ತಿಪ್ಪಾ ರೆಡ್ಡಿ ವಿರುದ್ದ ಹನಿಟ್ರಾಪ್, ತನಿಖೆ ಬಗ್ಗೆ ADGP ಅಲೋಕ್ ಕುಮಾರ್ ಮಾಹಿತಿ
ಎಡಿಜಿಪಿ ಅಲೋಕ್ ಕುಮಾರ್ ನಿನ್ನೆ ಚಿತ್ರದುರ್ಗ ಜಿಲ್ಲೆಗೆ ಅಗಮಿಸಿದ್ದು, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ ಕೇಸ್ ಬಗ್ಗೆ ಕೆಲ ಮಾಹಿತಿ ಕಲೆ ಹಾಕಲಾಗಿದೆ. 2 ತಂಡ ರಚಿಸಿದ್ದು ಒಂದು ತಂಡ ಬೇರೆ ರಾಜ್ಯಕ್ಕೆ ತೆರಳ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ನ.3): ಎಡಿಜಿಪಿ ಅಲೋಕ್ ಕುಮಾರ್ ನಿನ್ನೆ ಚಿತ್ರದುರ್ಗ ಜಿಲ್ಲೆಗೆ ಅಗಮಿಸಿ ಹಲವು ವಿಷಯಗಳ ಕುರಿತು ಪೊಲೀಸ್ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದರು. ತಡರಾತ್ರಿ ಮುರುಘಾ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಜೋಗಿಮಟ್ಟಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ADGP ನೇತೃತ್ವದಲ್ಲಿ ಪೊಲೀಸ್ ಪರೇಡ್ ನಡೆಸಲಾಯಿತು. ಆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ ಕೇಸ್. ನಿನ್ನೆ ಕೇಸ್ ದಾಖಲಾಗಿದೆ, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕೆಲ ಮಾಹಿತಿ ಕಲೆ ಹಾಕಲಾಗಿದೆ. 2 ತಂಡ ರಚಿಸಿದ್ದು ಒಂದು ತಂಡ ಬೇರೆ ರಾಜ್ಯಕ್ಕೆ ತೆರಳ್ತಿದೆ ಎಂದರು. ಪ್ರಕರಣ ಸಿಐಡಿಗೆ ನೀಡುವ ಬಗ್ಗೆ ನಾವು ಮಾತಾಡಲ್ಲ. ಜನರಲ್ಲಿ ಸೈಬರ್ ಕ್ರೈಂ ಬಗ್ಗೆ ಅರಿವು ಕೊರತೆ ಇದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 97 ಸೈಬರ್ ಕ್ರೈಂ ಕೇಸ್ ದಾಖಲಾಗಿವೆ. ಇನ್ನು ಹೆಚ್ಚಿನ ಪ್ರಕರಣಗಳು ಆಗಬೇಕಿತ್ತು, ಮಾಹಿತಿ ಕೊರತೆಯಿಂದ ಕಡಿಮೆ ಕೇಸ್ ಇವೆ. ಸೈಬರ್ ಪ್ರಕರಣಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕಿದೆ ಎಂದು ಸೂಚನೆ ನೀಡಿದರು.
ಸೋಷಿಯಲ್ ಮೀಡಿಯಾ ಮಾನಿಟ್ರಿಂಗ್, ಸೈಬರ್ ಕ್ರೈಂ ತಡೆಗಟ್ಟುವ ಕೆಲಸ ಆಗಬೇಕಿದೆ. ಸಾರ್ವಜನಿಕ ವಲಯದಲ್ಲಿ ಈರೀತಿ ಪ್ರಕರಣ ಮೊದಲಾಗಿದೆ. ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ ಎಡಿಜಿಪಿ, ಸೈಬರ್ ಕ್ರಿಮಿನಿಲ್ಸ್ ಬಲೆ ಹಾಕಲು ಕಾಯುತ್ತಿರುತ್ತಾರೆ. ಚಾಟ್ ಮಾಡಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಾರೆ. ಸೈಬರ್ ಕ್ರೈಂ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸಬೇಕಿದೆ.
ಇನ್ನೂ ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ. ಮುರುಘಾಶ್ರೀ ವಿರುದ್ಧ 2 ಫೊಕ್ಸೋ ಕೇಸ್ ದಾಖಲಾಗಿವೆ. ಇನ್ನೂ ಕೆಲ ಸಾಕ್ಷಿಗಳ ಹೇಳಿಕೆ ದಾಖಲು, ಇತರೆ ತನಿಖೆ ಬಾಕಿಯಿದೆ. ನಿನ್ನೆ ನಾನು ಸಂತ್ರಸ್ತರ ಜತೆ ಮಾತಾಡಿದ್ದೇನೆ. ಮೈಸೂರಿನ ಒಡನಾಡಿ ಸಂಸ್ಥೆಯ ಮುಖಸ್ಥರ ಜತೆ ಮಾತಾಡಿದ್ದೇನೆ. ಕೆಲ ವಿಷಯಗಳನ್ನು ಸಂತ್ರಸ್ತರು, ಒಡನಾಡಿ ಸಂಸ್ಥೆಯವರು ಹೇಳಿದ್ದಾರೆ. ನಾವು ಸಮಗ್ರವಾಗಿ ಪ್ರಕರಣದ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಮಾಧ್ಯಮಗಳ ಮೂಲಕ ಇನ್ನು ಹೆಚ್ಚಿನ ಮಕ್ಕಳ ಮೇಲೆ ದೌರ್ಜನ್ಯದ ಮಾಹಿತಿ ಹಿನ್ನೆಲೆ. ಒಡನಾಡಿ ಸಂಸ್ಥಯವರನ್ನು ಕರೆಸಿ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು.
Karnataka Politics: ಕಾಂಗ್ರೆಸ್‌ನಿಂದ ಅಲ್ಪ ಸಂಖ್ಯಾತ ಸಮುದಾಯಕ್ಕೆ ನಿರಂತರ ದ್ರೋಹ: ಶಾಸಕ ತಿಪ್ಪಾರೆಡ್ಡಿ
ಚಿತ್ರದುರ್ಗ ಮತ್ತು ರಾಜ್ಯದಲ್ಲಿ ಗಾಂಜಾ ಹಾವಳಿ ವಿಚಾರ. ಗಾಂಜಾ ಹಾವಳಿ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಜನರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಗಾಂಜಾ ಹಾವಳಿ ಬಗ್ಗೆ ತನಿಖೆ ನಡೆಸಿ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುರುಘಾಶ್ರೀ ಕೇಸ್ ಬಗ್ಗೆ ಪೊಲೀಸರು ಸರಿಯಾದ ತನಿಖೆ ಮಾಡುತ್ತಿದ್ದಾರೆ. ಸಿಬಿಐ ತನಿಖೆಗೆ ಕೊಡಿ ಎನ್ನವ ವಿಚಾರಕ್ಕೆ ನಾವು ಟೀಕಿಸಲ್ಲ. ಪಿಎಫ್ಐ ಮೇಲೆ ದಾಳಿ ಬೆನ್ನಲ್ಲೇ ಪೊಲೀಸರು ಟಾರ್ಗೆಟ್ ವಿಚಾರ. ದಾಳಿ ನಡೆಸಿದ ಪೊಲೀಸರು ಟಾರ್ಗೆಟ್ ಆಗುತ್ತಾರೆ. ಗಾಂಜಾ, ರೌಡಿಗಳ ಮೇಲೆ ದಾಳಿ ನಡೆಸಿದರೂ ಟಾರ್ಗೆಟ್ ಆಗುತ್ತೇವೆ. ಕರ್ನಾಟಕ ರಾಜ್ಯ ಪೊಲೀಸರು ಹೆದರಿ ಕೂಡುವುದಿಲ್ಲ.
MLA Thippareddy Honey Trap: ಅಪರಿಚಿತ ಮಹಿಳೆಯಿಂದ ತಿಪ್ಪಾರೆಡ್ಡಿಗೆ ವಿಡಿಯೋ ಕಾಲ್
ಇದು ಪ್ರೊಫೆಷನಲ್ ರಿಸ್ಕ್ ಇದೆ, ನಮ್ಮ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಪಿಎಫ್ ಐ ಬಗ್ಗೆ ಕಠಿಣ ಕ್ರಮ ಆಗಿದೆ. ಯಾರಾದರೂ ತರ್ಲೆ ಮಾಡಿದರೆ ಬಿಡುವುದಿಲ್ಲ. ಪಿಎಫ್ ಐ ಬ್ಯಾನ್ ಮುನ್ನ ಮತ್ತು ನಂತರ ನಾವು ಸರಿಯಾದ ಕ್ರಮ ಜರುಗಿಸಿದ್ದೇವೆ. ಬೇರೆ ರಾಜ್ಯಗಳಿಗಿಂತ ರಾಜ್ಯ ಪೊಲೀಸರಿಂದ ಕಠಿಣ ಕ್ರಮ. ಎನ್ ಐಎ ದಾಳಿ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.