Asianet Suvarna News Asianet Suvarna News

ಸಲಿಂಗಿ ಎಂದು ಹೀಯಾಳಿಸ್ತಿದ್ದ ಸೀನಿಯರ್ಸ್‌: ಹಾಸ್ಟೆಲ್‌ ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

ಬುಧವಾರ ರಾತ್ರಿ 11.45 ರ ಸುಮಾರಿಗೆ ಹಾಸ್ಟೆಲ್ ಕಟ್ಟಡದಿಂದ ಬಿದ್ದು ದೇಹದ ಹಲವೆಡೆ ತೀವ್ರ ಗಾಯ ಮಾಡಿಕೊಂಡಿದ್ದರು. ಬಳಿಕ, ಕೆಪಿಸಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಬೆಳಗಿನ ಜಾವ 4.30ಕ್ಕೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

first year student of jadavpur university dies after falling from balcony friend alleges ragging ash
Author
First Published Aug 11, 2023, 12:47 PM IST

ಕೋಲ್ಕತ್ತಾ (ಆಗಸ್ಟ್‌ 11, 2023): ದುರಂತ ಘಟನೆಯೊಂದರಲ್ಲಿ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬರು ಮುಖ್ಯ ಹಾಸ್ಟೆಲ್‌ನ ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಮಾಹಿತಿ ನೀಡಿದ್ದು, ಸೀನಿಯರ್ಸ್‌ ರ‍್ಯಾಗಿಂಗ್ ಮಾಡುತ್ತಿದ್ದ ಕಾರಣ ಹಾಗೂ ಗೇ ಅಥವಾ ಸಲಿಂಗಿ ಎಂದು ಹೀಯಾಳಿಸುತ್ತಿದ್ದ ಕಾರಣ ವಿದ್ಯಾರ್ಥಿ ಸೂಸೈಡ್‌ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. 

ಮೃತ ವಿದ್ಯಾರ್ಥಿಯನ್ನು ನಾಡಿಯಾ ಜಿಲ್ಲೆಯ ಬಾಗುಲಾ ಮೂಲದ 18 ವರ್ಷದ ಸ್ವಪ್ನದೀಪ್ ಕುಂದು ಎಂದು ಗುರುತಿಸಲಾಗಿದೆ. ಕುಂದು ಜಾಧವ್‌ಪುರ ವಿಶ್ವವಿದ್ಯಾಲಯದಲ್ಲಿ ಬೆಂಗಾಲಿ (ಗೌರವ) ಪದವಿಪೂರ್ವ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿದ್ದರು. ಬುಧವಾರ ರಾತ್ರಿ 11.45 ರ ಸುಮಾರಿಗೆ ಹಾಸ್ಟೆಲ್ ಕಟ್ಟಡದಿಂದ ಬಿದ್ದು ದೇಹದ ಹಲವೆಡೆ ತೀವ್ರ ಗಾಯ ಮಾಡಿಕೊಂಡಿದ್ದರು. ಬಳಿಕ, ಕೆಪಿಸಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಬೆಳಗಿನ ಜಾವ 4.30ಕ್ಕೆ ಮೃತಪಟ್ಟಿದ್ದಾರೆ.

ಇದನ್ನು ಓದಿ: ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದ ಬೆಂಗಳೂರು ಚಾಯ್‌ವಾಲಾ; ಕಿಡ್ನ್ಯಾಪ್‌ ಮಾಡಿ ಹಣ ಎಗರಿಸಿದ ಸ್ನೇಹಿತರು!

ಇನ್ನು, ಈ ಸಂಬಂಧ ವಿಶ್ವವಿದ್ಯಾನಿಲಯದ ಕುಲಪತಿಯೂ ಆಗಿರುವ ರಾಜ್ಯಪಾಲ ಸಿವಿ ಆನಂದ ಬೋಸ್ ಅವರು ಹಾಸ್ಟೆಲ್‌ಗೆ ಭೇಟಿ ನೀಡಿದ್ದು, ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ವಪ್ನದೀಪ್ ಅವರ ತಂದೆಗೆ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗೆ ಹಾಸ್ಟೆಲ್‌ನ ಕೆಲವು ಹಿರಿಯ ವಿದ್ಯಾರ್ಥಿಗಳು ಕಿರುಕುಳ ನೀಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಗೇ ಅಥವಾ ಸಲಿಂಗಿ ಎಂದು ಆತನನ್ನು ಹೀಯಾಳಿಸಿದ್ದರು. ಈ ಹಿನ್ನೆಲೆ ಆತ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಎಂದು ಹೇಳಲಾಗಿದೆ. 

ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ತನ್ನ ತಾಯಿಗೆ ಕರೆ ಮಾಡಿ ಭಯ ವ್ಯಕ್ತಪಡಿಸಿದ್ದ, ಆತಂಕದಿಂದಿದ್ದ ಎಂದು ಹೇಳಲಾಗಿದೆ. ಹಾಗೂ, ನಂತರ ಅತನ ಫೋನ್‌ ಸ್ವಿಚ್ ಆಫ್ ಆಗಿತ್ತು. ಬೇರೆ ಯಾರೊಂದಿಗಾದರೂ ಮಾತನಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆಹಚ್ಚಲು ನಾವು ಅವರ ಕರೆ ಪಟ್ಟಿಯನ್ನು ಪರಿಶೀಲಿಸುತ್ತಿದ್ದೇವೆ" ಎಂದು ಅಧಿಕಾರಿ ಹೇಳಿದರು. ಅಲ್ಲದೆ, ಆತನ ರೂಮ್‌ಮೇಟ್‌ಗಳ ಮೊಬೈಲ್ ಫೋನ್‌ಗಳನ್ನು ಸಹ ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದೂ ವರದಿಯಾಗಿದೆ.

ಇದನ್ನೂ ಓದಿ: 70 ಸಾವಿರ ರೂ. ಗೆ ಖರೀದಿಸಿದ ಪತ್ನಿಯನ್ನು ಕೊಲೆ ಮಾಡಿ ಕಾಡಿಗೆ ಎಸೆದ ಪತಿ: ಕಾರಣ ಹೀಗಿದೆ..!

ಹಿರಿಯ ವಿದ್ಯಾರ್ಥಿಗಳು ಆತನನ್ನು ಸಲಿಂಗಕಾಮಿ ಎಂದು ಕರೆಯಲು ಪ್ರಾರಂಭಿಸಿದ ನಂತರ ಹುಡುಗ ಮಾನಸಿಕವಾಗಿ ತೊಂದರೆಗೀಡಾಗಿದ್ದನೆಂದು ತೋರುತ್ತದೆ. ಈ ಬಗ್ಗೆ ಅವನು ಅಸಮಾಧಾನವನ್ನು ತೋರಿಸಲು ಪ್ರಾರಂಭಿಸಿದ ಸಾಕ್ಷಿಗಳಿವೆ. ಅವನು ಬುಧವಾರ ಕನಿಷ್ಠ ನಾಲ್ಕು ಬಾರಿ ತನ್ನ ತಾಯಿಗೆ ಕರೆ ಮಾಡಿ ಮತ್ತು ಸಂಜೆ ತನ್ನ ಫೇಸ್‌ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದನು ಎಂದೂ ಅಧಿಕಾರಿ ಪಿಟಿಐಗೆ ತಿಳಿಸಿದರು. ತನ್ನ ಮಗ ರ‍್ಯಾಗಿಂಗ್‌ಗೆ ಬಲಿಯಾಗಿದ್ದಾನೆ ಎಂಬ ಸ್ವಪ್ನೋದೀಪ್ ಅವರ ತಂದೆಯ ಆರೋಪದ ಮೇಲೆ, ಹಾಸ್ಟೆಲ್‌ನ ಉಸ್ತುವಾರಿ ಮತ್ತು ಇತ್ತೀಚೆಗೆ ಅಲ್ಲಿಯೇ ಉಳಿದುಕೊಂಡಿರುವ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದೇವೆ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

ಈ ಮಧ್ಯೆ, ರ‍್ಯಾಗಿಂಗ್ ಆರೋಪಕ್ಕೆ ಪುಷ್ಠಿ ನೀಡುವಂತೆ ಜಾಧವ್‌ಪುರ ವಿಶ್ವವಿದ್ಯಾನಿಲಯದ ಮತ್ತೊಬ್ಬ ಪ್ರಥಮ ವರ್ಷದ ವಿದ್ಯಾರ್ಥಿ ಫೇಸ್ಬುಕ್ ಪೋಸ್ಟ್‌ನಲ್ಲಿ "ಕೆಲವು ಸೀನಿಯರ್ಸ್‌ಗಳ ರ‍್ಯಾಗಿಂಗ್ ತನ್ನ ಸ್ನೇಹಿತ ಸ್ವಪ್ನೋದೀಪ್ ಸಾವಿನ ಹಿಂದೆ ಇದೆ ಎಂದು ಆರೋಪಿಸಿದ್ದಾನೆ.

ಇದನ್ನೂ ಓದಿ: ಬಾಯ್‌ಫ್ರೆಂಡ್‌ ಕೊಲೆ ಮಾಡಿ, ಮೃತದೇಹ ಸೂಟ್‌ಕೇಸ್‌ನಲ್ಲಿ ತುಂಬಿ ಸಮುದ್ರಕ್ಕೆ ಎಸೆದ ಸಲಿಂಗಕಾಮಿ ಯೂಟ್ಯೂಬರ್‌

Follow Us:
Download App:
  • android
  • ios