ಇಬ್ಬರು ಗೆಳೆಯರು ಕಂಠಪೂರ್ತಿ ಕುಡಿದಿದ್ದಾರೆ. ಕುಡಿಯುವ ವೇಳೆ ಗೆಳೆಯನ ಕತ್ತನ್ನು ಕಚ್ಚಿ ರಕ್ತ ಕುಡಿಯುವ ಬಯಕೆಯಾಗಿದೆ. ವಿಚಿತ್ರ ಬಯಕೆಗಾಗಿ ಗೆಳೆಯನ ಕತ್ತನ್ನೇ ಕಚ್ಚಿ ರಕ್ತ ಹೀರಲು ಆರಂಭಿಸಿದ್ದಾನೆ. ಗೆಳೆಯನ ದೂರ ತಳ್ಳಿ ವಾಗ್ವಾದ ನಡಸಿ ಮನೆಗೆ ಮರಳಿದ್ದಾರೆ. ಆದರೆ ಕೆಲ ಹೊತ್ತಲ್ಲೇ ಇದೇ ರಕ್ತದ ಕಾರಣಕ್ಕೆ ಕೊಲೆ ನಡೆದಿದೆ.
ಪುಣೆ(ಆ.05) ಚಿತ್ರ ವಿಚಿತ್ರ ಬಯಕೆಗಳು, ದಾಖಲೆಗಳು ಇತ್ತೀಚೆಗೆ ಸಮಾನ್ಯವಾಗಿದೆ. ಅದರಲ್ಲೂ ಎಣ್ಣೆ ಎಟಿನಲ್ಲಿ ಬಯಕೆಗಳಿಗೆ ಅರ್ಥವೇ ಇರಲ್ಲ. ಕೊನೆಗೆ ಅಪಾಯವನ್ನು ತಂದೊಡ್ಡುತ್ತದೆ. ಗೆಳೆಯರಿಬ್ಬರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಕುಡಿಯುತ್ತಾ ಒಬ್ಬನಿಗೆ ಗೆಳೆಯನ ರಕ್ತ ಕುಡಿಯಬೇಕು ಅನ್ನೋ ಬಯಕೆಯಾಗಿದೆ. ಎದುರಿಗಿದ್ದ ಗೆಳೆಯನ ಕತ್ತುನ್ನು ಬಲವಾಗಿ ಕಚ್ಚಿದ್ದಾನೆ. ಬಳಿಕ ರಕ್ತ ಹೀರಲು ಮುಂದಾಗಿದ್ದಾರೆ. ನೋವು ಹಾಗೂ ಆತಂಕಗೊಂಡು, ಗೆಳೆಯನನ್ನು ದೂರಕ್ಕೆ ತಳ್ಳಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೆಲ ಹೊತ್ತಿನ ವಾಗ್ವಾದ ಬಳಿಕ ಇಬ್ಬರು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಆದರೆ ಮರಳಿ ಬಂದು ಕತ್ತು ಕಚ್ಚಿದ ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಪಿಂಪಿರಿ ಚಿಂಚಿವಾಡ್ ಜಿಲ್ಲೆಯಲ್ಲಿ ನಡೆದಿದೆ.
ರಾಹುಲ್ ಲೊಹರ್, ಇಶ್ತಿಯಾಕ್ ಖಾನ್ ಹಾಗೂ ಇತರ ಕೆಲ ಗೆಳೆಯರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಾರ್‌ಗೆ ತೆರಳಿ ಪಾರ್ಟಿ ಮಾಡಿದ ಗೆಳೆಯರು ಕಂಠಪೂರ್ತಿ ಕುಡಿದಿದ್ದಾರೆ.ನಶೆ ಹೆಚ್ಚಾಗುತ್ತಿದ್ದಂತೆ ಇಶ್ತಿಯಾಕ್ ಖಾನ್‌ಗೆ ಗೆಳೆಯ ರಾಹುಲ್ ಲೋಹರ್ ರಕ್ತ ಕುಡಿಯುವ ಆಸೆಯಾಗಿದೆ. ಒಂದೊಂದೆ ಪೆಗ್ ಏರಿಸುತ್ತಲೇ ತನ್ನ ಬಯಕೆಯನ್ನು ಗೆಳೆಯರ ಮುಂದಿಟ್ಟಿದ್ದಾನೆ. ಇಶ್ತಿಯಾಕ್ ಖಾನ್ ಮಾತು ಕೇಳಿ ಇತರ ಗೆಳೆಯರೆಲ್ಲಾ ನಕ್ಕು ಸುಮ್ಮನಾಗಿದ್ದಾರೆ.
ಜೈಲಿನಿಂದ ಬಿಡುಗಡೆಯಾಗ್ತಿದ್ದಂತೆ ರೌಡಿಶೀಟರ್ ಮರ್ಡರ್: ಸಿದ್ದಾಪುರ ಮಹೇಶ್‌ನನ್ನು ಕೊಚ್ಚಿ ಕೊಂದ ಹಂತಕರು
ಇಶ್ತಿಯಾಕ್ ಖಾನ್ ಹೇಳಿದ್ದ ತನ್ನ ಬಯಕೆಯಾಗಿತ್ತು. ಕಾಮಾಡಿ ಆಗಿರಲಿಲ್ಲ. ಕಾರಣ ಗೆಳೆಯರ ನಗು ಮುಗಿಸುವುದರೊಳಗೆ ರಾಹುಲ್ ಲೋಹರ್ ಮೇಲೆ ಇಶ್ತಿಯಾಕ್ ದಾಳಿ ಮಾಡಿದ್ದ. ಕತ್ತಿನ ಭಾಗವನ್ನು ಹತ್ತಿ ರಕ್ತ ಹೀರಲು ಮುಂದಾಗಿದ್ದಾರೆ. ರಾಹುಲ್ ಲೋಹರ್ ಕತ್ತಿನ ಭಾಗಕ್ಕೆ ಕಚ್ಚಿದ ಇಶ್ತಿಯಾಕ್ ರಕ್ತ ಹೀರುವ ಪ್ರಯತ್ನ ಮಾಡಿದ್ದಾರೆ. ಗಾಬರಿಗೊಂಡ ರಾಹುಲ್ ಲೋಹರ್, ಗೆಳೆಯ ಇಶ್ತಿಯಾಕ್ ಖಾನ್‌ನನ್ನು ಪಕಕ್ಕೆ ತಳ್ಳಿದ್ದಾನೆ.
ಇದೇ ವೇಳೆ ಇತರ ಗೆಳೆಯರು ಇಶ್ತಿಯಾಕ್ ಹಿಡಿದಿದ್ದಾರೆ. ಬಳಿಕ ವಾಗ್ವಾದ ನಡೆದಿದೆ. ಇಬ್ಬರು ಇದೇ ವಿಚಾದಲ್ಲಿ ಜಗಳವಾಡಿದ್ದಾರೆ. ಇತರ ಗೆಳೆಯರು ರಾಹುಲ್ ಹಾಗೂ ಇಶ್ತಿಯಾಕ್ ಸಮಾಧಾನ ಮಾಡಿದ್ದಾರೆ. ಬಳಿಕ ಪಾರ್ಟಿ ಅಂತ್ಯಗೊಳಿಸಿದ್ದಾರೆ. ಜಗಳದ ಕಾರಣ ಬಾರ್‌ನಲ್ಲಿದ್ದ ಇತರರು ಗರಂ ಗೊಂಡಿದ್ದಾರೆ. ತಕ್ಷಣವೇ ಎದ್ದು ಹೋಗುವಂತೆ ಸೂಚಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಪಾರ್ಟಿ ಅಂತ್ಯಗೊಳಿಸಿ ಎಲ್ಲರೂ ಮನೆಗೆ ತೆರಳಿದ್ದಾರೆ. ಇತ್ತ ರಾಹುಲ್ ಹಾಗೂ ಖಾನ್ ಇಬ್ಬರೂ ಮನೆಗೆ ತೆರಳಿದ್ದಾರೆ.
Bengaluru: ಕ್ರಶ್ ಹುಟ್ಟಿದ ದಿನಾಂಕ ಹೇಳದ್ದಕ್ಕೆ ಸೀನಿಯರ್ ಎಳೆದೊಯ್ದು ಹಲ್ಲೆ ಮಾಡಿಸಿದ ವಿದ್ಯಾರ್ಥಿನಿ!
ಫೋನ್‌ನಲ್ಲಿ ಅವಾಜ್ ಹಾಕಿದ ರಾಹುಲ್‌ಗೆ ಧೈರ್ಯ ಇದ್ದರೆ ಏರಿಯಾಗೆ ಬರುವಂತೆ ಇಶ್ತಿಯಾಕ್ ಖಾನ್ ಕೂಡ ಸವಾಲು ಹಾಕಿದ್ದಾನೆ. ಇದರಿಂದ ರಾಹುಲ್ ಪಿತ್ತ ನೆತ್ತಿಗೇರಿದೆ. ಕೆಲ ಹೊತ್ತಲ್ಲೇ ಮರಳಿದ ರಾಹುಲ್ ಲೋಹರ್, ಇಶ್ತಿಯಾಕ್ ಏರಿಯಾ ಕಡೆ ತೆರಳಿದ್ದಾನೆ. ಇಶ್ತಿಯಾಕ್ ಭೇಟಿಯಾದ ಕೂಡಲೇ ನಿನ್ಗೆ ನನ್ನ ರಕ್ತ ಬೇಕಾ?ಯಾವ ಧೈರ್ಯದಲ್ಲಿ ನನಗೆ ಕಚ್ಚಿದೆ. ನಾಯಿ ರೀತಿ ರಕ್ತ ಕುಡಿಯಲು ನನ್ನ ಮೇಲೆ ಸ್ಕೆಚ್ ಹಾಕುತ್ತಿಯಾ ಎಂದು ಗದರಿಸಿದ್ದಾನೆ. ಇತ್ತ ಇಶ್ತಿಯಾಕ್ ಕೂಡ ಮರು ಸವಾಲು ಹಾಕಿದ್ದಾನೆ. ನಿನ್ನನ್ನು ಜೀವಂತ ಉಳಿಸಲ್ಲ ಎಂದ ರಾಹುಲ್ ಲೋಹರ್ ಪಕ್ಕದಲ್ಲೇ ಇದ್ದ ಕಲ್ಲಿನಿಂದ ತಲೆಗೆ ಹೊಡೆದಿದ್ದಾನೆ.
ರಾಹುಲ್ ಒಂದೇ ಏಟಿಗೆ ಇಶ್ತಿಯಾಕ್ ಖಾನ್ ನೆಲಕ್ಕುರಳಿದ್ದಾನೆ. ಮತ್ತೊಂದೆರಡು ಎಟು ಹೋಡೆದ ರಾಹುಲ ಲೋಹರ್ ಸ್ಥಳದಿಂದ ತೆರಳಿದ್ದಾನೆ. ಇತ್ತ ನೆಲಕ್ಕುರಳಿದ ಇಶ್ತಿಯಾಕ್ ಖಾನ್ ಮತ್ತೆ ಎಳಲೇ ಇಲ್ಲ. ಆರೋಪಿ ರಾಹುಲ್ ಲೋಹರ್‌ನನ್ನು ಪೊಲೀಸರು ಬಂಧಿಸಿದ್ದಾರೆ
