ಬೆಂಗಳೂರು/ ಮಂಡ್ಯ(ಡಿ. 04)  ಕಿರಾತಕ ಕಬ್ಬು ಕಟಾವಿಗೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದು ಕತ್ತು ಕೊಯ್ದು ಕೊಲೆ ಮಾಡಿದ್ದ. ಕಬ್ಬಿನ ಕದ್ದೆಯಲ್ಲೇ ಬಾಲಕಿ ಹೆಣವಾಗಿದ್ದಳು. 

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುರುಗಲವಾಡಿ ಗ್ರಾಮದಲ್ಲಿ ಬಳ್ಳಾರಿ ಮೂಳದ ಆರತಿ ಬಾಯಿ 12 ವರ್ಷ, ಭೀಕರವಾಗಿ ಕೊಲೆಯಾಗಿದ್ದಳು. ಬಾಲಕಿಗೆ ನ್ಯಾಯ ದೊರಕಿಸಿಕೊಡಬೇಕು.. ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಕಿಚ್ಚ ಸುದೀಪ್  ಟ್ವೀಟ್ ಮಾಡಿದ್ದಾರೆ.

ಬಾಲಕಿ ಮೇಲೆ ಎರಗಿದ ಟಿವಿ ಜರ್ನಲಿಸ್ಟ್

ಟ್ವೀಟ್ ನ ಹ್ಯಾಷ್ ಟ್ಯಾಗ್ ನಲ್ಲಿ ಒಂದು ಗ್ರಾಮರ್ ಮಿಸ್ಟೇಕ್ ಆಗಿದ್ದು ಅಭಿಮಾನಿಗಳು ಅದನ್ನು ಗಮನಕ್ಕೆ ತಂದಿದ್ದಾರೆ. ಸರಿ ಮಾಡಿ ಎಂದು ಕೋರಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕುಟುಂಬ ಕೆಲಸ ಅರಸಿ  ಮಂಡ್ಯಕ್ಕೆ ಬಂದಿತ್ತು.  ಹುರಗಲವಾಡಿ ಗ್ರಾಮದ ರೈತ ಚೆಲುವರಾಜ್ ಎಂಬವರ ಕಬ್ಬಿನಗದ್ದೆಯಲ್ಲಿ ಘೋರ ಘಟನೆ ನಡೆದಿದ್ದು ಕಿಚ್ಚ ಸುದೀಪ್ ತಮ್ಮ ಟ್ರಸ್ಟ್ ಪರವಾಗಿ ಆಗ್ರಹ ಮುಂದೆ ಇಟ್ಟಿದ್ದಾರೆ.