70 ಸಾವಿರ ರೂ. ಗೆ ಖರೀದಿಸಿದ ಪತ್ನಿಯನ್ನು ಕೊಲೆ ಮಾಡಿ ಕಾಡಿಗೆ ಎಸೆದ ಪತಿ: ಕಾರಣ ಹೀಗಿದೆ..!

ತನ್ನ ಪತ್ನಿಯನ್ನು 70,000 ರೂ. ಗೆ ಖರೀದಿಸಿದ ನಂತರ ಆಕೆಯ ವರ್ತನೆಯಿಂದ ಅತೃಪ್ತಿಗೊಂಡು ಕತ್ತು ಹಿಸುಕಿ ಆಕೆಯ ಶವವನ್ನು ಪತಿ ಎಸೆದಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ. 

man kills wife he bought for 70000 dumps body in forest cops ash

ಹೊಸದಿಲ್ಲಿ (ಆಗಸ್ಟ್‌ 10, 2023): ಪತಿಯೊಬ್ಬ ತನ್ನ ಪತ್ನಿಯನ್ನು 70,000 ರೂ. ಗೆ ಖರೀದಿಸಿದ ನಂತರ ಆಕೆಯ ವರ್ತನೆಯಿಂದ ಅತೃಪ್ತಿಗೊಂಡು ಕತ್ತು ಹಿಸುಕಿ ಆಕೆಯ ಶವವನ್ನು ಎಸೆದಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ನೈಋತ್ಯ ದೆಹಲಿಯ ಫತೇಪುರ್ ಬೆರಿಯ ಅರಣ್ಯ ಪ್ರದೇಶದಲ್ಲಿ ಪತ್ನಿಯನ್ನು ಎಸೆದಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಈ ಸಂಬಂಧ ಆರೋಪಿ ಪತಿ ಧರಂವೀರ್ ಮತ್ತು ಕೊಲೆಗೆ ಸಹಾಯ ಮಾಡಿದ ಅರುಣ್‌ ಮತ್ತು ಸತ್ಯವಾನ್ ಎಂಬ ಇತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಶನಿವಾರ ಫತೇಪುರ್ ಬೇರಿಯ ಝೀಲ್ ಖುರ್ದ್ ಗಡಿಯ ಬಳಿಯ ಕಾಡಿನಲ್ಲಿ ಮಹಿಳೆಯ ಶವ ಪತ್ತೆಯಾದ ಬಗ್ಗೆ ಪಿಸಿಆರ್ ಕರೆ ಸ್ವೀಕರಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಪಡಿಸಿಕೊಂಡರು ಎಂದೂ ಪೊಲೀಸ್ ಉಪ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ತಿಳಿಸಿದ್ದಾರೆ. ಬಳಿಕ, ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು ಮತ್ತು ತಾಂತ್ರಿಕ ಹಾಗೂ, ಹಸ್ತಚಾಲಿತ ಕಣ್ಗಾವಲು ಮೂಲಕ, ಶನಿವಾರ ಮುಂಜಾನೆ 1.40 ರ ಸುಮಾರಿಗೆ ಆಟೋರಿಕ್ಷಾದ ಚಲನೆಯು ಅನುಮಾನಾಸ್ಪದವಾಗಿದೆ ಎಂದು ಅವರು ಕಂಡುಕೊಂಡರು.

ಇದನ್ನು ಓದಿ: ಬಾಯ್‌ಫ್ರೆಂಡ್‌ ಕೊಲೆ ಮಾಡಿ, ಮೃತದೇಹ ಸೂಟ್‌ಕೇಸ್‌ನಲ್ಲಿ ತುಂಬಿ ಸಮುದ್ರಕ್ಕೆ ಎಸೆದ ಸಲಿಂಗಕಾಮಿ ಯೂಟ್ಯೂಬರ್‌

