Bengaluru: ಕ್ರಶ್ ಹುಟ್ಟಿದ ದಿನಾಂಕ ಹೇಳದ್ದಕ್ಕೆ ಸೀನಿಯರ್ ಎಳೆದೊಯ್ದು ಹಲ್ಲೆ ಮಾಡಿಸಿದ ವಿದ್ಯಾರ್ಥಿನಿ!
ಕಾಲೇಜ್ ವೆಲ್ ಕಮ್ ದಿನವೇ ಸೀನಿಯರ್ ಜೂನಿಯರ್ ಗಳ ಗಲಾಟೆ ನಡೆದಿರುವ ಘಟನೆ ಬೆಂಗಳೂರಿನ ಪ್ರೆಸಿಡೆನ್ಸಿ ಕಾಂಪೋಸೀಟ್ ಪಿಯು ಕಾಲೇಜು ಬಳಿ ನಡೆದಿದೆ.
ಬೆಂಗಳೂರು (ಆ.4): ಕಾಲೇಜ್ ವೆಲ್ ಕಮ್ ದಿನವೇ ಸೀನಿಯರ್ ಜೂನಿಯರ್ ಗಳ ಗಲಾಟೆ ನಡೆದಿರುವ ಘಟನೆ ಬೆಂಗಳೂರಿನ ಪ್ರೆಸಿಡೆನ್ಸಿ ಕಾಂಪೋಸೀಟ್ ಪಿಯು ಕಾಲೇಜು ಬಳಿ ನಡೆದಿದೆ. ಕ್ರಶ್ ಡೇಟ್ ಆಫ್ ಬರ್ತ್ ಹೇಳಿಲ್ಲ ಎಂದು ಸೀನಿಯರ್ ನನ್ನೇ ಎಳೆದೊಯ್ದು ವಿದ್ಯಾರ್ಥಿನಿ ಹಲ್ಲೆ ಮಾಡಿಸಿದ್ದಾಳೆ. ನಗರದ ಜೆಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕ್ರಶ್ ನ ಡೇಟ್ ಆಫ್ ಬರ್ತ್ ಹೇಳಿಲ್ಲ ಎಂದು ಅಣ್ಣ ಮತ್ತು ಗೆಳೆಯರಿಂದ ಸೀನಿಯರ್ ಮೇಲೆ ಹಲ್ಲೆ ನಡೆದಿದೆ. ಮೊಹಮ್ಮದ್ ಅಜೀಮ್ ಎಂಬಾತನನ್ನ ಕರೆದೊಯ್ದು ಹಲ್ಲೆ ಮಾಡಲಾಗಿದೆ.
Sowjanya Murder Case: ಧರ್ಮಸ್ಥಳ ಪರ ನಿಂತ ಸೌಜನ್ಯ ತಾಯಿ ಕುಸುಮಾವತಿ
ಅಜೀಮ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ, ಕಾಲೇಜು ವೆಲ್ ಕಮ್ ಡೇ ಇತ್ತು. ಹೊಸ ವಿದ್ಯಾರ್ಥಿಗಳಿಗೆ ವೆಲ್ ಕಮ್ ಡೇ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದೇ ಕಾಲೇಜಿಗೆ ಮೊಹಮ್ಮದ್ ಉಬೇದ್ ಉಲ್ಲಾ ಎಂಬ ಅಜೀಮ್ ಗೆಳೆಯ ಪ್ರಥಮ ಪಿಯುಸಿ ಸೇರಿದ್ದ. ವೆಲ್ ಕಮ್‌ಡೇ ಫಂಕ್ಷನ್ ನಲ್ಲಿ ಅಜೀಮ್ ಗೆಳೆಯ ಉಬೇದ್ ವಿದ್ಯಾರ್ಥಿನಿಯೊಬ್ಬಳಿಗೆ ಪರಿಚಯ ಮಾಡಿಕೊಂಡಿದ್ದಳು.
ಪರಿಚಯದ ವೇಳೆ ಅಜೀಮ್ ಬಳಿ ಉಬೇದ್ ಬರ್ತ್ ಡೇ ಡೇಟ್ ಕೇಳಿದ್ದಳು. ಆದ್ರೆ ನನಗೆ ಉಬೇದ್ ಡೇಟ್ ಆಫ್ ಬರ್ತ್ ಗೊತ್ತಿಲ್ಲ ಎಂದು ಅಜೀಮ್ ಹೇಳಿದ್ದಾನೆ. ಈ ವೇಳೆ ಡೇಟ್ ಆಫ್ ಬರ್ತ್ ಗೊತ್ತಿಲ್ವಾ ನಾನು ಯಾರು ಅಂತಾ ತೋರಿಸ್ತೀನಿ ಎಂದು ವಿದ್ಯಾರ್ಥಿನಿ ವಾರ್ನ್ ಮಾಡಿದ್ದಾಳೆ.
ಲಂಚಕ್ಕೆ ಕೈಯೊಡ್ಡಿ ಕೇರಳ ಪೊಲೀಸರಿಗೆ ಸಿಕ್ಕಿಬಿದ್ದ 4 ಮಂದಿ ಕರ್ನಾಟಕ ಪೊಲೀಸರು ಸಸ್ಪೆಂಡ್!
ಅಷ್ಟು ಮಾತ್ರವಲ್ಲ ಮರುದಿನ ತನ್ನ ಅಣ್ಣನ ಜೊತೆ ಸೇರಿ ಆರು ಜನರನ್ನ ಕಾಲೇಜಿಗೆ ಕರೆಸಿ ಅಜೀಮ್ ನನ್ನ ವಿದ್ಯಾರ್ಥಿನಿ ಎಳೆದೊಯ್ದಿದ್ದು, ವಿದ್ಯಾರ್ಥಿನಿ ಅಣ್ಣ ಮತ್ತು ಸ್ನೇಹಿತರು ಅಜೀಮ್ ಗೆ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಾಳು ಅಜೀಮ್ ಪಾಷಾ ಘಟನೆ ಬಗ್ಗೆ ಜೆಪಿ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.