Asianet Suvarna News Asianet Suvarna News

ಪಟಾಕಿ ಸಿಡಿತ ವಿಚಾರಕ್ಕೆ ಜಗಳ: ತಂದೆ ಜತೆ ಸೇರಿ ವ್ಯಕ್ತಿಯನ್ನು ಕೊಂದ ಟೆಕ್ಕಿ

*  ಬೆಳ್ಳಂಬೆಳಗ್ಗೆ ಕಲಬುರಗಿ ಬಸ್‌ ನಿಲ್ದಾಣದಲ್ಲಿ ಕೊಲೆ
*  ಪಟಾಕಿ ತರಲು ಹೋಗಿದ್ದ 9 ವರ್ಷದ ಬಾಲಕನ ಅಪಹರಿಸಿ ದಾರುಣ ಕೊಲೆ
*  ತನಿಖೆ ಆರಂಭಿಸಿದ ಪೊಲೀಸರು
 

Mangaluru Man Murder for Quarrel for in The Name of Fireworks grg
Author
Bengaluru, First Published Nov 5, 2021, 7:19 AM IST
  • Facebook
  • Twitter
  • Whatsapp

ಮಂಗಳೂರು(ನ.05):  ದೀಪಾವಳಿಗೆ(Deepavali) ಪಟಾಕಿ(Fireworks) ಸಿಡಿಸುವ ಕ್ಷುಲ್ಲಕ ವಿಚಾರದಲ್ಲಿ ವಾಗ್ವಾದ ನಡೆದು ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ನಗರದ ಕಾರ್‌ಸ್ಟ್ರೀಟ್‌ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. 

ಅಪಾರ್ಟ್‌ಮೆಂಟ್‌ ನಿವಾಸಿ ವಿನಾಯಕ್‌ ಕಾಮತ್‌ (45) ಕೊಲೆಗೀಡಾದವರು(Murder). ಈ ಸಂಬಂಧ ಬ್ಯಾಂಕೊಂದರ ನಿವೃತ್ತ ಉದ್ಯೋಗಿ ಕೃಷ್ಣಾನಂದ ಕಿಣಿ (72), ಪುತ್ರ ಸಾಫ್ಟ್‌ವೇರ್‌ ಎಂಜಿನಿಯರ್‌(Software Engineer) ಅವಿನಾಶ್‌ ಕಿಣಿ (45) ಎಂಬುವರನ್ನು ಬಂಧಿಸಲಾಗಿದೆ(Arrest). ಟ್ರಾವೆಲ್ಸ್‌ ಸಂಸ್ಥೆಯೊಂದರ ಟೂರ್‌ ಮ್ಯಾನೇಜರ್‌ ಆಗಿರುವ ವಿನಾಯಕ ಕಾಮತ್‌ ಅವರು ಕುಟುಂಬದ ಜೊತೆ ನಗರದ ಕಾರ್‌ಸ್ಟ್ರೀಟ್‌ ವೀರ ವೆಂಕಟೇಶ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಬುಧವಾರ ರಾತ್ರಿ 11ಕ್ಕೆ ಫ್ಲ್ಯಾಟ್‌ನಲ್ಲಿರುವ ಕೆಲವರು ಪಟಾಕಿ ಸಿಡಿಸುತ್ತಿದ್ದಾಗ ವಿನಾಯಕ ಕಾಮತ್‌ ಅಲ್ಲಿಗೆ ತೆರಳಿ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ. 

