ಶಿವಮೊಗ್ಗ: ರಾಜು ಕೊಲೆ ಪ್ರಕರಣ, ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಸೆ.25 ರಂದು ಬೆಳ್ಳಿಕೊಡಿಗೆ ಗ್ರಾಮದಲ್ಲಿ ರಾಜು ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಬಂಧಿತ ಆರೋಪಿಗಳು 

Four Arrested For Raju Murder Case in Shivamogga grg

ಶಿವಮೊಗ್ಗ(ಅ.05): ಬೆಳ್ಳಿಕೊಡಿಗೆ ಮೃಗವಧೆ ರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ಶಿಶಿರ, ಶಿವು, ವಿಜೇಂದ್ರ ಮತ್ತು ಸತೀಶ್ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ. 

ಸೆ.25 ರಂದು ಬೆಳ್ಳಿಕೊಡಿಗೆ ಗ್ರಾಮದಲ್ಲಿ ರಾಜು ಎಂಬಾತನ ಮೇಲೆ ಬಂಧಿತ ಆರೋಪಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಕೋಳಿ ಅಂಗಡಿಯ ಬಳಿ ಕೋಳಿ ಕದಿಯಲು ಬಂದಿದ್ದೀಯ ಅಂತ ಆರೋಪಿಸಿ ಹಲ್ಲೆ ನಡೆಸಲಾಗಿತ್ತು. 

ದಕ್ಷಿಣ ಕನ್ನಡ: ಪ್ರವೀಣ್ ನೆಟ್ಟಾರು ಹತ್ಯೆಗೆ ಫ್ರೀಡಂ ಕಮ್ಯೂನಿಟಿ ಹಾಲಲ್ಲಿ ಸ್ಕೆಚ್? ಟ್ರಸ್ಟಿ ಅರೆಸ್ಟ್

ಆರೋಪಿಗಳಾದ ಶಿಶಿರ, ವಿಜೇಂದ್ರ ಮತ್ತು ಶಿವು ಎಂಬುವರು ರಾಜುನನ್ನ ಬಂಧಿಸಿ ಕೈಕಾಲು ಕಟ್ಟಿ ಹಾಕಿದ್ದರು. ಬೆಣ್ಣು, ಕಾಲುಗಳಿಗೆ ದೊಣ್ಣೆಗಳಿಗೆ ಹೊಡೆದಿದ್ದರು. ನಂತರ ಬೈಕ್‌ನಲ್ಲಿ ಕರೆದೊಯ್ದು ಮನೆಯ ಮುಂದೆ ಬಿಟ್ಟು ಹೋಗಿದ್ದರು.
ಮನೆಯ ಬಳಿ ಬರುತ್ತಿದ್ದ ರಾಜು ಹೆಂಡತಿ ಪುಷ್ಪಲತಾ ಮತ್ತು ಮಗಳು ಪೂರ್ಣಿಮಾ ಉಪಚರಿಸಿ ರಾಜು ಕುಡಿಯಲು ನೀರು ತರುವಷ್ಟರಲ್ಲಿ ರಾಜು ಸಾವನ್ನಪ್ಪಿದ್ದ. ಈ ಸಂಬಂಧ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. 
 

Latest Videos
Follow Us:
Download App:
  • android
  • ios