ಬಳಿಕ, ಆಟೋರಿಕ್ಷಾದ ಮಾರ್ಗವನ್ನು ಟ್ರ್ಯಾಕ್ ಮಾಡಿ ಅದರ ನೋಂದಣಿ ಸಂಖ್ಯೆಯನ್ನು ಗುರುತಿಸಲಾಗಿದೆ. ಅದರ ಚಾಲಕ ಛತ್ತರ್‌ಪುರ ನಿವಾಸಿ ಅರುಣ್‌ನನ್ನು ಗಡಾಯಿಪುರ ಬ್ಯಾಂಡ್ ರಸ್ತೆ ಬಳಿ ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಧರ್ಮವೀರ್ ಅವರ ಪತ್ನಿ ಸ್ವೀಟಿ ಎಂದು ಅರುಣ್ ಗುರುತಿಸಿದ್ದಾರೆ. ಅಲ್ಲದೆ, ತಾನು ಮತ್ತು  ಸಂಬಂಧಿಕರು ಹಾಗೂ ನಂಗ್ಲೋಯಿ ನಿವಾಸಿಗಳಾದ ಧರಂವೀರ್ ಮತ್ತು ಸತ್ಯವಾನ್ ಅವರು ಹರ್ಯಾಣ ಗಡಿಯಲ್ಲಿ ಸ್ವೀಟಿಯನ್ನು ಕತ್ತು ಹಿಸುಕಿ ಕೊಂದು ಶವವನ್ನು ಕಾಡಿನಲ್ಲಿ ಎಸೆದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆ ಪ್ರದೇಶದ ಭೂಗೋಳದ ಬಗ್ಗೆ ತನಗೆ ತಿಳಿದಿತ್ತು ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೆ, ಆರೋಪಿಯು ಅಪರಾಧ ಮತ್ತು ದೇಹವನ್ನು ವಿಲೇವಾರಿ ಮಾಡಲು ಅರಣ್ಯ ಪ್ರದೇಶವನ್ನು ಆರಿಸಿಕೊಂಡಿದ್ದಾರೆ ಎಂದೂ ಚಾಲಕ ಹೇಳಿದರು. ತನ್ನ ಹೆಂಡತಿಯ ವರ್ತನೆಯಿಂದ ಧರಂವೀರ್‌ಗೆ ಬೇಸರವಿತ್ತು ಎಂದು ಅರುಣ್ ಹೇಳಿದ್ದಾರೆ. ಆಕೆ, ಯಾವುದೇ ಮಾಹಿತಿಯಿಲ್ಲದೆ ತಿಂಗಳುಗಟ್ಟಲೆ ಮನೆಯಿಂದ ಓಡಿಹೋಗುತ್ತಿದ್ದಳು ಎಂದೂ ಚಾಲಕ ಹೇಳಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಮಾರ್ಕೆಟ್‌ನಲ್ಲಿ ಕೊಡಲಿಯಿಂದ ಪತ್ನಿ ಕೊಲೆ ಮಾಡಿದ ಪಾಪಿ ಪತಿ: ವಿಡಿಯೋ ವೈರಲ್‌

ಇನ್ನು, ಮಹಿಳೆಯೊಬ್ಬರಿಗೆ 70,000 ರೂ. ಪಾವತಿಸಿ ಧರ್ಮವೀರ್ ವಿವಾಹವಾಗಿರುವುದರಿಂದ ಮೃತ ಮಹಿಳೆಯ ಪೋಷಕರ ಬಗ್ಗೆ ಅಥವಾ ಕುಟುಂಬದ ಹಿನ್ನೆಲೆ ಯಾರಿಗೂ ತಿಳಿದಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ ಎಂದೂ ಡಿಸಿಪಿ ಹೇಳಿದರು. ಸ್ವೀಟಿ ತನ್ನ ಹೆತ್ತವರ ಬಗ್ಗೆ ಅಥವಾ ಕುಟುಂಬದ ಸದಸ್ಯರ ಬಗ್ಗೆ ಎಂದಿಗೂ ಮಾತನಾಡಲಿಲ್ಲ ಎಂದು ಆರೋಪಿ ಹೇಳಿದ್ದಾರೆ. ಆದರೆ, ತಾನು ಬಿಹಾರದ ಪಾಟ್ನಾ ಮೂಲದವಳು ಎಂದು ಮಾತ್ರ ಹೇಳಿದ್ದಾಳೆ ಎಂದೂ ಪೊಲೀಸರು ತಿಳಿಸಿದ್ದಾರೆ. ಮಹಿಳೆ ಹತ್ಯೆಗೆ ಸಂಬಂಧಿಸಿದಂತೆ ಫತೇಪುರ್ ಬೆರಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302 (ಕೊಲೆ), 201 (ಅಪರಾಧದ ಪುರಾವೆಗಳ ಕಣ್ಮರೆ ಅಥವಾ ತಪ್ಪು ಮಾಹಿತಿ ನೀಡುವುದು) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದೂ ಅವರು ಹೇಳಿದರು.

ಇನ್ನೊಂದೆಡೆ, ಅಪರಾಧ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಆರೋಪಿಗಳು ಮಹಿಳೆಯನ್ನು ರೈಲ್ವೇ ನಿಲ್ದಾಣಕ್ಕೆ ಬಿಡುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: Delhi Accident: 2 ಟ್ರಕ್‌ ನಡುವೆ ಸಿಲುಕಿ ನಜ್ಜುಗುಜ್ಜಾದ ಕಾರು: ಮಹಿಳೆ ಬಲಿ, ಮತ್ತೊಬ್ಬರ ಸ್ಥಿತಿ ಗಂಭೀರ

ಮೃತ ಮಹಿಳೆಯ ಪತಿ ಆಕೆಯ ಪರಿಚಯಸ್ಥರಿಗೆ ಹಣ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ.ಹಾಗೂ, ಆ ಮಹಿಳೆ ತನ್ನ ಗಂಡನ ಮನೆಯನ್ನು ತೊರೆದ ನಂತರ ಎಲ್ಲಿಗೆ ಹೋಗುತ್ತಿದ್ದಳು ಎಂಬುದು ಸಹ ಸ್ಪಷ್ಟವಾಗಿಲ್ಲ, ಈ ಸಂಗತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲಕಿ ಮೇಲೆ ಗ್ಯಾಂಗ್‌ರೇಪ್‌ ಮಾಡಿ ಸುಟ್ಟು ಕೊಂದ ಪಾಪಿಗಳು: ಮನನೊಂದ ತಂದೆ ಚಿತೆಗೆ ಹಾರಿ ಆತ್ಮಹತ್ಯೆಗೆ ಯತ್ನ

Latest Videos
Follow Us:
Download App:
  • android
  • ios