Asianet Suvarna News Asianet Suvarna News

ಹೈಕೋರ್ಟ್ ಸಿಬ್ಬಂದಿಯನ್ನೇ ಖೆಡ್ಡಾಗೆ ಕೆಡವಿದ 'ಹನಿಟ್ರ್ಯಾಪ್' ಗ್ಯಾಂಗ್‌: ಪ್ರಮುಖ ಆರೋಪಿ ಸೇರಿ 10 ಜನ ಅರೆಸ್ಟ್‌

ಖಾಸಗಿ ವಿಡಿಯೋ ಚಿತ್ರೀಕರಿಸಿ ಜೈರಾಮ್‌ಗೆ ಎರಡು ಲಕ್ಷ ರೂ.ಗೆ ಡಿಮ್ಯಾಂಡ್ ಇಟ್ಟಿದ್ದ ಹನಿಟ್ರ್ಯಾಪ್ ಗ್ಯಾಂಗ್‌

10 Arrested For Honeytrap Case in Bengaluru grg
Author
First Published Nov 5, 2022, 10:41 AM IST

ಬೆಂಗಳೂರು(ನ.05):  ಹೈಕೋರ್ಟ್ ಸಿಬ್ಬಂದಿಯನ್ನೇ ಖೆಡ್ಡಾಗೆ ಕೆಡವಿ ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದ 'ಹನಿಟ್ರ್ಯಾಪ್' ಟೀಂನ 10 ಮಂದಿಯನ್ನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನುರಾಧ@ಅನು (28), ಕಾವ್ಯ, ಸಿದ್ದ ಸೇರಿದಂತೆ 10 ಜನರನ್ನ ಅರೆಸ್ಟ್ ಮಾಡಲಾಗಿದೆ. 

ಹನಿಟ್ರ್ಯಾಪ್ ಗ್ಯಾಂಗ್‌ ಜೈರಾಮ್ ಎಂಬ ಹೈಕೋರ್ಟ್ ಉದ್ಯೋಗಿಯನ್ನು ಖೆಡ್ಡಾಗೆ ಕೆಡವಿತ್ತು. ಅನು ಎಂಬಾಕೆಯನ್ನ ನಂಬಿ ಬಂದು ಜೈರಾಮ್ ಸಿಲುಕಿದ್ದರು. ಅ. 30 ರಂದು ಕಾವೇರಿಪುರ ವಾರ್ಡ್‌ನ ರಂಗನಾಥಪುರದಲ್ಲಿ ಘಟನೆ ನಡೆದಿತ್ತು. ಖಾಸಗಿ ವಿಡಿಯೋ ಚಿತ್ರೀಕರಿಸಿ ಜೈರಾಮ್‌ಗೆ ಎರಡು ಲಕ್ಷ ರೂ.ಗೆ ಡಿಮ್ಯಾಂಡ್ ಇಟ್ಟಿತ್ತು ಹನಿಟ್ರ್ಯಾಪ್ ಗ್ಯಾಂಗ್‌. ಈ ಸಂಬಂಧ ಜೈರಾಮ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. 

Honeytrapನಿಂದ 30 ಕೋಟಿ ರೂ. ಆಸ್ತಿ ಸಂಪಾದಿಸಿದ ಒಡಿಶಾ ಮಹಿಳೆ: ಈಕೆ ಬಾಯಿಬಿಟ್ಟರೆ ಸರ್ಕಾರವೇ ಪತನ..!

ಜೈರಾಮ್‌ನನ್ನು ಖೆಡ್ಡಾಗೆ ಕೆಡವಿದ್ದು ಹೇಗೆ? 

2 ವರ್ಷದ ಹಿಂದೆ ಪ್ರಕರಣ ಒಂದಕ್ಕೆ ಬಂದಾಗ ಜೈರಾಮ್‌ಗೆ ಅನು ಎಂಬಾಕೆ ಪರಿಚಯವಾಗಿದ್ದಳು. 6 ತಿಂಗಳ‌ ಹಿಂದೆ ಕಿಲಾಡಿ ಲೇಡಿ ಮತ್ತೆ ಪ್ರತ್ಯಕ್ಷವಾಗಿದ್ದಳು. ಶಾರ್ಟ್ ಸರ್ಕ್ಯೂಟ್‌ನಿಂದ ಟಿ.ವಿ, ಫ್ರಿಡ್ಜ್ ಎಲ್ಲಾ ಸುಟ್ಟೋಗಿದೆ ಅಂತ ಅನು ಬಂದಿದ್ದಳು. ಹೈಕೋರ್ಟ್ ಬಳಿ ಬಂದು ಜೈರಾಮ್‌ನಿಂದ 10 ಸಾವಿರ ಸಾಲ ಪಡೆದುಕೊಂಡಿದ್ದಳು.  ಆ ಹಣವನ್ನು ಅ.10 ರಂದು ಜೈರಾಮ್‌ಗೆ ಹಿಂದಿರುಗಿಸಿದ್ದಳಂತೆ. ನಂತರ ಅ. 25 ರಂದು ಮತ್ತೆ 5 ಸಾವಿರ ಸಾಲ ಕೇಳಿದ್ದಳು. ಅ.30 ರಂದು ಅನು ಕರೆದಿದ್ದ ಮನೆಗೆ ಜೈರಾಮ್ 5 ಸಾವಿರ ರೂ. ಹಣದೊಂದಿಗೆ ಬಂದ್ದನು.  5 ಸಾವಿರ ಹಣ ಕೊಟ್ಟು ಮನೆಯಿಂದ ಜೈರಾಮ್ ಹೊರ ಬಂದಿದ್ದನು. ಈ ವೇಳೆ ಬಂದ ನಾಲ್ವರು ಮತ್ತೆ ಜೈರಾಮ್‌ನನ್ನ ಮನೆಯೊಳಗೆ ಎಳೆದೊಯ್ದು ಥಳಿಸಿ 2 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಅಲ್ಲದೇ ಜೈರಾಮ್ ಪತ್ನಿ ಮತ್ತು ಮಕ್ಕಳಿಗೆ ಕರೆ ಮಾಡಿ ನನ್ನ ಪತ್ನಿಯನ್ನು ಅತ್ಯಾಚಾರ ಮಾಡಲು ಬಂದಿದ್ದಾಗಿ ಆರೋಪಿ ಹೇಳಿದ್ದನು.  ಆದರೆ, ಹಲ್ಲೆಗೊಳಗಾದ ತನ್ನ ಬಳಿ ಇದ್ದ ಐದು ಸಾವಿರ ರೂ. ಕಿತ್ತುಕೊಂಡು ರಾಬರಿ ಮಾಡಿದ್ದಾರೆಂದು ಜೈರಾಮ್ ದೂರು ನೀಡಿದ್ದರು. ಆದರೆ ಪೊಲೀಸರ ತನಿಖೆಯಿಂದ ಸತ್ಯನೇ ಬೇರೆ ಅಂತ ತಿಳಿದು ಬಂದಿದೆ. 

ಹನಿಟ್ರ್ಯಾಪ್‌ಗೆ ಕೆಡವಿ ನಿವೃತ್ತ ಪ್ರಾಧ್ಯಾಪಕನಿಂದ 21 ಲಕ್ಷರೂ. ಪೀಕಿದ ಚೆಂದುಳ್ಳಿ ಚೆಲುವೆ

ನಿಜಕ್ಕೂ ಹನಿಟ್ರ್ಯಾಪ್ ಬಲೆಗೆ ಜೈರಾಮ್ ಸಿಲುಕಿದ್ಹೇಗೆ..? 

ಸಿದ್ದ, ಅನು ಮತ್ತು ಟೀಂ ಹಣ ಮಾಡಲು ಒಂದು ಬಲೆಯನ್ನ ಹೆಣೆದಿದ್ದರು. ಅದಕ್ಕಾಗಿ ಅನು ಎಂಬಾಕೆಯನ್ನ ಛೂ ಬಿಟ್ಟಿದ್ರು, ಜೈರಾಮ್ ಜತೆ ಪರಿಚಯದ ಬಳಿಕ ಅನು ಆತ್ಮೀಯವಾಗಿದ್ದಳು. ಅನು ಮನೆಗೆ ಬಾ ಎಂದು ಜೈರಾಮ್ ನನ್ನು ಕರೆಸಿಕೊಂಡಿದ್ದಳು. ಐದು ಸಾವಿರ ಹಣದೊಂದಿಗೆ ಅನು ಸೇರಲು ಜೈರಾಮ್ ಬಂದಿದ್ದನಂತೆ. ಅನು ಕೈಗೆ ಐದು ಸಾವಿರ ಹಣವನ್ನು ನೀಡಿದ್ದಾನೆ. ನಂತರ ಬಟ್ಟೆ ತೆಗೆಯುವಾಗ ನಾಲ್ವರು ಎಂಟ್ರಿಕೊಟ್ಟಿದ್ದರು. ಜೈರಾಮ್‌ನ ವಿಡಿಯೋ ಚಿತ್ರೀಕರಣ ಮಾಡಿಕೊಂಡು, ನನ್ನ ಹೆಂಡತಿ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಿಯಾ ಎಂದು ಬೆದರಿಕೆ ಹಾಕಿದ್ದರು. ವಿಡಿಯೋ ಮಾಡಿಕೊಂಡು 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಆರೋಪಿಗಳು. ಹಣ ಕೊಡದಿದ್ದಾಗ ಜೈರಾಮ್ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಜೈರಾಮ್ ದೂರು ನೀಡಿದ್ದರು. 

ಪಿಎಸ್ಐ ಹನುಮಂತರಾಜು ಪ್ರಕರಣದ ತನಿಖೆಯನ್ನ ಕೈಗೊಂಡು ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಿದ್ದ ಮೂಲತಃ ದಾವಣಗೆರೆಯವನಾಗಿದ್ದಾನೆ. ಬೆಂಗಳೂರಲ್ಲಿ ಬಂದು ರೌಡಿಸಂ ಆ್ಯಕ್ಟಿವಿಟಿಯಲ್ಲಿ ಭಾಗಿಯಾಗಿದ್ದನು. ಈತನ ಮೇಲೆ ಎರಡು ರಾಬರಿ ಸೇರಿದಂತೆ ಹಲವು ಪ್ರಕರಣಗಳು ನಗರದ ಹಲವು ಠಾಣೆಗಳಲ್ಲಿ  ದಾಖಲಾಗಿವೆ. ಸದ್ಯ ಬಂಧಿತರನ್ನ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಇದೇ ಗ್ಯಾಂಗ್ ಇನ್ನೂ ಹಲವರಿಗೆ ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮರ್ಯಾದೆಗೆ ಅಂಜಿ ಕೆಲವರು ದೂರು ನೀಡಿಲ್ಲ ಅಂತ ತಿಳಿದು ಬಂದಿದೆ.  
 

Follow Us:
Download App:
  • android
  • ios