ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದ ಬೆಂಗಳೂರು ಚಾಯ್‌ವಾಲಾ; ಕಿಡ್ನ್ಯಾಪ್ ಮಾಡಿ ಹಣ ಎಗರಿಸಿದ ಸ್ನೇಹಿತರು!
ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ರೂ ಗೆದ್ದ ಚಹಾ ಮಾರಾಟಗಾರನನ್ನು ಸ್ನೇಹಿತರು ಕಿಡ್ನ್ಯಾಪ್ ಮಾಡಿದ್ದಾರೆ, ಹಾಗೂ ಅವರ ಖಾತೆಯಿಂದ 15 ಲಕ್ಷ ರೂ. ಹಣವನ್ನು ಕದ್ದಿದ್ದಾರೆ ಎಂದು ಚಹಾ ಮಾರಾಟಗಾರ ದೂರು ನೀಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ನವದೆಹಲಿ (ಆಗಸ್ಟ್ 10, 2023): ಆಗಸ್ಟ್ 1 ರಂದು, ಬೆಂಗಳೂರಿನಲ್ಲಿ 32 ವರ್ಷದ ರಸ್ತೆಬದಿಯ ಚಹಾ ಮಾರಾಟಗಾರ ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ರೂ. ಗಳನ್ನು ಗೆದ್ದಿದ್ದರು. ಇದರಿಂದ, ಅವರು ತೀವ್ರ ಖುಷಿಯಲ್ಲಿದ್ದರು. ಆದರೆ ಕೆಲವು ದಿನಗಳ ನಂತರ ಅವರ ಸಂತೋಷ ಬಹುತೇಕ ಮಾಯವಾಗಿದೆ. ಇದಕ್ಕೆ ಕಾರಣ ಅವರ ಸ್ನೇಹಿತರು.
ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ರೂ ಗೆದ್ದ ಚಹಾ ಮಾರಾಟಗಾರನನ್ನು ಸ್ನೇಹಿತರು ಕಿಡ್ನ್ಯಾಪ್ ಮಾಡಿದ್ದಾರೆ, ಹಾಗೂ ಅವರ ಖಾತೆಯಿಂದ 15 ಲಕ್ಷ ರೂ. ಹಣವನ್ನು ಕದ್ದಿದ್ದಾರೆ ಎಂದು ಚಹಾ ಮಾರಾಟಗಾರ ದೂರು ನೀಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: 70 ಸಾವಿರ ರೂ. ಗೆ ಖರೀದಿಸಿದ ಪತ್ನಿಯನ್ನು ಕೊಲೆ ಮಾಡಿ ಕಾಡಿಗೆ ಎಸೆದ ಪತಿ: ಕಾರಣ ಹೀಗಿದೆ..!
ಹಣ ಕಳೆದುಕೊಂಡ ಟೀ ಮಾರಾಟಗಾರನನ್ನು ಬೆಂಗಳೂರಿನ ತ್ಯಾಗರಾಜನಗರ ನಿವಾಸಿ ತಿಲಕ್ ಎಂ ಮಣಿಕಂಠ ಎಂದು ಗುರುತಿಸಿರುವ ಪೊಲೀಸರು, ಅಪಹರಣ, ಸುಲಿಗೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಆರೋಪಗಳಡಿ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಜುಲೈ 30 ರಂದು ಮಣಿಕಂಠ ತನ್ನ ಸ್ನೇಹಿತರೊಂದಿಗೆ ಗೋವಾಕ್ಕೆ ಹೋಗಿದ್ದು, ಈ ವೇಳೆ ಅವರು 4 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿದ್ದರು.
ಆಗಸ್ಟ್ 1 ರಂದು ಪಣಜಿಯ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೋದಲ್ಲಿ ಮಣಿಕಂಠ 25 ಲಕ್ಷ ರೂ. ಹಣ ಗೆದ್ದಿದ್ದರೂ, ಈ ಬಗ್ಗೆ ತನ್ನ ಸ್ನೇಹಿತರಿಗೆ ಸುದ್ದಿ ಬಹಿರಂಗಪಡಿಸಲಿಲ್ಲ. ಹಾಗೂ, ಆ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೂ, ಈ ಬಗ್ಗೆ ಮಾಹಿತಿ ನೀಡಿದ ಮಣಿಕಂಠ, "ನಾನು ಅಲ್ಲಿದ್ದ ನನ್ನ ಸ್ನೇಹಿತರಿಗೆ ತಿಳಿಸಲಿಲ್ಲ. ನಾನು ಗೌಪ್ಯತೆಯನ್ನು ಕಾಪಾಡಿಕೊಂಡಿದ್ದೇನೆ" ಎಂದು ಮಾಧ್ಯಮವೊಂದಕ್ಕೆ ತಿಳಿಸಿದರು.
ಇದನ್ನೂ ಓದಿ: ಬಾಯ್‌ಫ್ರೆಂಡ್ ಕೊಲೆ ಮಾಡಿ, ಮೃತದೇಹ ಸೂಟ್‌ಕೇಸ್‌ನಲ್ಲಿ ತುಂಬಿ ಸಮುದ್ರಕ್ಕೆ ಎಸೆದ ಸಲಿಂಗಕಾಮಿ ಯೂಟ್ಯೂಬರ್
ಆದರೆ, ಆಗಸ್ಟ್ 5 ರಂದು, ಅಂದರೆ ಅವರು ಬೆಂಗಳೂರಿಗೆ ಹಿಂದಿರುಗಿದ ಒಂದು ದಿನದ ನಂತರ, ಅವರು ಅಂಗಡಿಯೊಂದರ ಬಳಿ ನಿಂತು ಧೂಮಪಾನ ಮಾಡುತ್ತಿದ್ದಾಗ, ಅವರ ಸ್ನೇಹಿತರಾದ ಕಾರ್ತಿಕ್, ಪಾಂಡು, ಈಶ್ವರ್, ನಿಶ್ಚಲ್ ಮತ್ತು ಇತರರು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಸ್ವಲ್ಪ ಸಮಯ ಕಾಯುವಂತೆ ಕೇಳಿದಾಗ, ಮಣಿಕಂಠ ಅವರನ್ನು
ಬಲವಂತವಾಗಿ ಕಾರಿನಲ್ಲಿ ಹತ್ತಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಸ್ಥಳಕ್ಕೆ ಕರೆದೊಯ್ದು ಮೊಬೈಲ್ ಬ್ಯಾಂಕಿಂಗ್ ಮೂಲಕ ಅವರ ಬ್ಯಾಂಕ್ ಖಾತೆಯಿಂದ 15 ಲಕ್ಷ ರೂ.ಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹಾಗೂ, ಆಗಸ್ಟ್ 5 ರಂದು ಬೆಳಗ್ಗೆ 11 ರಿಂದ ಆಗಸ್ಟ್ 6 ರ ಬೆಳಿಗ್ಗೆ 8 ರ ನಡುವೆ ಆರೋಪಿಗಳು ಮಣಿಕಂಠನನ್ನು ಹಲವಾರು ಪ್ರತ್ಯೇಕ ಸ್ಥಳಗಳಿಗೆ ಬಲವಂತವಾಗಿ ಸಾಗಿಸಿದರು ಮತ್ತು ಪೊಲೀಸರಿಗೆ ತಿಳಿಸದಂತೆ ಎಚ್ಚರಿಕೆ ನೀಡಿದರು. ಅಂತಿಮವಾಗಿ ನೆಲಮಂಗಲದ ರೆಸಾರ್ಟ್ ಕೋಣೆಯನ್ನು ಆತನನ್ನು ಕೂಡಿ ಹಾಕಿದರು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಹಾಡಹಗಲೇ ಮಾರ್ಕೆಟ್‌ನಲ್ಲಿ ಕೊಡಲಿಯಿಂದ ಪತ್ನಿ ಕೊಲೆ ಮಾಡಿದ ಪಾಪಿ ಪತಿ: ವಿಡಿಯೋ ವೈರಲ್
ಈ ಸಂಬಂಧ ಆಗಸ್ಟ್ 6 ರಂದು ಮಣಿಕಂಠ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಹನುಮಂತನಗರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 365 (ಅಪಹರಣ), 384 (ಸುಲಿಗೆ), 347 (ಆಸ್ತಿಯನ್ನು ಸುಲಿಗೆ ಮಾಡಲು ತಪ್ಪಾದ ಬಂಧನ), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ಪತ್ತೆಗೆ ತಂಡ ನಿಗಾ ಇರಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Delhi Accident: 2 ಟ್ರಕ್ ನಡುವೆ ಸಿಲುಕಿ ನಜ್ಜುಗುಜ್ಜಾದ ಕಾರು: ಮಹಿಳೆ ಬಲಿ, ಮತ್ತೊಬ್ಬರ ಸ್ಥಿತಿ ಗಂಭೀರ