ದಕ್ಷಿಣ ಕನ್ನಡ: ಪ್ರವೀಣ್ ನೆಟ್ಟಾರು ಹತ್ಯೆಗೆ ಫ್ರೀಡಂ ಕಮ್ಯೂನಿಟಿ ಹಾಲಲ್ಲಿ ಸ್ಕೆಚ್? ಟ್ರಸ್ಟಿ ಅರೆಸ್ಟ್

Dakshina Kannada News: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಫ್ಐ ಟೆರರ್ ಆಕ್ಟಿವಿಟೀಸ್‌ಗೆ ಬಂಟ್ವಾಳದ ಸಭಾಂಗಣವೊಂದು ಪ್ರಮುಖ ಕೇಂದ್ರವಾಗಿತ್ತು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. 

Dakshina Kannada NIA raids Freedom Community Hall trustee arrested mnj

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಗಳೂರು (ಸೆ. 30): ಕರಾವಳಿಯಲ್ಲಿ ಪಿಎಫ್ಐ (PFI) ಬೇರಿನ ಆಳ ಅಗಲದ ತನಿಖೆ ಮತ್ತಷ್ಟು ವಿಸ್ತರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಫ್ಐ ಟೆರರ್ ಆಕ್ಟಿವಿಟೀಸ್‌ಗೆ ಬಂಟ್ವಾಳದ ಸಭಾಂಗಣವೊಂದು ಪ್ರಮುಖ ಕೇಂದ್ರವಾಗಿತ್ತು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.  ಬಂಟ್ವಾಳ, ಪುತ್ತೂರು, ಸುಳ್ಯದ ಕೆಲ ಅಜ್ಞಾತ ಪ್ರದೇಶಗಳಲ್ಲಿ ಟ್ರೈನಿಂಗ್ ನಡೀತಾ ಇದ್ದು, ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರೋ ಫ್ರೀಡಂ ಕಮ್ಯುನಿಟಿ ಹಾಲ್ (Freedom Community Hall) ಕೂಡ ಟ್ರೈನಿಂಗ್ ಸೆಂಟರ್ ಆಗಿತ್ತು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ‌. 

ಸಾಕಷ್ಟು ಯುವಕರಿಗೆ ಇಲ್ಲಿ ಉಗ್ರ ತರಬೇತಿ ನೀಡಿದ್ದು, ಪಿಎಫ್ಐ ಕಾರ್ಯಕರ್ತರಿಗೆ ಇಲ್ಲಿ ಉಗ್ರ ತರಬೇತಿ ನೀಡಿದ ವಿಚಾರ ಬಹಿರಂಗವಾಗಿದೆ. ಟ್ರಸ್ಟ್ ಹೆಸರಿನಲ್ಲಿ 2007ರಲ್ಲಿ ಆರಂಭವಾದ ಈ ಕಮ್ಯುನಿಟಿ ಹಾಲಿನಲ್ಲಿ ಅಂದಿನಿಂದ ಈವರೆಗೂ ಸಾವಿರಾರು ಯುವಕರಿಗೆ ಟ್ರೈನಿಂಗ್ ನೀಡಲಾಗಿದೆ‌‌.  

ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರು ಕೂಡ ಇಲ್ಲೇ ತರಬೇತಿ ಪಡೆದಿದ್ದು, ಈ ಬಗ್ಗೆ ಎನ್ಐಎ ಹಾಲ್‌ಗೆ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದೆ. ದಾಳಿ ಮಾಡಿ ಟ್ರಸ್ಟಿ ಅಯ್ಯುಬ್ ಅಗ್ನಾಡಿ ಬಂಧಿಸಿರೊ ಎನ್ಐಎ ತಂಡ ಮತ್ತಿಬ್ಬರು ಟ್ರಸ್ಟಿಗಳಿಗಾಗಿ ಬಲೆ ಬೀಸಿದೆ. ಸದ್ಯ ಈ ಹಾಲ್‌ನ್ನು ಸೀಜ್ ಮಾಡಲು ಎನ್ಐಎ ಸೂಚನೆ ನೀಡಿದ್ದು, ಒಂದೆರಡು ದಿನಗಳಲ್ಲಿ ಫ್ರೀಡಂ ಕಮ್ಯುನಿಟಿ ಹಾಲ್ ಸೀಝ್ ಸಾದ್ಯತೆ ಇದೆ. 

ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ನೆಟ್ಟಾರು ಹತ್ಯೆಗೂ ಹಾಲ್ ನಲ್ಲೇ ಸ್ಕೆಚ್‌:  ಪ್ರವೀಣ್ ‌ನೆಟ್ಟಾರು‌ ಹತ್ಯೆಗೂ ಫ್ರಿಡಂ ಕಮ್ಯನಿಟಿ ಹಾಲ್ ನಲ್ಲೇ ಸ್ಕೆಚ್ ರೂಪಿಸಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ‌. ನೆಟ್ಟಾರು ಹತ್ಯೆಗೂ ಮುನ್ನ ಹಾಲ್‌ನಲ್ಲಿ ಸಭೆ ನಡೆದ ಬಗ್ಗೆ ಮಾಹಿತಿ ಸಿಕ್ಕಿದ್ದು, ಇದೇ ಕಾರಣಕ್ಕೆ ಸೆ.6ರಂದು ಫ್ರೀಡಂ ಕಮ್ಯೂನಿಟಿ ಹಾಲ್‌ಗೆ ದಾಳಿ ನಡೆಸಿದ್ದ ಎನ್.ಐ.ಎ, ಪಿಎಫ್‌ಐ ಸಭೆಗಳ ಬಗ್ಗೆ ಸಾಕ್ಷ್ಯ ಸಂಗ್ರಹಿಸಿತ್ತು. 

ಅದೇ ದಿನ ಹಾಲ್‌ನ್ ಟ್ರಸ್ಟಿಗಳಾದ ಅಯ್ಯೂಬ್ ಮತ್ತು‌ ಮಸೂದ್ ಅಗ್ನಾಡಿ ಮನೆಗೂ ಎನ್.ಐ.ಎ ದಾಳಿ ನಡೆಸಿ ಹಾಲ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಫ್ರೀಡಂ ಹಾಲ್ ಟ್ರಸ್ಟ್ ಹಣಕಾಸು ವಹಿವಾಟುಗಳ ‌ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ದಾಖಲೆ‌ ಪತ್ರ, ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿತ್ತು. 

ಪಿಎಫ್ಐ ಸಭೆಗಳ ವೇಳೆ ಪೊಲೀಸರು ಮತ್ತು ಅಪರಿಚಿತರಿಗೆ‌ ನೋ ಎಂಟ್ರಿ ಇದ್ದು, ಹಾಲ್ ಸುತ್ತಮುತ್ತ ಪಿಎಫ್ ಐ ಟೀಂ ಕಣ್ಗಾವಲಿನಲ್ಲಿ ನಡೀತಾ ಇದ್ದ ಗೌಪ್ಯ ಸಭೆಗಳ ಬಗ್ಗೆ ಎನ್.ಐ‌.ಎ ಮಾಹಿತಿ ಸಂಗ್ರಹಿಸಿದೆ. ಪ್ರವೀಣ್ ‌ನೆಟ್ಟಾರು ಹಂತಕರು ‌ಹಾಗೂ ಹಲವು ಮುಖಂಡರು ಹಾಲ್‌ಗೆ ಭೇಟಿ ನೀಡಿದ್ದ ಮಾಹಿತಿ ಪ್ರವೀಣ್ ಹತ್ಯೆ ತನಿಖೆ ವೇಳೆ ಬಹಿರಂಗವಾಗಿದೆ‌.

ಕಮ್ಯೂನಿಟಿ ‌ಹಾಲ್‌ನ ಎರಡು ಮುಖ: ಸಮಾಜಮುಖಿ ಕಾರ್ಯದ ಜೊತೆಗೆ ಫ್ರೀಡಂ ಕಮ್ಯುನಿಟಿ ಹಾಲ್ ಸಮಾಜ ವಿರೋಧಿ ಕಾರ್ಯಗಳ ಅಡ್ಡೆಯಾಗಿತ್ತು ಎಂದು ತಿಳಿದು ಬಂದಿದೆ. ಪಿಎಫ್‌, ಸಿಎಫ್ ಐನ ಹಲವಾರು ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಹಾಲ್‌ನಲ್ಲಿ ಪಿಎಫ್ ಐ ನಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ವನಮಹೋತ್ಸವದಂಥ ಕಾರ್ಯಕ್ರಮ ನಡೆದಿದೆ. ಸಿಎಫ್‌ಐನಿಂದ ಮಕ್ಕಳ ಬೇಸಿಗೆ ಶಿಬಿರದ ಜೊತೆ ಹಲವಾರು ‌ಕಾರ್ಯಕ್ರಮ ನಡೆದಿದ್ದು, ಪಿಎಫ್ಐ ಮತ್ತು ಸಿಎಫ್ ಐನಿಂದ ಹಾಲ್ ನಲ್ಲಿ ಸಮಾಜಮುಖಿ ಕಾರ್ಯಕ್ರಮ ನಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ. ‌ 

ಎನ್‌ಐಎ ತನಿಖೆಯ ಬಿಗ್‌ ನ್ಯೂಸ್‌, ಪಿಎಫ್‌ಐ ಟಾರ್ಗೆಟ್‌ ಆಗಿತ್ತು ಪ್ರಧಾನಿ ಮೋದಿಯ ಪಾಟ್ನಾ ಸಮಾವೇಶ..!

ಅದರ ಜೊತೆಗೆ ಪಿಎಫ್‌ಐನ ರಾಜ್ಯ ಸಮಾವೇಶಗಳು, ಜಿಲ್ಲಾ ಸಮಾವೇಶಗಳ ಆಯೋಜನೆಯಾಗಿದ್ದು, ಸಾಮಾಜಿಕವಾಗಿ ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ‌ಹಲವಾರು ಕಾರ್ಯಕ್ರಮ ನಡೆಸಲಾಗಿದೆ.  ಇದರ ಜೊತೆಗೆ ದೇಶ ವಿರೋಧಿ ಚಟುವಟಿಕೆಗಳ ಅಡ್ಡೆಯಾಗಿದ್ದ ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಗೌಪ್ಯ ಸಭೆಗಳು, ‌ತರಬೇತಿಗಳ ಮೂಲಕ ಸಮಾಜಘಾತುಕ ‌ಚಟುವಟಿಕೆ ನಡೆದಿರೋದು ಇದೀಗ ಬಹಿರಂಗವಾಗಿದೆ‌. 

ಪಿಎಫ್‌ಐ ಪ್ರಮುಖ ನಾಯಕರೇ ಟ್ರಸ್ಟಿಗಳಾಗಿದ್ದ ಕಮ್ಯೂನಿಟಿ ಹಾಲ್‌ಗೂ 2017ರ ಕಲ್ಲಡ್ಕ ಗಲಭೆಗೂ ಲಿಂಕ್ ಇದ್ದು, ಕಲ್ಲಡ್ಕ ಗಲಭೆಯ ಆರೋಪಿಗಳನ್ನ ಕಮ್ಯೂನಿಟಿ ಹಾಲ್ ನಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದರು.‌ ಆಗಿನ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಸುಧೀರ್ ಕುಮಾರ್ ರೆಡ್ಡಿ ‌ನೇತೃತ್ವದ ಕಾರ್ಯಾಚರಣೆ ನಡೆಸಲಾಗಿತ್ತು.

Latest Videos
Follow Us:
Download App:
  • android
  • ios