ಈ ಸಂದರ್ಭ ಕೃಷ್ಣಾನಂದ ಕಿಣಿ ಆಗಮಿಸಿ ಪಟಾಕಿ ಸಿಡಿಸುವವರನ್ನು ಬೆಂಬಲಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿನಾಯಕ್‌ ಕಾಮತ್‌ಗೆ ಕೃಷ್ಣಾನಂದ ಕಿಣಿ ಹಾಗೂ ಅವರ ಪುತ್ರ ಅವಿನಾಶ್‌ ಇರಿದು ಕೊಂದಿದ್ದಾರೆ. ಅಷ್ಟರಲ್ಲಿ ಕೃಷ್ಣಾನಂದ ಕಿಣಿ ಮಗ ಅವಿನಾಶ್‌ ಕಿಣಿ ಕೂಡಾ ಆಗಮಿಸಿ, ಮಾರಣಾಂತಿಕವಾಗಿ ಇರಿದಿದ್ದರು.

Crime News; ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಮಗಳ ಕತ್ತು ಸೀಳಿದ ಕಲಬುರಗಿಯ ಪಾಪಿ

ಅಪಾರ್ಟ್‌ಮೆಂಟ್‌ನ ಪ್ರಮುಖ ಗೇಟ್‌ ಬಳಿ ಪಾಲಿಕೆಯಿಂದ ಕಾಂಕ್ರಿಟ್‌ ಕಾಮಗಾರಿ ನಡೆದಿದ್ದು, ಅದರಲ್ಲಿ ಕಾರು ಹೋಗುವ ವಿಚಾರದಲ್ಲಿ ವಿನಾಯಕ್‌ ಕಾಮತ್‌ ಹಾಗೂ ಕೃಷ್ಣಾನಂದ ಕಿಣಿ ಮಧ್ಯೆ ವಾರದ ಹಿಂದೆ ಜಗಳವಾಗಿತ್ತು. ಈ ಎರಡು ಕುಟುಂಬಗಳು ಪರಸ್ಪರ ಮನಸ್ತಾಪ ಹೊಂದಿದ್ದರು.

ನ.3ರಂದು ರಾತ್ರಿ 11ಕ್ಕೆ ಫ್ಲ್ಯಾಟ್‌ನಲ್ಲಿರುವ ಕೆಲವರು ಪಟಾಕಿ ಸಿಡಿಸುತ್ತಿದ್ದಾಗ ವಿನಾಯಕ ಕಾಮತ್‌ ಅಲ್ಲಿಗೆ ತೆರಳಿ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ. ಈ ಸಂದರ್ಭ ಕೃಷ್ಣಾನಂದ ಕಿಣಿ ಆಗಮಿಸಿ ಪಟಾಕಿ ಸಿಡಿಸುವವರನ್ನು ಬೆಂಬಲಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿನಾಯಕ್‌ ಕಾಮತ್‌ಗೆ ಕೃಷ್ಣಾನಂದ ಕಿಣಿ ಇರಿದಿದ್ದರು. ಅಷ್ಟರಲ್ಲಿ ಕೃಷ್ಣಾನಂದ ಕಿಣಿ ಮಗ ಅವಿನಾಶ್‌ ಕಿಣಿ ಕೂಡಾ ಆಗಮಿಸಿ, ಮಾರಣಾಂತಿಕವಾಗಿ ಇರಿದಿದ್ದರು. ಇರಿತದಿಂದ ವಿನಾಯಕ್‌ ಕಾಮತ್‌ ಗಂಭೀರ ಗಾಯಗೊಂಡಿದ್ದು, ಕೂಡಲೇ ಅಪಾರ್ಟ್‌ಮೆಂಟ್‌ ನಿವಾಸಿಗಳು ಆಸ್ಪತ್ರೆಗೆ(Hospital) ದಾಖಲಿಸಿದರೂ ಚಿಕಿತ್ಸೆ(Treatment) ಫಲಿಸದೆ ತಡರಾತ್ರಿ ಮೃತಪಟ್ಟಿದ್ದಾರೆ. ಈ ಸಂಬಂಧ ಪತ್ನಿ ಬಂದರು ಪೊಲೀಸ್‌(Police) ಠಾಣೆಗೆ ದೂರು ನೀಡಿದ್ದು, ಅದರಂತೆ ಆರೋಪಿಗಳನ್ನು ಬಂಧಿಸಲಾಗಿದೆ.

ಪಟಾಕಿ ತರಲು ಹೋಗಿದ್ದ 9 ವರ್ಷದ ಬಾಲಕನ ಅಪಹರಿಸಿ ದಾರುಣ ಕೊಲೆ

ಪಟಾಕಿ ಅಂಗಡಿ ಬಳಿ ನಿಂತಿದ್ದ 9 ವರ್ಷದ ಬಾಲಕನನ್ನು ಸಿನಿಮೀಯ ರೀತಿ ಅಪಹರಿಸಿ ಹತ್ಯೆಗೈದು ಕೆರೆ ಬಳಿ ಶವ ಎಸೆದಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲುಕಿನ ಹನಗೋಡಿನಲ್ಲಿ ಗುರುವಾರ ನಡೆದಿದೆ. ಬಾಲಕನನ್ನು ಅಪಹರಿಸಿದ ದುಷ್ಕರ್ಮಿಗಳು 4 ಲಕ್ಷ ರು. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಮ್ಮ ಗುರುತು ಪತ್ತೆಯಾಗುವ ಭೀತಿಯಿಂದ ಬಳಿಕ ಬಾಲಕನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಕುಡಿದ ನಶೆಯಲ್ಲಿ ಗಲಾಟೆ: ಹುಡುಗಿ ವಿಚಾರಕ್ಕೆ ಸ್ನೇಹಿತನನ್ನೇ ಹತ್ಯೆಗೈದ

ತರಕಾರಿ ವ್ಯಾಪಾರಿ ನಾಗರಾಜ್‌ ಎಂಬುವರ ಪುತ್ರ ಕಾರ್ತಿಕ್‌ (9) ಕೊಲೆಯಾದ ದುರ್ದೈವಿ. ಕಾರ್ತಿಕ್‌ ಬುಧವಾರ ರಾತ್ರಿ 7.30ರ ವೇಳೆ ಮನೆಯಿಂದ ಪಟಾಕಿ ತರಲು ತೆರಳಿದ್ದ ವೇಳೆ ಅಪರಿಚಿತರು ಅಪಹರಿಸಿದ್ದರು. ಆತಂಕಗೊಂಡ ಪೋಷಕರು ಗ್ರಾಮದಲ್ಲಿ ಹುಡುಕಾಟ ನಡೆಸಿದ್ದು, ಈ ವೇಳೆ ಅಪಹರಣಕಾರರು ನಾಗರಾಜ್‌ರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ .4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರಿಗೆ ದೂರು ನೀಡಿದಲ್ಲಿ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ಆತಂಕಗೊಂಡ ಪೋಷಕರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೊಬೈಲ್‌ ಕರೆ ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ ವೇಳೆ ಪೊಲೀಸರಿಗೆ ಗ್ರಾಮದ ಬಳಿಯ ಕುಂಟೇರಿ ಕೆರೆ ಬಳಿಯ ಮುಳ್ಳುಗಂಟಿಗಳ ಪೊದೆಯ ಹಳ್ಳದಲ್ಲಿ ಬಾಲಕನ ಶವ ಪತ್ತೆಯಾಗಿದೆ. ಘಟನೆಗೆ ಸಂಬಂಧಿ ತನಿಖೆ ಚುರುಕುಗೊಳಿಸಿರುವ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.

ಎಸ್ಪಿ ಚೇತನ್‌, ಹೆಚ್ಚುವರಿ ಎಸ್ಪಿ ಶಿವಕುಮಾರ್‌ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವಿಪ್ರಸಾದ್‌ ನೇತೃತ್ವದಲ್ಲಿ ಬುಧವಾರ ಮಧ್ಯರಾತ್ರಿಯೇ ಇನ್ಸ್‌ಪೆಕ್ಟರ್‌ಗಳಾದ ಚಿಕ್ಕಸ್ವಾಮಿ, ಜಯಪ್ರಕಾಶ್‌ ಹಾಗೂ ರವಿಕುಮಾರ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದರು. ಎಸ್ಪಿ, ಹೆಚ್ಚುವರಿ ಎಸ್ಪಿ ಮತ್ತು ಡಿವೈಎಸ್ಪಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಬೆಳ್ಳಂಬೆಳಗ್ಗೆ ಕಲಬುರಗಿ ಬಸ್‌ ನಿಲ್ದಾಣದಲ್ಲಿ ಕೊಲೆ

ಕಲಬುರಗಿ(Kalaburagi): 4​-5 ದುಷ್ಕರ್ಮಿಗಳ ತಂಡವೊಂದು ಯುವಕನೊಬ್ಬನನ್ನು ಕೇಂದ್ರ ಬಸ್‌ ನಿಲ್ದಾಣದ ಆವರಣದಲ್ಲೇ ಮಚ್ಚು ಮತ್ತು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ವಿದ್ಯಾನಗರ ನಿವಾಸಿ, ಸಿಇಎನ್‌ ಠಾಣೆಯ ಹೆಡ್‌ಕಾನ್‌ಸ್ಟೇಬಲ್‌ವೊಬ್ಬರ ಪುತ್ರ ಅಭಿಷೇಕ ನಂದೂರ್‌(26) ಕೊಲೆಯಾದ ಯುವಕ. ಬಿಬಿಎಂ ವ್ಯಾಸಂಗ ಮಾಡಿದ್ದ ಅಭಿಷೇಕ ನಿರುದ್ಯೋಗಿಯಾಗಿದ್ದು ಕೆಲಸಕ್ಕಾಗಿ ಅಲೆಯುತ್ತಿದ್ದ. ರೌಡಿಶೀಟರ್‌(Rowdysheeter) ಆಗಿದ್ದ ಆತನ ವಿರುದ್ಧ 3 ಪ್ರಕರಣಗಳಿದ್ದವು. ಹಣಕಾಸಿನ ವಿಷಯದಲ್ಲಿ ಕೆಲವರೊಂದಿಗೆ ಈತ ಜಗಳವಾಡಿ ವೈಷಮ್ಯ ಕಟ್ಟಿಕೊಂಡಿದ್ದ. ಆ ಹಿನ್ನೆಲೆಯಲ್ಲಿ ಈ ಕೊಲೆ ಆಗಿರಬಹುದು ಎಂದು ನಗರ ಪೊಲೀಸರು ಶಂಕಿಸಿದ್ದಾರೆ.

ಘಟನೆ ವಿವರ: 

ಬೆಳಗ್ಗೆ ಮನೆಯಿಂದ ಜಿಮ್‌ಗೆಂದು ಹೊರಟಿದ್ದ ಅಭಿಷೇಕನನ್ನು ದಾರಿಯಲ್ಲಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ವಾಹನವೊಂದರಲ್ಲಿ ಬೆನ್ನಟ್ಟಿದ್ದಾರೆ. ಇದನ್ನು ಗಮನಿಸಿದ ಅಭಿಷೇಕ ತನ್ನ ಬೈಕ್‌ ಬಸ್‌ ನಿಲ್ದಾಣದ ಬಳಿ ನಿಲ್ಲಿಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ. ಈ ವೇಳೆ ಸಹಾಯಕ್ಕಾಗಿ ಜನರ ಮಧ್ಯೆಯೂ ಓಡಿದ. ಆದರೆ ಬಸ್‌ ನಿಲ್ದಾಣದ ಒಳಗೆ ಓಡಿ ಬಂದ ದುಷ್ಕರ್ಮಿಗಳು ಆತನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆ ಬಸ್‌ಸ್ಟ್ಯಾಂಡಿನ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ(Investigation) ನಡೆಸುತ್ತಿದ್ದಾರೆ.
 

Follow Us:
Download App:
  • android
  • ios