MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕಳ್ಳನ ಕೈಗೆ ಬೆಂಗಳೂರು ಜ್ಯೂವೆಲ್ಲರಿ ಶಾಪ್ ಕೀ ಕೊಟ್ಟ ಮಾಲೀಕ; 10 ಕೆಜಿ ಆಭರಣ ಕದ್ದು ರಾಜಸ್ಥಾನಕ್ಕೆ ಪರಾರಿ!

ಕಳ್ಳನ ಕೈಗೆ ಬೆಂಗಳೂರು ಜ್ಯೂವೆಲ್ಲರಿ ಶಾಪ್ ಕೀ ಕೊಟ್ಟ ಮಾಲೀಕ; 10 ಕೆಜಿ ಆಭರಣ ಕದ್ದು ರಾಜಸ್ಥಾನಕ್ಕೆ ಪರಾರಿ!

ಯುವಕನೊಬ್ಬ ತಾನು ಕೆಲಸ ಮಾಡುತ್ತಿದ್ದ ಆಭರಣ ಪಾಲೀಶ್ ಅಂಗಡಿಯಲ್ಲೇ 35 ಲಕ್ಷ ಮೌಲ್ಯದ ಬೆಳ್ಳಿ ಕದ್ದು ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಕದ್ದ ಮಾಲು ಮಾರಾಟವಾಗಲು ಮತ್ತು ಜೂಜಿನಲ್ಲಿ ಗೆಲ್ಲಲು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

2 Min read
Author : Sathish Kumar KH
Published : Mar 18 2026, 12:50 PM IST
Share this Photo Gallery
  • FB
  • TW
  • Linkdin
  • Whatsapp
16
ಕಳ್ಳನ ಕೈಗೆ ಜ್ಯೂವೆಲ್ಲರಿ ಶಾಪ್ ಕೀ ಕೊಟ್ಟ ಮಾಲೀಕ
Image Credit : Asianet News

ಕಳ್ಳನ ಕೈಗೆ ಜ್ಯೂವೆಲ್ಲರಿ ಶಾಪ್ ಕೀ ಕೊಟ್ಟ ಮಾಲೀಕ

ಬೆಂಗಳೂರು (ಮಾ.18): ಆನ್‌ಲೈನ್ ಜೂಜಿನ ಚಟ ಮನುಷ್ಯನನ್ನು ಎಂತಹ ದುಸ್ಸಾಹಸಕ್ಕೆ ತಳ್ಳುತ್ತದೆ ಎಂಬುದಕ್ಕೆ ಬೆಂಗಳೂರಿನ ಈ ಘಟನೆ ಸಾಕ್ಷಿಯಾಗಿದೆ. ತಾನು ಕೆಲಸ ಮಾಡುತ್ತಿದ್ದ ಆಭರಣ ಪಾಲೀಶ್ ಅಂಗಡಿಯಲ್ಲೇ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿ, ಬಳಿಕ ಕಳ್ಳತನದ ಮಾಲು ಮಾರಾಟ ಮಾಡಲು ಮತ್ತು ಜೂಜಿನಲ್ಲಿ ಗೆಲ್ಲಲು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ಖದೀಮರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

26
ಘಟನೆಯ ವಿವರ:
Image Credit : Asianet News

ಘಟನೆಯ ವಿವರ:

ಬಂಧಿತ ಆರೋಪಿಗಳನ್ನು ನರೇಂದ್ರ ಮತ್ತು ಆತನಿಗೆ ಸಹಕರಿಸಿದ ಕುಲ್ದೀಪ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಸಿಟಿ ಮಾರ್ಕೆಟ್ ಸಮೀಪದ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 'ಧನಲಕ್ಷ್ಮೀ ರೋಡಿಯಂ' ಎಂಬ ಆಭರಣ ಪಾಲೀಶ್ ಅಂಗಡಿಯಲ್ಲಿ ನರೇಂದ್ರ ಕಳೆದ ಒಂದು ತಿಂಗಳಿನಿಂದ ಕೆಲಸ ಮಾಡುತ್ತಿದ್ದನು. ಈ ಅಂಗಡಿಗೆ ವಿವಿಧ ಬೆಳ್ಳಿ ಅಂಗಡಿಗಳಿಂದ ಆಭರಣಗಳು ಪಾಲೀಶ್ ಮಾಡಲು ಬರುತ್ತಿದ್ದವು.

