Asianet Suvarna News Asianet Suvarna News

ಕೇರಳದಲ್ಲಿ 68 ವರ್ಷದ ಮುದುಕನಿಗೆ Honeytrap: 23 ಲಕ್ಷ ಸುಲಿಗೆ ಮಾಡಿದ ವ್ಲೋಗರ್..!

28 ವರ್ಷದ ವ್ಲೋಗರ್‌ ರಶೀದಾ ಕಲ್ಪಕಂಚೇರಿಯಲ್ಲಿ ವಾಸಿಸುತ್ತಿದ್ದ 68 ವರ್ಷದ ಮುದುಕನನ್ನು ಪ್ರೀತಿ ಮಾಡುವುದಾಗಿ ನಾಟಕವಾಡಿದ್ದಳು. ಹಾಗೆ, ಆತನ ಪತಿ ಸಹ ಮುದುಕನಿಗೆ ಮೋಸ ಮಾಡಲು ಸಂಚುಗೊಳಿಸಿದ ಎಂದೂ ವರದಿಯಾಗಿದೆ. 

kerala vlogger extorts rs 23 lakh from 68 year old ash
Author
First Published Nov 23, 2022, 5:56 PM IST

ಕೇರಳದಲ್ಲಿ (Kerala) ಮತ್ತೊಂದು ಹನಿಟ್ರ್ಯಾಪ್‌ ಪ್ರಕರಣ (Honeytrap Case) ವರದಿಯಾಗಿದೆ. 68 ವರ್ಷದ ಮುದುಕನನ್ನು ವ್ಲೋಗರ್‌ವೊಬ್ಬಳು (Vlogger) ಹನಿಟ್ರ್ಯಾಪ್‌ ಮಾಡಿ 23 ಲಕ್ಷ ರೂ. ಸುಲಿಗೆ (Extort) ಮಾಡಿರುವ ಆರೋಪಕ್ಕೆ ಒಳಗಾಗಿದ್ದಾಳೆ. ಈ ಸಂಬಂಧ ಪೊಲೀಸರು (Police) ವ್ಲೋಗರ್‌ ವಿರುದ್ಧ ಹಾಗೂ ಆಕೆಯ ಪತಿ ವಿರುದ್ಧ ಕೇಸ್‌ (Case) ದಾಖಲಿಸಿದ್ದಾರೆ. ಕೇರಳದ ಮಲಪ್ಪುರಂನ (Malappuram) ಕಲ್ಪಕಂಚೇರಿ (Kalpakanchery) ಪೊಲೀಸರು ವ್ಲೋಗರ್‌ ಪತಿ ನಿಶಾದ್‌ನನ್ನು ಬಂಧಿಸಿದ್ದಾರೆ ಎಂದೂ ವರದಿಯಾಗಿದೆ. ಆತ ಕೇರಳದ ತ್ರಿಶೂರ್‌ನ ಕುನ್ನಂಕುಲಂ ಮೂಲದವನು ಎಂದು ತಿಳಿದುಬಂದಿದೆ. 

28 ವರ್ಷದ ವ್ಲೋಗರ್‌ ರಶೀದಾ ಕಲ್ಪಕಂಚೇರಿಯಲ್ಲಿ ವಾಸಿಸುತ್ತಿದ್ದ 68 ವರ್ಷದ ಮುದುಕನನ್ನು ಪ್ರೀತಿ ಮಾಡುವುದಾಗಿ ನಾಟಕವಾಡಿದ್ದಳು. ಹಾಗೂ, ಆತನನ್ನು ಪದೇ ಪದೇ ಮನೆಗೆ ಕರೆಯುತ್ತಿದ್ದಳು ಎಂದೂ ತಿಳಿದುಬಂದಿದೆ. ಹಾಗೆ, ಆತನ ಪತಿ ಸಹ ಮುದುಕನಿಗೆ ಮೋಸ ಮಾಡಲು ಸಂಚುಗೊಳಿಸಿದ ಎಂದೂ ವರದಿಯಾಗಿದೆ. 

ಇದನ್ನು ಓದಿ: ಮನೆಗೆ ಕರೆದು ಹನಿಟ್ರ್ಯಾಪ್: ಹಣ, ಕಾರು ಕಿತ್ತುಕೊಂಡು ಬ್ಲಾಕ್‌ಮೇಲ್

ಮುದುಕನ ಜತೆ ಹತ್ತಿರ ಹತ್ತಿರವಾಗುತ್ತ ಹೋದ ವ್ಲೋರ್‌ ರಶೀದಾ, ನನ್ನ ಪತಿ ಆರಂಭಿಸುವ ಉದ್ಯಮಕ್ಕೆ ಹಣ ಬೇಕೆಂದು ದುಡ್ಡು ಪಡೆಯಲು ಆರಂಭಿಸಿದಳು. ಹೀಗೆ, ದುಡ್ಡು ಪಡೆಯಲು ಆರಂಭಿಸಿದ ಅವಳು, ನಂತರ ನಮ್ಮಿಬ್ಬರ ಸಂಬಂಧದ ಬಗ್ಗೆ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ ಮತ್ತಷ್ಟು ಹಣ ಪಡೆಯುತ್ತಾ ಹೋದಳು ಎಂದೂ ಹೇಳಲಾಗಿದೆ. 

