ಈ ಶ್ವಾನ ಪೋರ್ಚುಗಲ್‌ನಲ್ಲಿರುವ ಮನೆಯಲ್ಲಿ ಶನಿವಾರ ನಿಧನರಾಗಿದೆ. ಗಿನ್ನೆಸ್‌ ವಿಶ್ವ ದಾಖಲೆಯನ್ನೂ ಹೊಂದಿದೆ. 

ನವದೆಹಲಿ (ಅಕ್ಟೋಬರ್ 24, 2023): ಜಗತ್ತಿನ ಅತ್ಯಂತ ಹಿರಿಯ ನಾಯಿ ಮೃತಪಟ್ಟಿದೆ. ಮೇ 11, 1992 ರಂದು ಜನಿಸಿದ ಬೋಬಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ (ಜಿಡಬ್ಲ್ಯೂಆರ್) ನಿಂದ ಫೆಬ್ರವರಿಯಲ್ಲಿ ಅತ್ಯಂತ ಹಿರಿಯ ಶ್ವಾನ ಎಂದು ಗುರುತಿಸಲ್ಪಟ್ಟಿತ್ತು. 31 ವರ್ಷ ಮತ್ತು 165 ದಿನಗಳಾದ ಬಳಿಕ ಈ ನಾಯಿ ಸಾವಿಗೀಡಾಗಿದೆ.

ಈ ಶ್ವಾನ ಪೋರ್ಚುಗಲ್‌ನಲ್ಲಿರುವ ಮನೆಯಲ್ಲಿ ಶನಿವಾರ ನಿಧನರಾಗಿದೆ. ಕೋಸ್ಟಾ ಕುಟುಂಬದೊಂದಿಗೆ ಈ ನಾಯಿ ತನ್ನ ಸಂಪೂರ್ಣ ಜೀವನವನ್ನು ನಡೆಸಿದೆ. ಬೋಬಿಯನ್ನು ಹಲವಾರು ಬಾರಿ ಭೇಟಿಯಾದ ಪಶುವೈದ್ಯ ಡಾ. ಕರೆನ್ ಬೆಕರ್ ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ನಾಯಿಯ ಮರಣದ ಸುದ್ದಿಯನ್ನು ದೃಢಪಡಿಸಿದ್ದಾರೆ. "ಕಳೆದ ರಾತ್ರಿ, ಈ ಸಿಹಿ ಹುಡುಗ ತನ್ನ ರೆಕ್ಕೆಗಳನ್ನು ಗಳಿಸಿದ್ದಾನೆ" ಎಂದು ಸಂತಾಪ ಸೂಚಿಸಿರುವ ಫೋಟೋ ಜತೆಗೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 

ಇದನ್ನು ಓದಿ: 19 ವರ್ಷಕ್ಕೆ ಸಿಎ ಟಾಪರ್ ಆದ ನಂದಿನಿ: ಗಿನ್ನೆಸ್‌ ವಿಶ್ವ ದಾಖಲೆಯ ಒಡತಿ

"ಇತಿಹಾಸದಲ್ಲಿ ಪ್ರತಿ ನಾಯಿಯನ್ನು ಮೀರಿಸಿದ್ದರೂ, ಅವನನ್ನು ಪ್ರೀತಿಸುವವರಿಗೆ ಭೂಮಿಯ ಮೇಲಿನ ಅವನ 11,478 ದಿನಗಳು ಎಂದಿಗೂ ಸಾಕಾಗುವುದಿಲ್ಲ" ಎಂದು ಡಾ. ಕರೆನ್ ಬೆಕರ್ ಬರೆದಿದ್ದಾರೆ. "ಗಾಡ್‌ಸ್ಪೀಡ್, ಬಾಬಿ... ನೀನು ಕಲಿಸಲು ಉದ್ದೇಶಿಸಿರುವ ಎಲ್ಲವನ್ನೂ ನೀನು ಜಗತ್ತಿಗೆ ಕಲಿಸಿದ್ದೀಯ’’ ಎಂದೂ ಬರೆದುಕೊಂಡಿದ್ದಾರೆ.

ಫೆಬ್ರವರಿಯಲ್ಲಿ, ಬೋಬಿ ವಿಶ್ವದ ಅತ್ಯಂತ ಹಿರಿಯ ನಾಯಿ ಎಂಬ ಗಿನ್ನೆಸ್‌ ದಾಖಲೆಗೆ ಪಾತ್ರವಾಗಿತ್ತು. 1939 ರಲ್ಲಿ 29 ವರ್ಷ ಮತ್ತು ಐದು ತಿಂಗಳುಗಳಲ್ಲಿ ನಿಧನರಾದ ಆಸ್ಟ್ರೇಲಿಯಾದ ಜಾನುವಾರು ಬ್ಲೂಯ್ ದಾಖಲೆಯನ್ನು ಬೋಬಿ ಮುರಿದಿತ್ತು. ಬೋಬಿಯ ವಯಸ್ಸನ್ನು ಪೋರ್ಚುಗೀಸ್ ಸರ್ಕಾರದ ಸಾಕುಪ್ರಾಣಿ ಡೇಟಾಬೇಸ್ ಮೌಲ್ಯೀಕರಿಸಿತ್ತು. ಇದನ್ನು ಪಶುವೈದ್ಯರ ರಾಷ್ಟ್ರೀಯ ಒಕ್ಕೂಟವು ನಿರ್ವಹಿಸುತ್ತದೆ ಎಂದು ಬಿಬಿಸಿ ವರದಿ ಮಾಡಿತ್ತು.