Related Articles

Related image1
ಬೆಂಗಳೂರು: ಖಾಕಿ ವೇಷದಲ್ಲಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್, ಪೆರೋಲ್ ನಲ್ಲಿ ಬಂದು ರಾಬರಿ ಮಾಡಿ ಜೈಲಿಗೆ ತೆರಳಿರುವ ಕಳ್ಳ!
Related image2
ಸಂಬಳದ ಕಿರಿಕ್ ಬೆನ್ನಲ್ಲೇ ಮಾಲೀಕನಿಗೆ ಶಾಕ್: 80 ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಬಿಡಿಭಾಗ ಕದ್ದ ಅಪ್ಪ-ಮಗ ಅಂದರ್!
36
ಜೂಜಿನ ಲಾಸ್ ಕವರ್ ಮಾಡಲು ಸ್ಕೆಚ್
Image Credit : Asianet News

ಜೂಜಿನ ಲಾಸ್ ಕವರ್ ಮಾಡಲು ಸ್ಕೆಚ್

ಆರೋಪಿ ನರೇಂದ್ರನಿಗೆ ಆನ್‌ಲೈನ್ ಜೂಜಿನ ತೀವ್ರ ಚಟವಿತ್ತು. ಜೂಜಿನಲ್ಲಿ ಈಗಾಗಲೇ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ಈತ, ಅದನ್ನು ಹೇಗಾದರೂ ಮಾಡಿ ವಾಪಸ್ ಪಡೆಯಬೇಕು ಎಂಬ ಹಠಕ್ಕೆ ಬಿದ್ದಿದ್ದನು. 'ಒಮ್ಮೆಲೇ 10 ಲಕ್ಷ ರೂಪಾಯಿ ಇನ್ವೆಸ್ಟ್ ಮಾಡಿದರೆ ಭರ್ಜರಿ ಲಾಭ ಗಳಿಸಿ ಎಲ್ಲಾ ಸಾಲ ತೀರಿಸಬಹುದು' ಎಂಬ ಭ್ರಮೆಯಲ್ಲಿದ್ದ ನರೇಂದ್ರ, ತಾನು ಕೆಲಸ ಮಾಡುವ ಅಂಗಡಿಯಲ್ಲೇ ಕಳ್ಳತನ ಮಾಡಲು ನಿರ್ಧರಿಸಿದನು. ಅಂಗಡಿಯ ಕೀ ಆತನ ಬಳಿಯೇ ಇದ್ದಿದ್ದರಿಂದ ಕೆಲಸ ಸುಲಭವಾಗಿತ್ತು.

46
ಕಳ್ಳತನ ಮಾಡಿ ರಾಜಸ್ಥಾನಕ್ಕೆ ಪರಾರಿ
Image Credit : Asianet News

ಕಳ್ಳತನ ಮಾಡಿ ರಾಜಸ್ಥಾನಕ್ಕೆ ಪರಾರಿ

ಅವಕಾಶ ಸಿಕ್ಕಿದ್ದೇ ತಡ, ಅಂಗಡಿಯಲ್ಲಿದ್ದ ಸುಮಾರು 10.12 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ಎಗರಿಸಿದ ನರೇಂದ್ರ, ತಕ್ಷಣವೇ ಟ್ರೈನ್ ಮೂಲಕ ತನ್ನ ರಾಜ್ಯವಾದ ರಾಜಸ್ಥಾನಕ್ಕೆ ಪರಾರಿಯಾಗಿದ್ದನು. ಅಲ್ಲಿ ತನ್ನ ಸ್ನೇಹಿತ ಕುಲ್ದೀಪ್ ಜೊತೆ ಸೇರಿಕೊಂಡು ಕದ್ದ ಮಾಲಿನಲ್ಲಿ ಸುಮಾರು 3 ಕೆಜಿ ಬೆಳ್ಳಿಯನ್ನು ಮಾರಾಟ ಮಾಡಿದ್ದನು.

