ಕುಳಿತಿದ್ದ ಬೀದಿ ನಾಯಿ ಮೇಲೆ ಉದ್ದೇಶಪೂರ್ವಕವಾಗಿ 2 ಬಾರಿ ಕಾರು ಹತ್ತಿಸಿದ ಭೀಕರ ದೃಶ್ಯ ಸೆರೆ!
ಬೀದಿ ನಾಯಿ ತನ್ನ ಪಾಡಿಗೆ ತಾನು ಕುಳಿತಿತ್ತು. ಆದರೆ ಕಿರಾತಕನೊಬ್ಬ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವೇಳೆ ಅಲ್ಲಿದ್ದ ಹಲವರು ನೋಡುತ್ತಾ ನಿಂತರೆ ಹೊರತು ಚಾಲಕನ ಹಿಡಿಯುವ ಅಥವಾ ಪ್ರತಿರೋಧಿಸುವ ಕೆಲಸವನ್ನೂ ಮಾಡಲಿಲ್ಲ.

ಘಾಜಿಯಾಬಾದ್(ಅ.27) ಪ್ರಾಣಿಗಳಿಗೆ ಹಿಂಸೆ ಮಾಡುವುದು ಅಪರಾಧವಾಗಿದೆ. ಇತ್ತೀಗೆ ಸಾಕು ಪ್ರಾಣಿಗಳು, ಬೀದಿ ನಾಯಿಗೆ ಚಿತ್ರ ಹಿಂಸೆ ನೀಡಿ ಪೇಚಿಗೆ ಸಿಲುಕಿದ ಹಲವು ಘಟನೆಗಳಿವೆ. ಇದೀಗ ಘಾಜಿಯಾಬಾದ್‌ನಲ್ಲಿ ಬೀದಿ ನಾಯಿ ಮೇಲೆ ಎರಡೆರಡು ಬಾರಿ ಕಾರು ಹತ್ತಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
M4U ಸಿನಿಮಾ ಹಾಲ್ ಬಳಿ ತನ್ನ ಪಾಡಿಗೆ ತಾನು ಕುಳಿತಿದ್ದ ಬೀದಿ ನಾಯಿ ಮೇಲೆ ಚಾಲಕ ಉದ್ದೇಶಪೂರ್ವಕವಾಗಿ ಕಾರು ಹತ್ತಿಸಲಾಗಿದೆ. ಇಷ್ಟೇ ಅಲ್ಲ ಮುಂದೆ ಸಾಗಿದ ಕಾರು ಮತ್ತೆ ರಿವರ್ಸ್ ಬಂದು ಮತ್ತೊಂದು ಬಾರಿ ನಾಯಿ ಮೇಲೆ ಕಾರು ಹತ್ತಿಸಿ ಭೀಕರವಾಗಿ ನಾಯಿಯನ್ನು ಕೊಲ್ಲಲಾಗಿದೆ. ಈ ಘಟನೆ ನಡೆಯುವ ವೇಳೆ ಹಲವು ಇದೇ ರಸ್ತೆಯಲ್ಲಿದ್ದರು. ವಾಹನಗಳು ಓಡಾಡುತ್ತಿತ್ತು. ಆದರೆ ಯಾರೂ ಕೂಡ ಈ ಕ್ರೂರಿಯ ನಡೆಯನ್ನು ಪ್ರತಿರೋಧಿಸುವ ಗೋಜಿಗೂ ಹೋಗಿಲ್ಲ.
ಜಗತ್ತಿನ ಅತ್ಯಂತ ಹಿರಿಯ ಶ್ವಾನ ಬೋಬಿ ಇನ್ನಿಲ್ಲ: ಹಳ್ಳಿಯಲ್ಲಿ ಆರಾಮಾಗಿ ಜೀವನ ನಡೆಸ್ತಿದ್ದ ಇದರ ವಯಸ್ಸೆಷ್ಟು ನೋಡಿ..
ಈ ಭೀಕರ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ ವ್ಯಕ್ತವಾಗುತ್ತಿದೆ. ಇದೇ ರೀತಿ ಹಲವು ಘಟನೆಗಳು ನಡೆದಿದೆ. ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತ ಆನಂದ್ ಪಡೆದ ಹಲವರ ಪೈಕಿ ಕೆಲವೇ ಕೆಲವು ಮಂದಿಗೆ ಶಿಕ್ಷೆಯಾಗಿದೆ. ಬಹತೇಕ ಘಟನೆಗಳು ಬೆಳಕಿಗೆ ಬಂದಿಲ್ಲ. ಇನ್ನು ಬೆಳಕಿಗೆ ಬಂದ ಹಲವು ಪ್ರಕರಣಗಳು ಹಲವು ತಿರುವುಗಳನ್ನು ಪಡೆದು ಕೊನೆಗೆ ಆರೋಪಿ ದೋಷ ಮುಕ್ತಗೊಂಡ ಉದಾಹರಣೆಗಳೂ ಇವೆ.
ಇದೇ ರೀತಿಯ ಘಟನೆ ಈ ವರ್ಷದ ಆರಂಭದಲ್ಲೇ ಬೆಂಗಳೂರಿನಲ್ಲಿ ನಡೆದಿತ್ತು. ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಸಾವಿಗೆ ಕಾರಣನಾದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನ ಮೇಲೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜ್ಞಾನಭಾರತಿಯ ಸಪ್ತಗಿರಿ ಲೇಔಟ್‌ನಲ್ಲಿ ಸುಬ್ರಹ್ಮಣ್ಯ ಎಂಬಾತ ಈ ಕೃತ್ಯ ಎಸಗಿದ್ದ. ರಸ್ತೆ ಬದಿ ನಿಂತಿದ್ದ ನಾಯಿಗೆ ಕಾರು ಗುದ್ದಿಸಿ ಆರೋಪಿ ಹತ್ಯೆ ಮಾಡಿ ವಿಕೃತ ಮೆರೆದಿದ್ದಾನೆ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಆಧರಿಸಿ ಕಾರಿನ ಮಾಲಿಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ರೀತಿ ಘಟನೆ ಕಳೆದ ವರ್ಷ ಜಯನಗರ ಸೇರಿದಂತೆ ಎರಡು ಕಡೆ ವರದಿಯಾಗಿದ್ದವು.
ಪುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕಿಳಿದು ಬಾಲ್ ಹೊತ್ತೊಯ್ದ ಶ್ವಾನ: ವೈರಲ್ ವೀಡಿಯೋ
ಜಯನಗರ 9ನೇ ಬ್ಲಾಕ್‌ನ 28ನೇ ಮುಖ್ಯರಸ್ತೆಯ 39ನೇ ಅಡ್ಡರಸ್ತೆಯ ಮಿಲ್‌್ಕ ಬೂತ್ ಬಳಿ ಮೇ 27ರಂದು ಬೆಳಗ್ಗೆ 10.45ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತ ‘ಕರಿಯ’ ಹೆಸರಿನ ಸಾಕು ನಾಯಿ ಮಾಲಿಕ 9ನೇ ಬ್ಲಾಕ್ ನಿವಾಸಿ ಸಿ.ಎ.ಚನ್ನಕೇಶವ ಎಂಬುವವರು ನೀಡಿದ ದೂರಿನ ಮೇರೆಗೆ ತಿಲಕ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ನಾಯಿ ಮೇಲೆ ಕಾರು ಹತ್ತಿಸಿ ಸಾಯಿಸಿ ಪರಾರಿಯಾಗಿದ್ದ.