ಇದನ್ನೂ ಓದಿ: ಅಬ್ಬಬ್ಬಾ.. ದುಬೈ ಶೇಖ್‌ನ ಈ 46 ಅಡಿ ಎತ್ತರದ ಹಮ್ಮರ್ ನೋಡಿ: ಇದ್ರ ಮುಂದೆ ಇತರ ವಾಹನಗಳು ಕುಬ್ಜವಾಗೇ ಕಾಣ್ಸುತ್ತೆ!

ಬೋಬಿ ತನ್ನ ಸಂಪೂರ್ಣ ಜೀವನವನ್ನು ಪೋರ್ಚುಗಲ್‌ನ ಹಳ್ಳಿಯಾದ ಕಾಂಕ್ವಿರೋಸ್‌ನಲ್ಲಿ ಲಿಯೋನೆಲ್ ಕೋಸ್ಟಾ ಮತ್ತು ಅವರ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಮೂವರು ಇತರೆ ಮರಿಗಳೊಂದಿಗೆ ಔಟ್‌ಹೌಸ್‌ನಲ್ಲಿ ಜನಿಸಿತ್ತು. ಇನ್ನು, ಅವರ ಕುಟುಂಬವು ಹಲವಾರು ಪ್ರಾಣಿಗಳನ್ನು ಹೊಂದಿದ್ದರಿಂದ ಬೋಬಿ ಸೇರಿ 4 ಮರಿಗಳನ್ನು ಬೇರೆಯವರಿಗೆ ನೀಡಲಾಗಿತ್ತು. ಆದರೂ, ಬೋಬಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದು ಅದೇ ಹಳ್ಳಿಯ ಮನೆಯಲ್ಲಿ ವಾಸಿಸುತ್ತಿತ್ತು ಎಂದು ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್ಸ್‌ ಮಾಹಿತಿ ನೀಡಿದೆ. ಈ ಶ್ವಾನ ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದೆ ಎಂದೂ ತಿಳಿಸಿದ್ದಾರೆ. 

ಬೋಬಿ ಜನಿಸಿದ್ದಾಗ ಕೋಸ್ಟಾ ಅವರಿಗೆ ಕೇವಲ 8 ವರ್ಷವಾಗಿತ್ತಂತೆ. "ನಗರಗಳಿಂದ ದೂರದಲ್ಲಿ ಶಾಂತಿಯುತ ವಾತಾವರಣದಲ್ಲಿ’’ ವಾಸಿಸುತ್ತಿದ್ದ ಕಾರಣ ಇದು ದೀರ್ಘ ಕಾಲ ಬದುಕಿತ್ತು ಎಂದಿದ್ದಾರೆ. ನಾಯಿ ಯಾವಾಗಲೂ "ನಾವು ತಿನ್ನುವುದನ್ನು" ತಿನ್ನುತ್ತಿತ್ತು ಮತ್ತು ಅದಕ್ಕೆ ಎಂದಿಗೂ ಚೈನ್‌ ಹಾಕಿರಲಿಲ್ಲ ಅಥವಾ ಕೂಡಿ ಹಾಕಿರಲಿಲ್ಲ ಎಂದೂ ಅವರು ಹೇಳಿದ್ದಾರೆ.

ಉಸಿರಾಟದ ತೊಂದರೆಯಿಂದಾಗಿ ಇದ್ದಕ್ಕಿದ್ದಂತೆ ಕುಸಿದುಬಿದ್ದ ನಂತರ 2018 ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹೊರತಾಗಿ, ಬೋಬಿ ತೊಂದರೆ-ಮುಕ್ತ ಜೀವನವನ್ನು ಆನಂದಿಸಿದೆ ಎಂದೂ ಶ್ವಾನದ ಮಾಲೀಕ ಕೋಸ್ಟಾ ಹೇಳಿದರು. ಆದರೆ ವಯಸ್ಸು ಹೆಚ್ಚಾದಂತೆ ಚಲನಶೀಲತೆ ಕಡಿಮೆಯಾಗಿತ್ತು. ಅದರ ಮರಣದ ಮೊದಲು ನಡೆಯಲು ತೊಂದರೆ ಮತ್ತು ದೃಷ್ಟಿ ಹದಗೆಟ್ಟಿತ್ತು ಎಂದೂ ಅವರು ತಿಳಿಸಿದ್ದಾರೆ.