Asianet Suvarna News Asianet Suvarna News

ಅಯ್ಯೋ.. ಪಾಪಿ! ರಸ್ತೆಯಲ್ಲಿ 70 ವರ್ಷದ ಮಹಿಳೆ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಪುತ್ರ

ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯ ಸಾವಿನ ನಂತರ ಮಗ ರಸ್ತೆಯಲ್ಲಿ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಕಂಡುಬಂದಿದೆ. 

indore police register case against man for having sex with his mother s corpse ash
Author
First Published Dec 5, 2023, 4:01 PM IST

ಇಂದೋರ್‌ (ಡಿಸೆಂಬರ್ 5, 2023): ಮಧ್ಯಪ್ರದೇಶದ ಇಂದೋರ್ ನಗರದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ 70 ವರ್ಷದ ತಾಯಿಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಅಲ್ಲದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 297 (ಯಾವುದೇ ಮಾನವ ಶವಕ್ಕೆ ಯಾವುದೇ ಅವಮಾನವನ್ನು ನೀಡುತ್ತದೆ) ಅಡಿಯಲ್ಲಿ 22 ವರ್ಷದ ವ್ಯಕ್ತಿಯ ವಿರುದ್ಧ ಕೇಸ್‌ ದಾಖಲಿಸಲಾಗಿದೆ, 

ಆರೋಪಿಯು ಡಿಸೆಂಬರ್ 1ರ ಮಧ್ಯರಾತ್ರಿ ಬಡಿ ಗ್ವಾಲ್ಟೋಲಿ ಪ್ರದೇಶದ ರಸ್ತೆಯಲ್ಲಿ ತನ್ನ ತಾಯಿಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಪಲಾಸಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಜಗದೀಶ್ ಪ್ರಸಾದ್ ಜಮ್ರೆ ಪಿಟಿಐಗೆ ತಿಳಿಸಿದ್ದಾರೆ. ಆದರೆ, ಇದುವರೆಗೆ ಬಂಧಿಸಿಲ್ಲ ಎಂದೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ಥೂ.. ಪಾಪಿ.. ಶವವನ್ನೂ ಬಿಡಲ್ವಾ? 79 ವರ್ಷದ ಮುದುಕಿ ಹೆಣದ ಜತೆ ಸೆಕ್ಯುರಿಟಿ ಗಾರ್ಡ್‌ ಲೈಂಗಿಕ ಕ್ರಿಯೆ

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಭೇಟಿ ಮಾಡಿದ್ದು, ಆತನಿಗೆ ಮಾನಸಿಕ ಅಸ್ವಸ್ಥನಿರುವುದು ಕಂಡು ಬಂದಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ, ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯನ್ನು ಉಸಿರಾಟದ ತೊಂದರೆಯಿಂದ ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸಾವಿನ ನಂತರ, ಆರೋಪಿ ಮೃತದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದಾನೆ ಎಂದೂ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಇನ್ನೊಂದೆಡೆ, ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಈವರೆಗೆ ಬಂಧಿಸಿಲ್ಲ ಎಂದೂ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಇನ್ನೋರ್ವ ಪೊಲೀಸ್ ಅಧಿಕಾರಿ, ಸ್ಥಳೀಯ ಹಾಸ್ಟೆಲ್‌ನಲ್ಲಿ ವಾಸಿಸುವ ಇಬ್ಬರು ವಿದ್ಯಾರ್ಥಿಗಳು ಘಟನೆಯನ್ನು ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದು ಪೊಲೀಸರಿಗೆ ತಿಳಿಸಿದ್ದಾರೆ. ಆ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: ಅಯ್ಯೋ ಕಂದಮ್ಮ! ಮಗು ತಂದೆ ಯಾರೆಂದು ಜಗಳ: ಒಂದೂವರೆ ತಿಂಗಳ ಮಗುವನ್ನೇ ಕೊಂದ ದಂಪತಿ

ಈ ಮಧ್ಯೆ, ಇತ್ತೀಚೆಗೆ ಅಮೆರಿಕದ ಅರಿಝೋನಾದಲ್ಲಿ ವಯಸ್ಸಾದ ಮಹಿಳೆಯ ಹೆಣದ ಮೇಲೂ ಲೈಂಗಿಕ ಕ್ರಿಯೆ ನಡೆಸಿ ವ್ಯಕ್ತಿಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಅರಿಝೋನಾ ಆಸ್ಪತ್ರೆಯೊಳಗಿನ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್‌ನನ್ನು ಈ ವಾರ ಅರೆಸ್ಟ್‌ ಮಾಡಲಾಗಿದೆ. 79 ವರ್ಷದ ಮಹಿಳೆಯ ಶವದೊಂದಿಗೆ ಲೈಂಗಿಕತೆ ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ. ಆರೋಪಿ ಈ ಕೃತ್ಯ ನಡೆಸುತ್ತಿದ್ದಾಗ ಆತನ ಸಹೋದ್ಯೋಗಿಗಳು ಆರೋಪಿಯನ್ನು ಹಿಡಿದಿದ್ದಾರೆ ಎಂದೂ ದಿ ನ್ಯೂಯಾರ್ಕ್ ಪೋಸ್ಟ್‌ ವರದಿ ಮಾಡಿದೆ.

ಇದನ್ನು ಓದಿ: ಥೂ.. ಪಾಪಿ.. ನಾಲ್ವರು ಸ್ನೇಹಿತರ ಜೊತೆ ಸೇರಿ ತಂಗಿ ಮೇಲೆ ರೇಪ್‌ ಮಾಡಿ ಕೊಲೆ ಮಾಡ್ದ!

Follow Us:
Download App:
  • android
  • ios