56
ದೇವಸ್ಥಾನಗಳ ಸುತ್ತಾಟ
Image Credit : Asianet News

ದೇವಸ್ಥಾನಗಳ ಸುತ್ತಾಟ

ವಿಶೇಷವೆಂದರೆ, ಕಳ್ಳತನ ಮಾಡಿದ ಮೇಲೆ ಸಿಕ್ಕಿಬೀಳಬಾರದು ಮತ್ತು ಉಳಿದ ಬೆಳ್ಳಿ ಹೆಚ್ಚಿನ ಬೆಲೆಗೆ ಮಾರಾಟವಾಗಬೇಕು ಎಂಬ ಉದ್ದೇಶದಿಂದ ಆರೋಪಿಗಳು ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನ ಮತ್ತು ಪ್ರಯಾಗ್ ರಾಜ್‌ಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ದೇವರಿಗೆ ಪೂಜೆ ಸಲ್ಲಿಸಿದರೆ ಜೂಜಿನಲ್ಲಿ ಸಕ್ಸಸ್ ಸಿಗುತ್ತದೆ ಮತ್ತು ಕಳ್ಳತನದ ಹಣ ಡಬಲ್ ಆಗುತ್ತದೆ ಎಂಬುದು ಇವರ ವಿಚಿತ್ರ ನಂಬಿಕೆಯಾಗಿತ್ತು.

66
ಪೊಲೀಸರ ಮಿಂಚಿನ ಕಾರ್ಯಾಚರಣೆ
Image Credit : Asianet News

ಪೊಲೀಸರ ಮಿಂಚಿನ ಕಾರ್ಯಾಚರಣೆ

ಅಂಗಡಿಯಲ್ಲಿ ಬೆಳ್ಳಿ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ಹಲಸೂರು ಗೇಟ್ ಪೊಲೀಸರು ತನಿಖೆ ಆರಂಭಿಸಿದ್ದರು. ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಆರೋಪಿಗಳನ್ನು ಟ್ರ್ಯಾಕ್ ಮಾಡಿದ ಪೊಲೀಸ್ ತಂಡ, ರಾಜಸ್ಥಾನಕ್ಕೆ ತೆರಳಿ ಆರೋಪಿಗಳಾದ ನರೇಂದ್ರ ಮತ್ತು ಕುಲ್ದೀಪ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ಕಳವು ಮಾಡಲಾಗಿದ್ದ 35 ಲಕ್ಷ ಮೌಲ್ಯದ 10.12 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬೆಂಗಳೂರು
ಆಭರಣಗಳು
ಕ್ರೈಮ್ ನ್ಯೂಸ್
ಆನ್ಲೈನ್ ಗೇಮ್ಸ್
Latest Videos
Recommended Stories
Recommended image1
KR ನಗರಕ್ಕೆ ಬಂದು ಮಾಡಿದ್ದೇನು ಅಂತ ಗೊತ್ತು; ಜಿಟಿಡಿ ಹೇಳಿಕೆಗೆ ಸಾ.ರಾ. ಮಹೇಶ್ ತಿರುಗೇಟು!
Recommended image2
ಸಂಬಳದ ಕಿರಿಕ್ ಬೆನ್ನಲ್ಲೇ ಮಾಲೀಕನಿಗೆ ಶಾಕ್: 80 ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಬಿಡಿಭಾಗ ಕದ್ದ ಅಪ್ಪ-ಮಗ ಅಂದರ್!
Recommended image3
ಬೇಸಿಗೆ ಮಳೆ: ಸಿಂಧನೂರಿನಲ್ಲಿ ಸಿಡಿಲು ಬಡಿದು 23 ವರ್ಷದ ಕುರಿಗಾಹಿ ದಾರುಣ ಸಾವು!
Related Stories
Recommended image1
ಬೆಂಗಳೂರು: ಖಾಕಿ ವೇಷದಲ್ಲಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್, ಪೆರೋಲ್ ನಲ್ಲಿ ಬಂದು ರಾಬರಿ ಮಾಡಿ ಜೈಲಿಗೆ ತೆರಳಿರುವ ಕಳ್ಳ!
Recommended image2
ಸಂಬಳದ ಕಿರಿಕ್ ಬೆನ್ನಲ್ಲೇ ಮಾಲೀಕನಿಗೆ ಶಾಕ್: 80 ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಬಿಡಿಭಾಗ ಕದ್ದ ಅಪ್ಪ-ಮಗ ಅಂದರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved