ಬಾಯ್‌ಫ್ರೆಂಡ್‌ ಕೊಲೆ ಮಾಡಿ, ಮೃತದೇಹ ಸೂಟ್‌ಕೇಸ್‌ನಲ್ಲಿ ತುಂಬಿ ಸಮುದ್ರಕ್ಕೆ ಎಸೆದ ಸಲಿಂಗಕಾಮಿ ಯೂಟ್ಯೂಬರ್‌

ಡೇನಿಯಲ್ ಸ್ಯಾಂಚೊ ಬ್ರಾಂಚಾಲೊ ತನ್ನ ಬಾಯ್‌ಫ್ರೆಂಡ್‌ ಎಡ್ವಿನ್ ಅರ್ರಿಯೆಟಾ ಆರ್ಟೆಗಾವನ್ನು ಕೊಂದು, ನಂತರ ಅವನ ದೇಹವನ್ನು ಕತ್ತರಿಸಿ, ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟು ಸಮುದ್ರಕ್ಕೆ ಎಸೆದಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

youtuber accused of murdering boyfriend hid chopped up body in suitcase ash

ಬ್ಯಾಂಕಾಕ್‌ (ಆಗಸ್ಟ್‌ 8, 2023): ಥಾಯ್ಲೆಂಡ್‌ನಲ್ಲಿ ಯೂಟ್ಯೂಬ್ ಸೆಲೆಬ್ರಿಟಿ ಚೆಫ್‌ನನ್ನು ಕೊಲೆ ಆರೋಪದ ಮೇಕೆ ಬಂಧಿಸಲಾಗಿದೆ. ಪೊಲೀಸರು ಆರೋಪಿ ವಿರುದ್ದ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದ್ದಾರೆ. 29 ವರ್ಷದ ಯೂಟ್ಯೂಬರ್‌ ಡೇನಿಯಲ್ ಸ್ಯಾಂಚೊ ಬ್ರಾಂಚಾಲೋ ಅವರ ತಂದೆ ಸ್ಪ್ಯಾನಿಷ್‌ನ ಖ್ಯಾತ ನಟ ಎಂದೂ ಗುರುತಿಸಲಾಗಿದೆ.

ಡೇನಿಯಲ್ ಸ್ಯಾಂಚೊ ಬ್ರಾಂಚಾಲೊ ತನ್ನ ಬಾಯ್‌ಫ್ರೆಂಡ್‌ ಎಡ್ವಿನ್ ಅರ್ರಿಯೆಟಾ ಆರ್ಟೆಗಾವನ್ನು ಕೊಂದು, ನಂತರ ಅವನ ದೇಹವನ್ನು ಕತ್ತರಿಸಿ, ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟು ಸಮುದ್ರಕ್ಕೆ ಎಸೆದಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅಲ್ಲದೆ, ಕಳೆದ ವಾರ ಥೈಲ್ಯಾಂಡ್‌ನ ಕೊಹ್ ಫಂಗ್ನಾನ್ ದ್ವೀಪದಲ್ಲಿ ಡೇನಿಯಲ್ ಪ್ಲಾಸ್ಟಿಕ್ ಸರ್ಜನ್ ಆಗಿದ್ದ ತನ್ನ ಬಾಯ್‌ಫ್ರೆಂಡ್‌ ಹೊಡೆದು ಕೊಂದಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ. ಆರ್ಟೆಗಾ ಅವರ ಸೊಂಟ ಮತ್ತು ತೊಡೆಗಳು ಸೇರಿದಂತೆ ದೇಹದ ಭಾಗಗಳನ್ನು ಆಗಸ್ಟ್ 3 ರಂದು ಕಸದ ರಾಶಿಯಲ್ಲಿ ಸ್ಥಳೀಯರು ಕಂಡುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಇದನ್ನು ಓದಿ: ಹಾಡಹಗಲೇ ಮಾರ್ಕೆಟ್‌ನಲ್ಲಿ ಕೊಡಲಿಯಿಂದ ಪತ್ನಿ ಕೊಲೆ ಮಾಡಿದ ಪಾಪಿ ಪತಿ: ವಿಡಿಯೋ ವೈರಲ್‌

ಸಾಮಾಜಿಕ ಮಾಧ್ಯಮದಲ್ಲಿ 12,400 ಫಾಲೋವರ್‌ಗಳನ್ನು ಹೊಂದಿರುವ 29 ವರ್ಷದ ಡೇನಿಯಲ್ ಜುಲೈ 31 ರಿಂದ ಥಾಯ್ ರೆಸಾರ್ಟ್‌ನಲ್ಲಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಬಂಧದಲ್ಲಿದ್ದ ಕೊಲಂಬಿಯಾದ ಬಾಯ್‌ಫ್ರೆಂಡ್‌ ಜತೆ ಜಗಳವಾಡಿದ ಬಳಿಕ ಈ ಕೃತ್ಯವೆಸಗಿದ್ದಾನೆ ಎಂದೂ ತಿಳಿದುಬಂದಿದೆ. ಈ ಜೋಡಿ ಪಾರ್ಟಿಯಲ್ಲಿ ಭಾಗವಹಿಸಲು ದ್ವೀಪಕ್ಕೆ ಹೋಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  "ಸೆಕ್ಸ್ ಮತ್ತು ಹಣ" ದ ವಿಚಾರದಲ್ಲಿ ಜಗಳವಾಡಿ ನಂತರ ಆತನನ್ನು ಕೊಎಲ ಮಾಡಿ 14 ತುಂಡುಗಳಾಗಿ ಎಸೆದಿದ್ದಾನೆ. ಬಳಿಕ, ಆತ ಪಾರ್ಟಿ ಮಾಡಲು ಸ್ನೇಹಿತರೊಂದಿಗೆ ತೆರಳಿದ್ದಾನೆ. ಬಳಿಕ, ಅತ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ ಎಮದೂ ಪೊಲೀಸರು ಹೇಳಿದ್ದಾರೆ. 

ಡೇನಿಯಲ್ ಎಡ್ವಿನ್ ಮೃತದೇಹವನ್ನು ಸಮುದ್ರಕ್ಕೆ ಎಸೆದಿದ್ದು, ಅಲ್ಲಿ ಅವರು ಕಯಾಕ್ ಮತ್ತು ದ್ವೀಪದಾದ್ಯಂತ ಇತರ ಸ್ಥಳಗಳನ್ನು ಬಳಸಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ. ಆಗಸ್ಟ್‌ 6 ರಂದು ಮೃತದೇಹ ಪತ್ತೆಯಾಗಿದ್ದು, ತಲೆ ಹಾಗೂ ಕೈಗಳನ್ನು ಸಮುದ್ರದ ಆಳದಲ್ಲಿ ಸಿಕ್ಕಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಸ್ಪ್ಯಾನಿಷ್‌ ಮೂಲದ ಯೂಟ್ಯೂಬರ್‌ನನ್ನು ಸದ್ಯ ಪೊಲೀಸರು ಬಂಧಿಸಿದ್ದು, ನಂತರ    ಥೈಲ್ಯಾಂಡ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. 

ಇದನ್ನೂ ಓದಿ: Delhi Accident: 2 ಟ್ರಕ್‌ ನಡುವೆ ಸಿಲುಕಿ ನಜ್ಜುಗುಜ್ಜಾದ ಕಾರು: ಮಹಿಳೆ ಬಲಿ, ಮತ್ತೊಬ್ಬರ ಸ್ಥಿತಿ ಗಂಭೀರ

ಇನ್ನು, ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಲೆಫ್ಟಿನೆಂಟ್ ಜನರಲ್ ಸುರಪಾಂಗ್ ಥಾನೊಮ್ಜಿತ್ ಮಾತನಾಡಿದ್ದು, "ತನಿಖಾಧಿಕಾರಿಗಳು ಆರೋಪಿ ಬುಕ್ ಮಾಡಿದ ಹೋಟೆಲ್ ಕೋಣೆಯಲ್ಲಿ ಮೃತ ಬಾಯ್‌ಫ್ರೆಂಡ್‌ನ ದೇಹದ ಕುರುಹುಗಳನ್ನು ಕಂಡುಕೊಂಡಿದ್ದಾರೆ." ಅಲ್ಲದೆ, ದಂಪತಿ ಜುಲೈ 31 ರಿಂದ ಆಗಸ್ಟ್ 3 ರ ನಡುವೆ ಹೋಟೆಲ್ ಅನ್ನು ಬುಕ್ ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಪತ್ತೆಹಚ್ಚಿದ್ದಾರೆ. ಅಲ್ಲದೆ, ನಂತರ ಡೇನಿಯೆಲ್‌, ಹಳೆಯ ಹೋಟೆಲ್‌ ಬುಕ್ ಮಾಡಿದ ಸ್ಥಳದಿಂದ ಸಾಕಷ್ಟು ದೂರದಲ್ಲಿರುವ ಮತ್ತೊಂದು ಹೋಟೆಲ್‌ಗೆ ಶಿಫ್ಟ್‌ ಆಗಿದ್ದಾನೆ.

ಅಷ್ಟೇ ಅಲ್ಲದೆ, ಆತ ಚಾಕು, ಪ್ಲಾಸ್ಟಿಕ್‌ ಚೀಲ, ಮತ್ತು ಕ್ಲೀನಿಂಗ್ ಲಿಕ್ವಿಡ್‌ ಅನ್ನು ಖರೀದಿಸಿದ್ದರು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಈ ಮಧ್ಯೆ, ಮೃತ ಎಡ್ವಿನ್‌ನ ಬಾಕ್ಸರ್ ಶಾರ್ಟ್ಸ್, ಕಪ್ಪು ಟಿ-ಶರ್ಟ್ ಮತ್ತು ಶಾರ್ಟ್ಸ್ ಸೇರಿದಂತೆ ಆತನ ಬಟ್ಟೆಗಳನ್ನು ಮೃತದೇಹದ ಭಾಗಗಳನ್ನು ಹೊಂದಿದ್ದ ಪ್ಲಾಸ್ಟಿಕ್‌ ಕವರ್‌ಗೆ ಮುಚ್ಚಲಾಗಿತ್ತು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಬಾಲಕಿ ಮೇಲೆ ಗ್ಯಾಂಗ್‌ರೇಪ್‌ ಮಾಡಿ ಸುಟ್ಟು ಕೊಂದ ಪಾಪಿಗಳು: ಮನನೊಂದ ತಂದೆ ಚಿತೆಗೆ ಹಾರಿ ಆತ್ಮಹತ್ಯೆಗೆ ಯತ್ನ

Latest Videos
Follow Us:
Download App:
  • android
  • ios