ಮಂಡ್ಯದ ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದು ಚಾಲಕ ಸಾವು: ತಡೆಗೋಡೆ ನಿರ್ಮಿಸದ ಸರ್ಕಾರಕ್ಕೆ ಇನ್ನೆಷ್ಟು ಬಲಿ ಬೇಕು

ಮಂಡ್ಯ ತಾಲೂಕಿನ ಶಿವಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ತಿಬ್ಬನಹಳ್ಳಿ ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದು, ಚಾಲಕ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

Mandya car falls in Vishwesvaraya canal after Driver dies sat

ಮಂಡ್ಯ (ಜು.27): ಕೃಷ್ಣರಾಜ ಸಾಗರ ಜಲಾಶಯ (ಕೆಆರ್‌ಎಸ್‌ ಡ್ಯಾಂ)ನಿಂದ ನೀರಾವರಿ ಉದ್ದೇಶಕ್ಕೋಸ್ಕರ ಮಂಡ್ಯ ಜಿಲ್ಲೆಯ ವಿಶ್ವೇಶ್ವರ್ಯ ಕಾಲುವೆಗೆ (ವಿಸಿ ನಾಲೆ) ಹರಿಸಲಾಗುವ ನೀರಿನಲ್ಲಿ ಕಾರು ಬಿದ್ದು, ಚಾಲಕ ಸಾವನ್ನಪ್ಪಿದ್ದಾನೆ. ಘಟನೆ ನಡೆದು ಸುಮಾರು ಹೊತ್ತಾದರೂ ಇನ್ನೂ ಕಾರು ಚಾಲಕನ ಮೃತದೇಹ ಮಾತ್ರ ಪತ್ತೆಯಾಗಿಲ್ಲ. 

ಮೈಸೂರು ಸಾಮ್ರಾಜ್ಯದ ನಾಲ್ವಡಿ ಕೃಷ್ಣರಾಜ ಒಡೆಯಲು ನೀರಾವರಿ ಯೋಜನೆಗಾಗಿ ಕೃಷ್ಣರಾಜ ಸಾಗರ ಆಣೆಕಟ್ಟು ನಿರ್ಮಿಸಿ ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಆದರೆ, ಮಹಾರಾಜರ ಕಾಲದಲ್ಲಿ ನಿರ್ಮಿಸಲಾದ ಕಾಲುವೆಗಳಿಗೆ ಸರ್ಕಾರ 75 ವರ್ಷಗಳಾದರೂ ಸೂಕ್ತ ತಡೆಗೋಡೆಗಳನ್ನು ನಿರ್ಮಿಸಿಲ್ಲ. ನಾಲೆಯ ಬದಿಯಲ್ಲಿ ರಸ್ತೆಗಳನ್ನು ನಿರ್ಮಿಸಿ ತಡೆಗೋಡೆ ನಿರ್ಮಿಸದೇ ಸರ್ಕಾರ ನಿರ್ಲಕ್ಷ್ಯ ಮಾಡಿದ್ದರಿಂದ ಆಗಿಂದಾಗ್ಗೆ ನಾಲೆಗೆ ಬಸ್‌, ಕಾರು ಹಾಗೂ ಇತರೆ ವಾಹನಗಳು ಉರುಳಿಬಿದ್ದು, ಸಾವಿನ ಘಟನೆಗಳು ವರದಿ ಆಗುತ್ತಿವೆ. ಇಂದು (ಗುರುವಾರ) ಬೆಳಗ್ಗೆ ಕೂಡ ವಿಸಿ ನಾಲೆಗೆ ಕಾರು ಬಿದ್ದು, ಚಾಲಕ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮಂಡ್ಯದ ಗಂಡು- ಬೆಂಗಳೂರು ಹುಡುಗಿ ಫೇಸ್‌ಬುಕ್‌ ಲವ್‌: ತನು-ಮನ-ಧನ ಅರ್ಪಿಸಿದ ಹುಡುಗಿ ಸತ್ತೇ ಹೋದ್ಲು.!

ತಿಬ್ಬನಹಳ್ಳಿ ಬಳಿಯ ನಾಲೆಯಲ್ಲಿ ಮುಳುಗಿದ ಕಾರು: ಮಂಡ್ಯ ಜಿಲ್ಲೆಯ ತಿಬ್ಬನಹಳ್ಳಿ ಮೂಲಕ ಹಾದು ಹೋಗುವ ವಿಶ್ವೇಶ್ವರಯ್ಯ ಕಾಲುವೆ (ವಿಸಿ ನಾಲೆ) ಬಳಿ ದುರ್ಘಟನೆ ನಡೆದಿದೆ. ಲೋಕೇಶ್ ಎಂಬಾತ ಕಾರು ಚಲಿಸಿಕೊಂಡು ಬರುತ್ತಿದ್ದನು. ಆದರೆ, ಕಾರು ಚಾಲನೆಯಲಿರುವಾಗಲೇ ನಿಯಂತ್ರಣ ತಪ್ಪಿದ್ದು, ಪಕ್ಕದಲ್ಲಿಯೇ ತುಂಬಿ ಹರಿಯುತ್ತಿದದ ನಾಲೆಯೊಳಗೆ ಬಿದ್ದಿದೆ. ಕಾಲುವೆಗೆ ತಡೆಗೊಡೆ ಇಲ್ಲದ ಕಾರಣ ಕಾರು ಕಾಲುವೆಗೆ ಬಿದ್ದಿದೆ. ಇನ್ನು ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಅಪಘಾತ ನಡೆಯುತ್ತಿದ್ದಂತೆ ಕಾರಿನ ಕಿಟಕಿ ಗಾಜು ಒಡೆದುಕೊಂಡು ಹರಿಯುತ್ತಿದ್ದ ನೀರಿನಲ್ಲಿ ಈಜಿಕೊಂಡು ಬಂದು ಪ್ರಾಣ ಉಳಿಸಿಕೊಂಡಿದ್ದಾನೆ.

ಇನ್ನೂ ಪತ್ತೆಯಾಗದ ಚಾಲಕನ ಮೃತದೇಹ:  ಆದರೆ, ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಾಕ್ಷಣ ಗಾಬರಿಗೊಂಡಿದ್ದ ಚಾಲಕ ಎಚ್ಚೆತ್ತುಕೊಂಡು ಹೊರಗೆ ಬರುವಷ್ಟರಲ್ಲಿಯೇ ಕಾರು ನೀರಿನಲ್ಲಿ ಮುಳುಗಿದೆ. ಇನ್ನು ಮುಳುಗಿದ ಕಾರಿನಲ್ಲಿ ಚಾಲಕನ ಮೃತದೇಹವೂ ಪತ್ತೆಯಾಗಿಲ್ಲ. ಹೀಗಾಗಿ, ಚಾಲಕ ಮುಳುಗುತ್ತಿರುವ ಕಾರಿನಿಂದ ಹೊರಬರಲು ಯತ್ನಿಸಿದ್ದು, ನೀರು ರಭಸವಾಗಿ ಹರಿಯುತ್ತಿದ್ದರಿಂದ ದಡ ಸೇರಲಾಗದೇ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗುತ್ತಿದೆ. ಲೋಕೇಶ್‌ಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಇನ್ನು ಘಟನೆಯ ಬೆನ್ನಲ್ಲೇ ಕಾಲುವೆಯ ನೀರು ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕಾಲುವೆಗೆ ತಡೆಗೋಡೆ ನಿರ್ಮಿಸದೇ ಸರ್ಕಾರದ ನಿರ್ಲಕ್ಷ್ಯ: ಈ ಘಟನೆ ಸಂಬಂಧ ಮಂಡ್ಯ ತಾಲೂಕಿನ ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 2017ರಲ್ಲಿ ಕಾಲುವೆಗೆ ತಡೆಗೊಡೆ ಇಲ್ಲದೇ ದೊಡ್ಡ ಬಸ್ ದುರಂತ ನಡೆದು, ಸುಮಾರು 22ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಇದಾದ ನಂತರವೂ ಮೃತರ ಕುಟುಂಬಕ್ಕೆ ಕೆಲವೊಂದಿಷ್ಟು ಪರಿಹಾರವನ್ನು ಕೊಟ್ಟು ಕೈತೊಳೆದುಕೊಂಡಿತ್ತು. ಆದರೆಮ ತಡೆಗೋಡೆ ನಿರ್ಮಾಣ ಮಾಡದೇ ನಿರ್ಲಕ್ಷ್ಯ ಮಾಡಲಾಗಿದೆ. ತಡೆಗೋಡೆ ಇಲ್ಲದ ಕಾರಣ ದಿನೇ ದಿನೇ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

 ಕೊಚ್ಚಿಹೋದ ಯುವಕ.. 70 ಗಂಟೆಯಾದ್ರೂ ಸಿಗದ ಶವ: ಮಗನ ಮೃತದೇಹಕ್ಕಾಗಿ ಅನ್ನ, ನೀರು ಬಿಟ್ಟ ಪೋಷಕರು

ಶಿವಳ್ಳಿಯಲ್ಲಿ ಮೆಡಿಕಲ್‌ ಶಾಪ್‌ ಇಟ್ಟುಕೊಂಡಿದ್ದ:  ಇನ್ನು ಲೋಕೇಶ್ (45) ಮಂಡ್ಯ ತಾಲೂಕಿನ ಶಿವಹಳ್ಳಿ ಗ್ರಾಮದವರು. ಶಿವಹಳ್ಳಿಯಲ್ಲಿ ಮೆಡಿಕಲ್ ಶಾಪ್‌ ಇಟ್ಟುಕೊಂಡಿದ್ದ ಲೋಕೇಶ್. ಜೊತೆಗೆ ವ್ಯವಸಾಯ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದನು. ಇಂದು ಕೆಲಸ ಮೇಲೆ ಪಾಂಡವಪುರಕ್ಕೆ ತೆರಳುತ್ತಿದ್ದನು. ಈ ವೇಳೆ ಜರುಗಿರುವ ದರ್ಘಟನೆ ನಡೆದಿದೆ. ಇನ್ನು ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ಕಾರ್ ಮೇಲೆತ್ತುತ್ತಿದ್ದಾರೆ. ಸ್ಥಳೀಯ ಈಜುಗಾರರ ಸಹಾಯದಿಂದ ಕಾರು ಮೇಲೆತ್ತಲಾಗುತ್ತಿದ್ದು, ಮೃತ ಲೋಕೇಶ್‌ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. 

Latest Videos
Follow Us:
Download App:
  • android
  • ios