ಗರ್ಭಿಣಿ ಪತ್ನಿಗೆ ಜ್ಯೂಸ್‌ನೊಂದಿಗೆ ಮದ್ಯ ಕುಡಿಸಿ ಬಳಿಕ ಕತ್ತು ಹಿಸುಕಿ ಕೊಂದಿದ್ದ ಪತಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 

ಚಾಮರಾಜನಗರ (ಸೆ.15): ಗರ್ಭಿಣಿ ಪತ್ನಿಗೆ ಜ್ಯೂಸ್‌ನೊಂದಿಗೆ ಮದ್ಯ ಕುಡಿಸಿ ಬಳಿಕ ಕತ್ತು ಹಿಸುಕಿ ಕೊಂದಿದ್ದ ಪತಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ರಾಚಪ್ಪಾಜಿನಗರದ ಮುತ್ತುರಾಜ್ ಎಂಬಾತ ಶಿಕ್ಷೆಗೊಳಗಾಗಿರುವ ಅಪರಾಧಿ. 

ಕಳೆದ 2013ರಲ್ಲಿ ಗರ್ಭಿಣಿ ಪತ್ನಿ ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಮುತ್ತುರಾಜ್​ಗೆ ಜೀವಾವಧಿ ಶಿಕ್ಷೆ ಮತ್ತು 2.10 ಲಕ್ಷ ರೂ. ದಂಡ ವಿಧಿಸಿದ್ದಾರೆ. ಕೊಳ್ಳೇಗಾಲ ತಾಲೂಕು ರಾಚಪ್ಪಾಜಿ ನಗರದ ಮುತ್ತುರಾಜು ಅಲಿಯಾಸ್‌ ಚಿನಕಯ್ಯ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಟ್ರ್ಯಾಕ್ಟರ್‌ ಚಾಲಕನಾಗಿದ್ದ ಈತ ಗೊಲ್ಲ ಜನಾಂಗಕ್ಕೆ ಸೇರಿದ್ದು, ಪರಿಶಿಷ್ಟ ಪಂಗಡದ ಸೋಲಿಗ ಜಾತಿಗೆ ಸೇರಿದ ಜ್ಯೋತಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. 

ದಾವಣಗೆರೆಯಲ್ಲಿದೆ ಖತರ್ನಾಕ್‌ ಖದೀಮರ ಗ್ಯಾಂಗ್‌: ಸ್ವಲ್ಪ ಯಾಮಾರಿದ್ರೂ ಪಂಗನಾಮ ಗ್ಯಾರಂಟಿ..!

ಮದುವೆಯಾದ ಕೆಲ ದಿನಗಳ ಬಳಿಕ ಮುತ್ತುರಾಜು, ಪತ್ನಿ ಜ್ಯೋತಿಗೆ ಮಾನಸಿಕ ಹಿಂಸೆ ನೀಡಿ ಮೂರು ತಿಂಗಳ ಗರ್ಭಿಣಿಯಾಗಿದ್ದ ಆಕೆಯನ್ನು ಇನ್ನಿಬ್ಬರ ಸಹಾಯದಿಂದ ಕಳೆದ 2013ರ ಸೆಪ್ಟೆಂಬರ್‌ 24ರಂದು ರಾತ್ರಿ ಸತ್ತೇಗಾಲ ಉಗನಿಯ ಮುಖ್ಯ ರಸ್ತೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ, ಪಾಳು ಬಿದಿದ್ದ ಸ್ಥಳದಲ್ಲಿ ಗಿಡಗಳ ನಡುವೆ ಶವವನ್ನು ಎಸೆದಿದ್ದ. ಆಕೆಯ ಗುರುತು ಸಿಗದಿರಲೆಂದು ಆಕೆಯ ಎಡ ಪಾಶ್ರ್ವದ ಕೆನ್ನೆಯನ್ನು ಸುಟ್ಟುಹಾಕಿ ಸಾಕ್ಷಿ ನಾಶಪಡಿಸಿರುವ ಕುರಿತು ರುಜುವತಾದ ಹಿನ್ನೆಲೆ ಆರೋಪಿ ಮುತ್ತುರಾಜುಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾ. ಬಿ.ಎಸ್‌. ಭಾರತಿ ಜೀವವಾಧಿ ಶಿಕ್ಷೆ ನೀಡಿ ಮತ್ತು 2.10 ಲಕ್ಷ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಟಿ.ಎಚ್‌. ಲೋಲಾಕ್ಷಿ ವಾದ ಮಂಡಿಸಿದ್ದರು.

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ಬಾಗಲಕೋಟೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಯ್ಯದ್‌ ಬಳಿಗುರ ರೇಹಮಾನ್‌ ಅವರು ಕೊಲೆ ಆರೋಪಿ ಬಸವರಾಜ ಶಾಂತಪ್ಪ ಶೆಟ್ಯಪ್ಪನವರ್‌ಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಕಲಾದಗಿ ಗ್ರಾಮದ ಪುನವರ್ಸತಿ ಸಮೀಪದ ಜಮೀನೊಂದರಲ್ಲಿ ಮಾರ್ಚ್‌ 4, 2018ರಂದು ಗ್ರಾಮದ ಸರಹದ್ದಿನ ಸರ್ವೇ ನಂಬರ್‌ 113 ಹೊಲದಲ್ಲಿ ಕೊಲೆ ಆರೋಪಿ ಬಸವರಾಜ ಶೆಟ್ಯಪ್ಪನವರ ಬಾಗಲಕೋಟೆ ಜೆಂಡಾ ಗಲ್ಲಿಯ ಸೈದುಸಾಬ ದಾವಲಸಾಬ ಮೆಹತರ ವ್ಯಕ್ತಿಯನ್ನು ಕೊಡಲಿಯಿಂದ ಮಾರಣಾಂತಿಕವಾಗಿ ಹೊಡೆದು ಗಾಯಪಡಿಸಿ ಸ್ಥಳದಲ್ಲೇ ಮರಣಪಡಿಸಿದ್ದ.

ಕ್ಲಿನಿಕಲ್ಲಿ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ವೈದ್ಯನ ವಿರುದ್ಧ ಪೋಕ್ಸೋ ಕೇಸ್‌

ಬೋರಮ್ಮನ ಎಡಗೈ ಬೆರಳು ತುಂಡರಿಸಿ ಹೋಗುವಂತೆ ಮಾಡಿ ಭಾರಿ ಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧ ಪ್ರಕರಣ ಕಲಾದಗಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ತನಿಖೆ ಕೈಗೊಂಡ ಅಂದಿನ ಪೊಲೀಸ್‌ ಸಿಪಿಐ ಡಿ.ಡಿ. ದೂಳಖೇಡ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು. ದೋಷಾರೋಪಣೆ ಪಟ್ಟಿಯ ವಿಚಾರಣೆ ನಡೆಸಿದ ಸತ್ರ ನ್ಯಾಯಾಲಯ ಆರೋಪಿ ಕೊಲೆ ಮಾಡಿದ ಆರೋಪ ಸಾಬೀತಾಗಿದ್ದು, ಆರೋಪಿಗೆ ಕಲಂ 302 ಐಪಿಸಿ ಅಡಿ ಜೀವಾವಧಿ ಶಿಕ್ಷೆ ಮತ್ತು . 1,00000 ದಂಡ ಹಾಗೂ ಕಲಂ 307 ಐಪಿಸಿ ಅಡಿಗೆ 7 ವರ್ಷ ಜೈಲು ಶಿಕ್ಷೆ . 10,000 ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಸುನಿಲ್‌ ಎಂ. ಹಂಜಿ ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದರು.