ಚೆನ್ನೈ(  ಡಿ. 02)  13 ವರ್ಷದ ಬಾಲಕಿ ಮೇಲೆ ಟಿವಿ ಪತ್ರಕರ್ತ ಮೂರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.  ಮಾನವ ಕಳ್ಳಸಾಗಣೆದಾರರ ವಶದಲ್ಲಿದ್ದಾಗ ಬಾಲಕಿ ಅತ್ಯಾಚಾರಕ್ಕೊಳಗಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

ಆರೋಪಿ ಪತ್ರಕರ್ತನನ್ನು ಜಿ. ವಿನೋಬಾ ಮತ್ತು ಅಪಹರಣಕಾರರನ್ನು ಮಾಧನ್ ಕುಮಾರ್ ಮತ್ತು ಸಂಧ್ಯಾ ಎಂದು ಗುರುತಿಸಲಾಗಿದೆ. ಕುಮಾರ್, ಸಂಧ್ಯಾ, ವಿನೋಬಾ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸೊಸೆ ಮೇಲೆ ಮಾವನಿಂದಲೇ ಅತ್ಯಾಚಾರ, ಪ್ರಶ್ನೆ ಮಾಡಿದ ಮಗನನ್ನೇ ಹತ್ಯೆ ಮಾಡಿದ

ಹದಿಹರೆಯದ ಬಾಲಕಿಗೆ ತಾಯಿಯನ್ನು ಭೇಟಿಯಾಗಲು ಅವಕಾಶ ನೀಡದಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಹಲ್ಲೆ ಬಗ್ಗೆ ತಾಯಿಗೆ ತಿಳಿಸಿದ್ದು, ದೂರು ದಾಖಲಿಸಲಾಗಿದೆ.

ಹುಡುಗಿಗೆ ತನ್ನ ತಾಯಿಯನ್ನು ಭೇಟಿ ಮಾಡಲು ಅವಕಾಶವನ್ನೇ ನೀಡಲಿಲ್ಲ. ಬಾಲಕಿ ಕೊನೆಗೂ ತನ್ನ ತಾಯಿ ಭೇಟಿ ಮಾಡಿದ ನಡೆದನ ಘಟನೆ ವಿವರಿಸಿದ್ದಾಳೆ. ಇದಾದ ಮೇಲೆ ಪೊಲೀಸ್ ದೂರು ದಾಖಲಾಗಿದೆ.

ಮಾನವ ಕಳ್ಳಸಾಗಣೆದಾರರು ಹುಡುಗಿಯನ್ನು ರಾಜೇಂದ್ರನ್ ಎಂಬ ತಮ್ಮ ಗಿರಾಕಿ ಬಳಿಗೆ ಕಳುಹಿಸಿಕೊಟ್ಟಿದ್ದರು.  ಇದೇ ಸಂದರ್ಭ ಹುಡುಗಿ ಮೇಲೆ  ಇನ್ಸ್‌ಪೆಕ್ಟರ್, ಪತ್ರಕರ್ತ ಮತ್ತು ಇನ್ನೊಬ್ಬ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳದೆ ಇರಲು ಇನ್ಸ್‌ಪೆಕ್ಟರ್ ದೌರ್ಜನ್ಯ ಎಸಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಮಾಧನ್ ಕುಮಾರ್, ಸಂಧ್ಯಾ, ಶಾಹಿತಾ ಬಾನು, ಸೆಲ್ವಿ, ಮಹೇಶ್ವರಿ, ವಿಜಯ, ಕಾರ್ತಿಕ್ ಮತ್ತು ವನಿತಾ ಎಂಬುವರನ್ನು ಬಂಧಿಸಲಾಗಿದೆ.

ಮಾಧನ್ ಕುಮಾರ್  ಬಲವಂತವಾಗಿ ಬಾಲಕಿಯನ್ನು ವೇಶ್ಯಾವಾಟಿಕೆಗೆ ಒಳಪಡಿಸಲು ಯತ್ನಿಸಿದ್ದು ಅಲ್ಲದೆ ಲೈಂಗಿಕ ದೌರ್ಜನ್ಯ  ಎಸಗಿದ್ದಾನೆ. ಆರೋಪಿಗಳನ್ನೆಲ್ಲ ಬಂಧಿಸಿದ್ದು ಇವರ ಹಿಂದೆ ದೊಡ್ಡ  ಜಾಲವೇ ಇದೆ ಎನ್ನಲಾಗಿದೆ.