮಾಡಬಹುದು. ಪೆಸಿಫಿಕ್‌ನ ಪಾಲಿನೇಷ್ಯನ್ ಪ್ರದೇಶದ ಸಮೋವಾದಲ್ಲಿ ನಿಮ್ಮ ಹೆಂಡತಿಯ ಜನ್ಮದಿನವನ್ನು ಮರೆತುಬಿಡುವುದು ನಿಮ್ಮನ್ನು ಕಾನೂನು ತೊಂದರೆಗೆ (Problem) ಸಿಲುಕಿಸಬಹುದು.

Relationship Tips : ಪುರುಷರ ಈ ಕೆಲಸ ಮಹಿಳೆಯರಿಗೆ ಬಿಲ್ಕುಲ್ ಇಷ್ಟವಾಗಲ್ಲ

ಮೋವಾ ಹೆಸರಿನ ಸುಂದರ ದ್ವೀಪವು ಸ್ವರ್ಗದಷ್ಟು ಸುಂದರವಾಗಿದೆ. ಆದರೆ ಹೆಂಡತಿಯ ಅಸಡ್ಡೆ ಗಂಡಂದಿರಿಗೆ (Husband) ಇದು ನರಕವಾಗಿದೆ. ಜನ್ಮದಿನಗಳು ವಿಶೇಷವಾದವು ಎಂಬುದನ್ನು ಅಲ್ಲಗಳೆಯುವಂತಿಲ್ಲ ಮತ್ತು ನಾವು ಆ ವ್ಯಕ್ತಿಯನ್ನು ವಿಶೇಷವಾಗಿ ಭಾವಿಸಬೇಕು, ಆದರೆ ಸಮೋವಾದಲ್ಲಿ ನಿಮ್ಮ ಹೆಂಡತಿಯ ಜನ್ಮದಿನವನ್ನು (Birthday) ಮರೆತುಬಿಡುವುದು ಕಾನೂನು ಅಪರಾಧವಾಗಿದೆ.

ಪತ್ನಿಯ ಹುಟ್ಟುಹಬ್ಬ ಮರೆತರೆ ಜೈಲು ಶಿಕ್ಷೆ
ಸಮೋವಾದಲ್ಲಿ, ಗಂಡನು ಆಕಸ್ಮಿಕವಾಗಿ ತನ್ನ ಹೆಂಡತಿಯ ಜನ್ಮದಿನವನ್ನು ಮರೆತರೆ, ಅವನು ಜೈಲು ಶಿಕ್ಷೆಯನ್ನು ಎದುರಿಸಬಹುದು. ಸಮೋವಾ ಕಾನೂನಿನ ಪ್ರಕಾರ, ಪತಿ ಆಕಸ್ಮಿಕವಾಗಿ ತನ್ನ ಹೆಂಡತಿಯ ಜನ್ಮದಿನವನ್ನು ಮರೆತರೆ, ಅದು ಅಪರಾಧದ ವರ್ಗಕ್ಕೆ ಬರುತ್ತದೆ. ಈ ಬಗ್ಗೆ ಪತ್ನಿ ಪೊಲೀಸರಿಗೆ ದೂರು (Complaint) ನೀಡಿದರೆ, ಪತಿ ಲಾಕಪ್‌ಗೆ ಹೋಗಬೇಕಾಗಬಹುದು. ಈಗ ಗಂಡನ ತಪ್ಪನ್ನು ತಿದ್ದಲು ಕಾನೂನು ವ್ಯವಸ್ಥೆ  ಮಾಡಿರುವುದರಿಂದ ಅಷ್ಟೊಂದು ಭಯಪಡುವ ಅಗತ್ಯವಿಲ್ಲ.

ಮೊದಲ ಬಾರಿಗೆ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಮರೆತು, ಮುಂದಿನ ಬಾರಿ ಅದನ್ನು ಪುನರಾವರ್ತಿಸದಂತೆ ಪೊಲೀಸರು ಎಚ್ಚರಿಸಿದ್ದಾರೆ. ಗಂಡನ ಅದೃಷ್ಟ ಕೆಟ್ಟದಾಗಿದ್ದರೆ ಮತ್ತು ಅವನು ಮತ್ತೆ ಅದೇ ತಪ್ಪನ್ನು ಮಾಡಿದರೆ, ನಂತರ ಜೈಲಿಗಟ್ಟಲಾಗುತ್ತದೆ. ಹೀಗಾಗಿ ಸಮೋವಾ ದೇಶದ ಗಂಡದಿರು ತಮ್ಮ ಬರ್ತ್‌ಡೇ ಮರೆತ್ರೂ ಹೆಂಡ್ತಿ ಹುಟ್ಟುಹಬ್ಬ ಮಾತ್ರ ಮರೆಯೋ ಹಾಗಿಲ್ಲ.

ಸಂಗಾತಿಯೊಂದಿಗೆ ಮಲಗುವುದರಿಂದ ಆರೋಗ್ಯಕ್ಕಿದೆ ಹಲವು ಲಾಭ!

ಉತ್ತರ ಕೊರಿಯಾದಲ್ಲಿ ನೀಲಿ ಜೀನ್ಸ್‌ ಧರಿಸುವಂತಿಲ್ಲ
ಉತ್ತರ ಕೊರಿಯಾದಲ್ಲಿ, ನೀಲಿ ಜೀನ್ಸ್‌ನ್ನು ಹಾಕಿ ಮನೆಯಿಂದ ಹೊರ ಬರುವುದು ಕಾನೂನುಬಾಹಿರವಾಗಿದೆ. ಪೂರ್ವ ಆಫ್ರಿಕಾದಲ್ಲಿ ಜಾಗಿಂಗ್ ಅನ್ನು ನಿಷೇಧಿಸಿರುವುದರಿಂದ ಜಾಗಿಂಗ್ ಮಾಡಲು ಸಾಧ್ಯವಿಲ್ಲ. ಸಿಂಗಾಪುರದಲ್ಲಿ ಚೂಯಿಂಗ್ ಗಮ್ ಅನ್ನು ನಿಷೇಧಿಸಲಾಗಿದೆ ಏಕೆಂದರೆ ಅದು ಕೊಳೆತವನ್ನು ಉಂಟುಮಾಡುತ್ತದೆ, ಆದರೆ ಓಕ್ಲಹೋಮಾದಲ್ಲಿ ನಾಯಿಯನ್ನು ಕೆಟ್ಟದಾಗಿ  ಬೈದರೆ ವ್ಯಕ್ತಿಯನ್ನು ಜೈಲಿಗೆ ಹಾಕಲಾಗುತ್ತದೆ. 

Latest Videos
Follow Us:
Download App:
  • android
  • ios