ಫೇಸ್‌ಬುಕ್‌ ಮೂಲಕ ಪರಿಚಿತವಾಗಿ ಪ್ರೀತಿಸಿದ ಮಂಡ್ಯ ಯುವಕನಿಗೆ ತನು-ಮನ-ಧನವನ್ನೂ ಅರ್ಪಿಸಿದ ಯುವತಿಯನ್ನು ಮದುವೆ ಆಗೋದಿಲ್ಲ ಎಂದಿದ್ದಕ್ಕೆ, ಯುವತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಬೆಂಗಳೂರು (ಜು.27): ಮೊಬೈಲ್‌ನ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುವ ಪ್ರೀತಿಯ ಗಟ್ಟಿಯಾಗಿರೋದಿಲ್ಲ ಎಂಬುದಕ್ಕೆ ಎಷ್ಟೇ ಉದಾಹರಣೆಗಳು ಇದ್ದರೂ, ಅನೇಕರು ಮೋಸದ ಪ್ರೀತಿಗೆ ಬಿದ್ದು ಬಲಿಯಾಗುತ್ತಿದ್ದಾರೆ. ಫೇಸ್‌ಬುಕ್‌ ಮೂಲಕ ಪರಿಚಿತವಾದ ಮಂಡ್ಯ ಯುವಕ ನಿನ್ನನ್ನೇ ಮದುವೆಯಾಗುತ್ತೇನೆಂದು ಬೆಂಗಳೂರು ಯುವತಿ ಮುಂದೆ ಪ್ರೀತಿಯ ನಾಟಕವಾಡಿ ತನು-ಮನ-ಧನವನ್ನೂ ಪಡೆದುಕೊಂಡಿದ್ದಾನೆ. ಈಗ ಮದುವೆಯಾಗೊಲ್ಲ ಎಂದು ಹೇಳಿದ್ದರಿಂದ ಮನನೊಂದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಜಾಗತಿಕವಾಗಿ ಮೊಬೈಲ್‌ ಬಳಕೆ ಹೆಚ್ಚಾದ ತಕ್ಷಣ ಇಡೀ ವಿಶ್ವವೇ ಒಂದು ಚಿಕ್ಕದಾಗಿದೆ ಎಂಬಂತಾಗಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೋ ಇದ್ದವರನ್ನು ಸುಲಭವಾಗಿ ಸಂಪರ್ಕಿಸಿ ಸ್ನೇಹ ಪ್ರೀತಿ ಅಂತ ಮೋಸ ಹೋಗಿ ಜೀವನ ಹಾಳು ಮಾಡಿಕೊಂಡವರ ಸಂಖ್ಯೆಯೂ ಹೆಚ್ಚಾಗಿದೆ. ಇದೇ ರೀತಿ ಬೆಂಗಳೂರಿನ ಯುವತಿಯನ್ನು ಫೇಸ್‌ಬುಕ್‌ ಮೂಲಕ ಪರಿಚಯ ಮಾಡಿಕೊಂಡಿದ್ದ ಮಂಡ್ಯ ಮೂಲದ ಯುವಕ ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟಿದ್ದಾನೆ. ಇದರಿಂದ ಯುವತಿ ನನಗೆ ನೀನಿಲ್ಲದ ಜೀವನವೇ ಬೇಡವೆಂದು ಆತ್ಮಹತ್ಯೆಗೆ ಶರಣಾಗಿ ಪ್ರಾಣವನ್ನೇ ಬಿಟ್ಟಿದ್ದಾಳೆ.

Bengaluru: ಹಳ್ಳಿ ಹುಡುಗಿ ಬೇಕು ಅಂತ ಮದ್ವೆಯಾಗಿ, ಆರೇ ತಿಂಗಳಿಗೆ ಕೊಲೆ ಮಾಡಿದ ಕಿತಾ'ಪತಿ'

ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಕೆಂಪಾಪುರದಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವತಿ ವಿದ್ಯಾಶ್ರೀ ಆಗಿದ್ದಾಳೆ. ಯುವತಿಗೆ ಕೈಕೊಟ್ಟ ಯುವಕನನ್ನು ಮಂಡ್ಯ ಮೂಲದ ಅಕ್ಷಯ್‌ ಎಂದು ಗುರುತಿಸಲಾಗಿದೆ. ಅಕ್ಷಯ್ ಮೂಲತಃ ಮಂಡ್ಯ ಮೂಲದವನಾಗಿದ್ದು, ಬಸವೇಶ್ವರ ನಗರದಲ್ಲಿ ವಾಸವಿದ್ದನು. ಕಳೆದ ಮೂರು ವರ್ಷಗಳ ಹಿಂದೆ ಫೇಸ್‌ಬುಕ್‌ ಮೂಲಕ ಪರಿಚಯರಾದ ಇವರ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಇದಾದ ನಂತರ ಸುಮಾರು ಮೂವರು ವರ್ಷಗಳಿಂದಲೂ ಪ್ರೀತಿ ಮಾಡಿಕೊಂಡು ಪ್ರಣಯ ಪಕ್ಷಿಗಳಂತೆ ಓಡಾಡಿದ್ದಾರೆ. 

