Asianet Suvarna News Asianet Suvarna News

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ನಮ್ಮ ಮನೆ ಮುಂದೆ ಯಾಕೆ ಬರ್ತೀರಾ?, ಮಾಧ್ಯಮಗಳ ಮೇಲೆ ಸಿಟ್ಟಾದ ಎಚ್‌ಡಿಕೆ..!

ನಮ್ಮ ಮನೆ ಬಳಿ ಯಾಕೆ ಬಂದಿದ್ದೀರಾ?. ಅಲ್ಲೂ ಬರ್ತೀರಾ ಇಲ್ಲಿ ಪದೇ ಪದೇ ಬರ್ತೀರಾ?. ಏನ್ ಕೆಲಸ ನಿಮಗೆ. ಇಲ್ಲಿ ಯಾಕೆ ಬರ್ತೀರಾ?. ಏನ್ ಕೆಲಸ ನಿಮಗೆ. ಬೆಳಗ್ಗೆ ಮನೆ ಹತ್ರ ಬರ್ತೀರಾ‌. ಈಗ ಇಲ್ಲಿ ಬರ್ತೀರಾ. ನಿಮಗೆ ಸುದ್ದಿ ಬೇಕು ಅಲ್ಲವಾ. ಸುದ್ದಿ ಬೇರೆ ಅವರು ಕೊಡ್ತಿದ್ದಾರೆ ಅಲ್ಲವಾ ಅವರ ಬಳಿ ಹೋಗಿ ಎಂದು ಮಾಧ್ಯಮಗಳ ಮೇಲೆ ಅಸಮಾಧಾನ ಹೊರ ಹಾಕಿದ ಕುಮಾರಸ್ವಾಮಿ 

Former CM HD Kumaraswamy Angry On Media grg
Author
First Published May 1, 2024, 9:59 PM IST

ಬೆಂಗಳೂರು(ಮೇ.01):  ಯಾಕೆ ಇಲ್ಲಿ ಬಂದಿದ್ದೀರಾ?, ನಿನ್ನೆಯಿಂದ ನೋಡ್ತಾ ಇದ್ದೀನಿ. ನಮ್ಮ ಮನೆ ಮುಂದೆ ಸಹ ಕ್ಯಾಮರಾ ಹಾಕಿದ್ದೀರಾ, ಇಲ್ಲೂ ಕ್ಯಾಮರಾ ಹಾಕಿದ್ದೀರಿ. ಯಾಕೆ ನಮ್ಮ ಮನೆ ಮುಂದೆ ಬಂದಿದ್ದೀರಾ?. ಏನಕ್ಕೆ ಹೀಗೆ ಮಾಡ್ತೀರಿ ಎಂದು ಮಾಧ್ಯಮಗಳ ಮೇಲೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಿಟ್ಟಾಗಿದ್ದಾರೆ.  

ನಮ್ಮ ಮನೆ ಬಳಿ ಯಾಕೆ ಬಂದಿದ್ದೀರಾ?. ಅಲ್ಲೂ ಬರ್ತೀರಾ ಇಲ್ಲಿ ಪದೇ ಪದೇ ಬರ್ತೀರಾ?. ಏನ್ ಕೆಲಸ ನಿಮಗೆ. ಇಲ್ಲಿ ಯಾಕೆ ಬರ್ತೀರಾ?. ಏನ್ ಕೆಲಸ ನಿಮಗೆ. ಬೆಳಗ್ಗೆ ಮನೆ ಹತ್ರ ಬರ್ತೀರಾ‌. ಈಗ ಇಲ್ಲಿ ಬರ್ತೀರಾ. ನಿಮಗೆ ಸುದ್ದಿ ಬೇಕು ಅಲ್ಲವಾ. ಸುದ್ದಿ ಬೇರೆ ಅವರು ಕೊಡ್ತಿದ್ದಾರೆ ಅಲ್ಲವಾ ಅವರ ಬಳಿ ಹೋಗಿ ಎಂದು ಮಾಧ್ಯಮಗಳ ಮೇಲೆ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ. 

ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ; ಎಸ್‌ಐಟಿ ವಿಚಾರಣೆಗೆ ಕರೆದರೆ ಆತ್ಮಹತ್ಯೆ ಮಾಡಿಕೊಳ್ತೀವಿ ಎಂದ ಸಂತ್ರಸ್ತೆಯರು

ಸಂಪೂರ್ಣವಾಗಿ ನಿನ್ನೆ ಒಂದು ಗಂಟೆ ಹೇಳಿದ್ದೇನೆ. ಮತ್ತೆ ಯಾಕೆ ಬರ್ತೀರಾ‌. ಸುದ್ದಿ ಬಿಡೋರು ಯಾರು ಇದ್ದಾರೆ ಅವರ ಬಳಿ ಹೋಗಿ. ನಿನ್ನೆ ಡ್ರೈವರ್ ಕಾರ್ತಿಕ್ ವಿಡಿಯೋ ಬಿಡುಗಡೆ ಆಗಿದೆ. ವಿಡಿಯೋ ರಿಲೀಸ್ ಯಾರ್ ಮಾಡಿದ್ರು. ವಿಡಿಯೋ ಎಲ್ಲಿಂದ ಮಾಡಿದ್ರು. ಯಾರು ಮಾಡಿದ್ರು. ಅವನು ಏನ್ ಹೇಳಿಕೆ ಕೊಟ್ಟ. ದೇವರಾಜೇಗೌಡನ ಕೈಯಲ್ಲಿ ನಾನು ಕೊಟ್ಟಿದ್ದೆ ಅಂದ. ಇವತ್ತು ಬೆಳಗ್ಗೆ ಚಿಲ್ಲರೆ ಅಣ್ಣ ತಮ್ಮಂದಿರು ಮಹಾನ್ ಅವರು. ದೇವರಾಜೇಗೌಡ ಕುಮಾರಸ್ವಾಮಿಗೆ ಕೊಟ್ಡಿದ್ದಾರೆ ಅಂತ ಹೇಳಿದ್ದಾರೆ. ಕುಮಾರಸ್ವಾಮಿ ಬಿಟ್ಟಿರೋದು ಅಂತ 420ಗಳು ಹೇಳಿದ್ದಾರೆ.. ಕಾರ್ತಿಕ್ ಈಗ ಎಲ್ಲಿ ಇದ್ದಾನೆ. ಅವನಿಂದ ವಿಡಿಯೋ ಮಾಡಿಸಿದ್ದು ಯಾರು. ಕಾರ್ತಿಕ್ ಮಲೆಷ್ಯಾದಲ್ಲಿ ಇದ್ದಾನೆ. ಅವನನ್ನ ಮಲೆಷ್ಯಾಕ್ಕೆ ಕಳಿಸಿದ್ದು ಯಾರು‌?. ತರಾತುರಿಯಲ್ಲಿ ಯಾಕೆ ವಿಡಿಯೋ ‌ಬಿಟ್ಟರು?. ನಮ್ಮನ್ನ ಕೆಣಕಿದ್ದಾರೆ. ನನ್ನನ್ನ ಕೆಣಕಿದರೆ ಅಷ್ಟು‌ ಸುಲಭ ಅಲ್ಲ. ಏನ್ ಮಾಡಬೇಕು ಅಂತ ನನಗೆ ಗೊತ್ತಿದೆ. ಮೊದಲು ಕಾರ್ತಿಕ್ ಎಲ್ಲಿ ಇದ್ದಾನೆ ಅಂತ ಹುಡುಕಿಕೊಳ್ಳಿ ಕುಮಾರಸ್ವಾಮಿ ಹೇಳಿದ್ದಾರೆ. 

ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಕೇಸ್‌ ಇದೀಗ ರಾಷ್ಟ್ರಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಹೀಗಾಗಿ ಈ ಕೇಸಿನಿಂದ ದೇವೇಗೌಡರ ಕುಟುಂಬಕ್ಕೆ ಭಾರೀ ಮುಜುಗರವಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರು ಮಾಧ್ಯಮದವರ ಮೇಲೆ ಸಿಟ್ಟಾಗಿದ್ದಾರೆ. 

Latest Videos
Follow Us:
Download App:
  • android
  • ios