ನಂತರ, 68 ವರ್ಷದ ಮುದುಕ ಹೆಚ್ಚು ಹಣ ಕಳೆದುಕೊಳ್ಳುತ್ತಿರುವ ಬಗ್ಗೆ ತಿಳಿದುಕೊಂಡ ಕುಟುಂಬದವರು ಈ ಬಗ್ಗೆ ಹಿರಿಯ ನಾಗರಿಕನನ್ನು ವಿಚಾರಿಸಿದ್ದಾರೆ. ನಂತರ, ಮುದುಕ ಈ ಬಗ್ಗೆ ಬಾಯ್ಬಿಟ್ಟಾಗ, ಹನಿ ಟ್ರ್ಯಾಪ್‌ ಬಗ್ಗೆ ಅರಿತ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಹೈಕೋರ್ಟ್ ಸಿಬ್ಬಂದಿಯನ್ನೇ ಖೆಡ್ಡಾಗೆ ಕೆಡವಿದ 'ಹನಿಟ್ರ್ಯಾಪ್' ಗ್ಯಾಂಗ್‌: ಪ್ರಮುಖ ಆರೋಪಿ ಸೇರಿ 10 ಜನ ಅರೆಸ್ಟ್‌

ವ್ಲೋಗರ್ ರಶೀದಾ ಹಾಗೂ ಪತಿ ಇಬ್ಬರೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅದೇ ರೀತಿ, ಸಾಮಾಜಿಕ ಜಾಲತಾಣದಲ್ಲಿ 68 ವರ್ಷದ ಮುದುಕನ ಬಗ್ಗೆ ಪೋಸ್ಟ್‌ ಮಾಡಿ ಸಾರ್ವಜನಿಕವಾಗಿ ಅವಮಾನ ಮಾಡುವ ಬೆದರಿಕೆ ಹಾಕಿದ್ದರು. ಮುದುಕ ಹೆಚ್ಚು ಪ್ರಭಾವಶಾಲಿಯಾಗಿದ್ದರು ಹಾಗೂ ಹೆಚ್ಚು ಸಿರಿವಂತರಾಗಿದ್ದರು ಎಂಬ ಕಾರಣಕ್ಕೆ ಈ ವ್ಯಕ್ತಿಯನ್ನು ಹನಿಟ್ರ್ಯಾಪ್‌ ಮಾಡಿರಬಹುದು ಎಂದೂ ಹೇಳಲಾಗುತ್ತಿದೆ.

ಅಲ್ಲದೆ, ಮುದುಕ ಹೆಚ್ಚು ಹಣ ಕಳೆದುಕೊಂಡ ನಂತರ ಅವರ ಕುಟುಂಬ ಈ ಬಗ್ಗೆ ವಿಚಾರಿಸಿದ ನಂತರವೇ ವಿಚಾರ ಬೆಳಕಿಗೆ ಬಂದಿದೆ. ಆಗಲೇ, ಅಷ್ಟೊಂದು ಪ್ರಮಾಣದ ವಂಚನೆಯಾಗಿದೆ ಎಂದು ಕುಟುಂಬಕ್ಕೆ ತಿಳಿದುಬಂದಿದೆ. 68 ವರ್ಷದ ವ್ಯಕ್ತಿಯನ್ನು ಹನಿಟ್ರ್ಯಾಪ್‌ ಮೂಲಕ 23 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ವ್ಲೋಗರ್‌ ಹಾಗೂ ದಂಪತಿ ವಿರುದ್ಧ ಕೇಸ್‌ ದಾಖಲಾಗಿದೆ.

ಇದನ್ನೂ ಓದಿ: ತಿಪ್ಪಾ ರೆಡ್ಡಿ ವಿರುದ್ದ ಹನಿಟ್ರಾಪ್, ತನಿಖೆ ಬಗ್ಗೆ ADGP ಅಲೋಕ್ ಕುಮಾರ್ ಮಾಹಿತಿ

ಸದ್ಯ, ಕೇರಳದ ಕಲ್ಪಕಂಚೇರಿ ಪೊಲೀಸರು, ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ನಿಶಾದ್‌ನನ್ನು ಬಂಧಿಸಿದ್ದಾರೆ. ಅಲ್ಲದೆ, ಪತ್ನಿ ಹಾಗೂ ವ್ಲೋಗರ್‌ ರಶೀದಾ ವಿರುದ್ಧವೂ ವಿಚಾರಣೆ ನಡೆಯುತ್ತಿದೆ ಎಂದು ಸಹ ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.   

ಇದನ್ನೂ ಓದಿ: ಬಂಡೇಮಠದ ಸ್ವಾಮಿ ಆತ್ಮಹತ್ಯೆ ಕೇಸ್: ಮೊಬೈಲ್‌ನಲ್ಲಿ ಅಡಗಿದೆ ಹನಿಟ್ರ್ಯಾಪ್ ರಹಸ್ಯ

Follow Us:
Download App:
  • android
  • ios