ತನು-ಮನ, ಧನವನ್ನೂ ಅರ್ಪಿಸಿದ್ದ ಯುವತಿ: ಇನ್ನು ಅಕ್ಷಯ್‌ ನಿನ್ನನ್ನೇ ಮದುವೆ ಆಗುತ್ತೇನೆ ಎಂದು ಹೇಳಿದ್ದರಿಂದ ಯುವತಿ ಆತನನ್ನು ಮನಸಾರೆ ಪ್ರೀತಿ ಮಾಡುತ್ತಿದ್ದನು. ಇನ್ನು ಕುಟುಂಬ ಪೋಷಣೆಯೊಂದಿಗೆ ಕೆಲಸ ಮಾಡಿಕೊಂಡಿದ್ದ ವಿದ್ಯಾಶ್ರಿ ಬಳಿ ಅಕ್ಷಯ್ ಆಗಾಗ ಖರ್ಚಿಗಾಗಿ ಹಣ ಪಡೆದುಕೊಂಡಿದ್ದನು. ಮೂರು ವರ್ಷ ಪ್ರೀತಿ ಮಾಡಿದ್ದೇವೆ, ಇನ್ನೆಷ್ಟು ದಿನ ಕಾಯಬೇಕು ಮದುವೆ ಮಾಡಿಕೊಳ್ಳುವಂತೆ ಯುವತಿ ಒತ್ತಾಯ ಮಾಡಿದ್ದಾಳೆ. ಆಗ, ನಾನು ಜೀವನದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಸೆಟಲ್‌ ಆಗಬೇಕು ಎರಡು ವರ್ಷ ನೀನು ಕಾಯಬೇಕು ಎಂದು ಹೇಳಿದ್ದಾನೆ. ಇನ್ನು ಯುವಕನು ಸೆಟಲ್‌ ಆಗುವ ಬಗ್ಗೆ ವಿಚಾರಿಸುತ್ತಾ ಮನೆಯಲ್ಲಿ ಮದುವೆಗೆ ಒತ್ತಾಯ ಮಾಡುತ್ತಿದ್ದ ಬಗ್ಗೆ ಯುವತಿ ಹೇಳಿಕೊಂಡಿದ್ದಾಳೆ. ಆಗ, ಯುವಕ ತನ್ನ ವರಸೆಯನ್ನೇ ಬದಲಿಸಿ ನಿನ್ನನ್ನು ಮದುವೆ ಆಗೋದಿಲ್ಲ ಎಂದು ಹೇಳಿದ್ದಾನೆ.

ಮೂರು ವರ್ಷಗಳಿಂದ ಮದುವೆ ಆಗುವುದಾಗಿ ಹೇಳಿ ಈಗ ಏಕಾಏಕಿ ಮದುವೆ ಆಗೋದಿಲ್ಲ ಎಂದಾಕ್ಷಣ ಯುವತಿಗೆ ಬರಸಿಡಿಲು ಬಡಿದಂತಾಗಿದೆ. ಇನ್ನು ಮನಸ್ಸು ಒಬ್ಬನಿಗೆ ಕೊಟ್ಟು, ಮದುವೆ ಇನ್ನೊಬ್ಬರ ಜೊತೆ ಮಾಡಿಕೊಳ್ಳುವುದು ಸಾಧ್ಯವಿಲ್ಲವೆಂದು ಯುವತಿ ಅಕ್ಷಯ್‌ನಿಗೆ ನೀನೇ ಮದುವೆ ಆಗುವಂತೆ ಗೋಗರೆದಿದ್ದಾಳೆ. ಇದಕ್ಕೆ ಯುವಕ ಒಪ್ಪದೇ ಯುವತಿಯ ಸಂಪರ್ಕದಿಂದ ದೂರ ಉಳಿಯಲು ಪ್ರಯತ್ನಿಸಿದ್ದಾನೆ. ನಾನು ಫೇಸ್‌ಬುಕ್‌ನಲ್ಲಿ ಪರಿಚಿತನಾದ ಗೆಳೆಯನಿಂದ ಮೋಸ ಹೋದೆನೆಂದು ಯುವತಿ ವಿದ್ಯಾಶ್ರೀ ಮನನೊಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸರು 306 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ಅಕ್ಷಯ್‌ನನ್ನ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಹುಡ್ಗೀರ ವಿಡಿಯೋ: 3 ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌

ಡೆತ್ ನೋಟ್​ನಲ್ಲೇನಿದೆ?: 
"ನನ್ನಸಾವಿಗೆ ಅಕ್ಷಯ್​ ಕಾರಣ ಅವನು ನನ್ನ ನಾಯಿತರ ಟ್ರೀಟ್​ ಮಾಡುತ್ತಾ ಇದ್ದಾನೆ. ನನಗೆ ಕೊಡಬೇಕಾದ 1 ಲಕ್ಷದ 76 ಸಾವಿರ ದುಡ್ಡು ಕೇಳಿದ್ದಾರೆ. ನನಗೆ ನನ್ನ ಪ್ಯಾಮಿಲಿಗೆ ಕೆಟ್ಟ ಕೆಟ್ಟ ಮಾತಲ್ಲಿ ಬೈದು ಪೋನ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದಾನೆ. ನನ್ನ ಡಿಪ್ರೆಷನ್​ಗೆ ಅಡಿಕ್ಟ್​ ಮಾಡಿದ್ದಾನೆ. ಹೀಗಾಗಿ ನನಗೆ ಬದುಕಲು ಆಗುತ್ತಿಲ್ಲ. ಡೇ ಬೈ ಡೇ ನನಗೆ ತುಂಬಾ ಸ್ಟೇನ್ ಆಗುತ್ತಿದೆ. ಅಮ್ಮ, ಗುರು, ಮನು I am Sorry ದಯವಿಟ್ಟು ನನ್ನ ಕ್ಷಮಿಸಿ. ಎಲ್ಲಾ ಹುಡುಗಿಯರಲ್ಲಿ ವಿನಂತಿ ದಯವಿಟ್ಟು ಯಾರು ಲವ್​ ಮಾಡಬೇಡಿ. Good bye this World" ಎಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.